ಹುಣಶೆಟ್ಟಿಕೊಪ್ಪ ಜಾತ್ರೆಯಲ್ಲಿ ಯುವಕನ ಕೊಲೆ; ಠಾಣೆ ಮುಂದೆ ಶವ ಇಟ್ಟು ಸಿದ್ಧಿ ಸಮುದಾಯದಿಂದ ಪ್ರತಿಭಟನೆ

| Updated By: Rakesh Nayak Manchi

Updated on: Feb 26, 2024 | 2:54 PM

ಬೈಕ್ ಓವರ್ ಟೇಕ್ ವಿಷಯದಲ್ಲಿ ಆರು ಮಂದಿ ಇದ್ದ ತಂಡವೊಂದು ಯುವಕನೊಬ್ಬನ್ನ ಮೇಲೆ ಹಲ್ಲೆ ನಡೆಸಿತ್ತು. ಹಲ್ಲೆಯಿಂದ ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದನು. ಈ ಘಟನೆ ಹುಣಶೆಟ್ಟಿಕೊಪ್ಪ ಜಾತ್ರೆಯಲ್ಲಿ ನಡೆದಿತ್ತು. ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಅತ್ಯಾಪ್ತರೊಬ್ಬರ ಪುತ್ರನ ವಿರುದ್ಧ ಈ ಕೊಲೆ ಆರೋಪ ಕೇಳಿಬಂದಿದೆ.

ಹುಣಶೆಟ್ಟಿಕೊಪ್ಪ ಜಾತ್ರೆಯಲ್ಲಿ ಯುವಕನ ಕೊಲೆ; ಠಾಣೆ ಮುಂದೆ ಶವ ಇಟ್ಟು ಸಿದ್ಧಿ ಸಮುದಾಯದಿಂದ ಪ್ರತಿಭಟನೆ
ಹುಣಶೆಟ್ಟಿಕೊಪ್ಪ ಜಾತ್ರೆಯಲ್ಲಿ ಯುವಕನ ಕೊಲೆ; ಠಾಣೆ ಮುಂದೆ ಶವ ಇಟ್ಟು ಸಿದ್ಧಿ ಸಮುದಾಯದಿಂದ ಪ್ರತಿಭಟನೆ
Follow us on

ಕಾರವಾರ, ಫೆ.26: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (Yellapur) ತಾಲೂಕಿನ ಹುಣಶೆಟ್ಟಿಕೊಪ್ಪ ಜಾತ್ರೆಯಲ್ಲಿ ನಡೆದ ಪ್ರಜ್ವಲ್ ಎಂಬ ಯುವಕನ ಕೊಲೆ (Murder) ಪ್ರಕರಣದ ಸಂಬಂಧ ಯಲ್ಲಾಪುರ ಠಾಣೆ ಮುಂದೆ ಶವ ಇಟ್ಟು ಸಿದ್ಧಿ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು. ಅಲ್ಲದೆ, ಬಿಜೆಪಿ (BJP) ಮುಖಂಡರೊಬ್ಬರ ಪುತ್ರನ ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಆರೋಪಿಯನ್ನು ಕೂಡಲೇ ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಅವರ ಅತ್ಯಾಪ್ತರಾಗಿರುವ ವಿಜಯ ಮಿರಾಸಿ ಪುತ್ರ ಅನಿಕೇತ್ ಮಿರಾಸಿ ವಿರುದ್ಧ ಕೊಲೆ ಆರೋಪ ಮಾಡಲಾಗಿದ್ದು, ಪ್ರಮುಖ ಆರೋಪಿ ಅನಿಕೇತ ಬಂಧಿಸುವಂತೆ ಆಗ್ರಹಿಸಲಾಗಿದೆ.

ಇದನ್ನೂ ಓದಿ: ಧಾರವಾಡ: ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಆತ್ಮಹತ್ಯೆಗೆ ಶರಣಾದ ತಾಯಿ

ಪ್ರಕರಣದಲ್ಲಿ ಎಂಟು ಮಂದಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು ಈ ಪೈಕಿ ಏಳು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅನಿಕೇತನನ್ನು ಬಂಧಿಸಿಲ್ಲ ಎಂದು ಆರೋಪಿಸಲಾಗಿದೆ. ರಾಜಕೀಯ ಒತ್ತಡಕ್ಕೆ ಮಣಿದು ಆರೋಪಿ ಅನಿಕೇತನನ್ನು ಬಂಧಿಸಿಲ್ಲ ಎಂದು ಠಾಣೆ ಮುಂದೆ ಸಿದ್ಧಿ ಸಮುದಾಯದ ಮುಖಂಡರು ಆರೋಪಿಸಿದ್ದು, ಅನಿಕೇತ ಬಂಧನ ಆಗುವವರೆಗೂ ಮೃತ ದೇಹ ತೆಗೆದುಕೊಳ್ಳಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಶನಿವಾರ ರಾತ್ರಿ ಹುಣಶೆಟ್ಟಿಕೊಪ್ಪ ಜಾತ್ರೆಗೆ ಬಂದಿದ್ದ ಸಿದ್ಧಿ ಸಮುದಾಯದ ಯುವಕ ಪ್ರಜ್ವಲ್​​, ಅನಿಕೇತ್ ಮಿರಾಸಿ ಕಾರನ್ನು ಓವರ್​ಟೇಕ್ ಮಾಡಿದ್ದನು. ಈ ವಿಚಾರವಾಗಿ ತಂಡವೊಂದು ಪ್ರಜ್ವಲ್ ಮೇಲೆ ಮಾರಣಾಂತಿವಾಗಿ ಹಲ್ಲೆ ನಡೆಸಿತ್ತು. ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಪ್ರಜ್ವಲ್ ಮೃತಪಟ್ಟಿದ್ದನು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ