Karwar News: ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿ ಮತ್ತು ತುಳಸಜ್ಜಿಯಿಂದ ರೈಲು ರೋಕೋ; ಕಾರಣ ಇಲ್ಲಿದೆ

| Updated By: Rakesh Nayak Manchi

Updated on: Jan 16, 2023 | 5:30 PM

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹಾರವಾಡ ನಿಲ್ದಾಣ ನಡೆದ ರೈಲು ತಡೆ ಪ್ರತಿಘಟನೆಯಲ್ಲಿ ಪದ್ಮಶ್ರೀ ಪುರಸ್ಕೃತರಾದ ಸುಕ್ರಜ್ಜಿ, ತುಳಸಜ್ಜಿ ಭಾಗಿಯಾದರು.

Karwar News: ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿ ಮತ್ತು ತುಳಸಜ್ಜಿಯಿಂದ ರೈಲು ರೋಕೋ; ಕಾರಣ ಇಲ್ಲಿದೆ
ಕಾರವಾರ: ರೈಲು ರೋಕೋ ಪ್ರತಿಭಟನೆಯಲ್ಲಿ ಭಾಗಿಯಾದ ಪದ್ಮಶ್ರೀ ಪುರಸ್ಕೃತರಾದ ಸುಕ್ರಜ್ಜಿ ಮತ್ತು ತುಳಸಜ್ಜಿ
Follow us on

ಕಾರವಾರ: ರೈಲು ನಿಲುಗಡೆಗೆ ಆಗ್ರಹಿಸಿ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ನಿಲ್ದಾಣದಲ್ಲಿ (Harwada railway station) ರೈಲು ತಡೆ ಪ್ರತಿಭಟನೆ (Rail Roko Protest) ನಡೆಯಿತು. ಈ ಪ್ರತಿಭಟನೆಯಲ್ಲಿ ಪದ್ಮಶ್ರೀ ಪುರಸ್ಕೃತರಾದ ಸುಕ್ರಜ್ಜಿ (Sukrajji) ಮತ್ತು ತುಳಸಜ್ಜಿ (Tulasajji) ಪಾಲ್ಗೊಂಡರು. ಕೊಂಕಣ ಮಾರ್ಗದಲ್ಲಿ ಸಂಚರಿಸುವ ಗೋವಾದ ಮಡಗಾಂವ್​ನಿಂದ ಮಂಗಳೂರಿಗೆ ಮೆಮೊ ರೈಲು (Madgaon-Mangaluru Memo Train) ನಿಲುಗಡೆಗೆ ಆಗ್ರಹಿಸಿ ಈ ಪ್ರತಿಭಟನೆ ನಡೆಸಲಾಗಿದೆ.

ಮಹಾಮಾರಿ ಕೊರೋನಾ ಸೋಂಕು ರಾಜ್ಯಾದ್ಯಂತ ವ್ಯಾಪಿಸಿದ ಪರಿಣಾಮ ಸೋಂಕು ನಿಯಂತ್ರಣಕ್ಕೆ ಲಾಕ್​ಡೌನ್ ಮಾಡಲಾಗಿತ್ತು. ಪರಿಣಾಮವಾಗಿ ಪ್ರತಿಯೊಂದು ಕ್ಷೇತ್ರಗಳ ಬುಡ ಅಲುಗಾಡಿತ್ತು. ಸಾರಿಗೆ ಬಸ್, ರೈಲು ಇತ್ಯಾದಿ ವಾಹನಗಳ ಸಂಚಾರ ರದ್ದುಗೊಳಿಸಿದ್ದರಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಜನ ಸಂಚಾರ ಸ್ಥಗಿತಗೊಂಡಿತ್ತು. ಅಂದು ಸ್ಥಗಿತಗೊಂಡಿದ್ದ ಗೋವಾ ರಾಜ್ಯದ ಮಡಗಾಂವ್ ನಿಂದ ಮಂಗಳೂರು ನಡುವೆ ಸಂಚರಿಸುವ ಮೆಮೊ ರೈಲು ಇದೀಗ ಪುನರಾರಂಭವಾಗಿದೆ.

ಇದನ್ನೂ ಓದಿ: ಕಾರವಾರ: ಅವೈಜ್ಞಾನಿಕ ಮೀನುಗಾರಿಕೆಯಿಂದ ನಾಡದೋಣಿ ಮೀನುಗಾರರಿಗೆ ಸಂಕಷ್ಟ; ಅಸಾಂಪ್ರದಾಯಿಕ ಮೀನುಗಾರಿಕೆ ಬಂದ್​ ಮಾಡುವಂತೆ ಒತ್ತಾಯ

ಎರಡು ವರ್ಷಗಳ ನಂತರ ಸಂಚಾರ ಆರಂಭಿಸಿದ ಮೆಮೊ ರೈಲು ಲಾಕ್​ಡೌನ್​ಗೂ ಮುನ್ನ ಹಾರವಾಡ ರೈಲ್ವೇ ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿತ್ತು. ಆದರೆ ಈಗ ಮೆಮೊ ರೈಲು ನಿಲುಗಡೆಗೆ ಅವಕಾಶವನ್ನು ರೈಲ್ವೇ ಇಲಾಖೆ ನಿರಾಕಿರಿಸಿದೆ. ರೈಲ್ವೇ ಇಲಾಖೆಯ ನೀತಿಯನ್ನ ಖಂಡಿಸಿ ಇಂದು ಹಾರವಾಡ ಮತ್ತು‌ ಸುತ್ತಮುತ್ತಲಿನ ಗ್ರಾಮಸ್ಥರು ರೈಲು ರೋಕೋ ಪ್ರತಿಭಟನೆ ನಡೆಸಿ ರೈಲ್ವೇ ನಿಲುಗಡೆಗೆ ಆಗ್ರಹಿಸಿದರು.

ರೈಲು ತಡೆ ಪ್ರತಿಭಟನೆಯಲ್ಲಿ ಹಾರವಾಡ ಮತ್ತು‌ ಸುತ್ತಮುತ್ತಲಿನ ಹತ್ತಾರು ಜನರು ಪಾಲ್ಗೊಂಡು ರೈಲು ತಡೆ ಮಾಡಿದರು. ಸ್ಥಳದಲ್ಲಿ ಮುಂಜಾಗೃತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತಿಭಟನೆಯ ಕೊನೆಯಲ್ಲಿ ರೈಲು ನಿಲುಗಡೆಗೆ ಅವಕಾಶ ನೀಡುವಂತೆ ಕೋರಿ ಮನವಿ ಪತ್ರ ಸಲ್ಲಿಸಲಾಯಿತು. ನಂತರ ತಡೆ ಹಿಡಿದ ರೈಲಿನ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ರೈಲು ಹಳಿಯಿಂದ ದೂರಕ್ಕೆ ಕಳುಹಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:21 pm, Mon, 16 January 23