ವಿವಾಹವಾಗಿ ಇಬ್ಬರು ಮಕ್ಕಳಿದ್ದರೂ ಕಮಲಾಕರ ಗುರೂಜಿ ಜೊತೆಗೆ ಸಂಬಂಧ: ಪುತ್ರಿಯಿಂದಲೇ ಮ್ಯಾಟರ್​​ ರಿವೀಲ್​

ಕಮಲಾಕರ ಭಟ್ ಗುರೂಜಿ ಮತ್ತು ವಿವಾಹಿತ ಮಹಿಳೆ ಸುಚಿತ್ರಾ ನಡುವಿನ ಸಂಬಂಧ, ಮಗಳ ಒಂದು ಮೆಸೇಜ್‌ನಿಂದ ಬಯಲಿಗೆ ಬಂದಿದೆ. 20 ವರ್ಷಗಳ ವೈವಾಹಿಕ ಜೀವನ ಹೊಂದಿದ್ದ ಸುಚಿತ್ರಾ, ಗಂಡನಿಂದ ದೂರವಾಗಿ ಮಕ್ಕಳ ಜೊತೆ ಗುರೂಜಿ ಜೊತೆ ವಾಸವಿದ್ದಳು. ಕಮಲಾಕರ ಭಟ್ ಗೂರೂಜಿ ಜೊತೆಗಿನ ಸುಚಿತ್ರಾ ಫೋಟೋ Tv9ಗೆ ಲಭ್ಯವಾಗಿದ್ದು ಆ ಕುರಿತ ಮಾಹಿತಿ ಇಲ್ಲಿದೆ.

ವಿವಾಹವಾಗಿ ಇಬ್ಬರು ಮಕ್ಕಳಿದ್ದರೂ ಕಮಲಾಕರ ಗುರೂಜಿ ಜೊತೆಗೆ ಸಂಬಂಧ: ಪುತ್ರಿಯಿಂದಲೇ ಮ್ಯಾಟರ್​​ ರಿವೀಲ್​
ಸುಚಿತ್ರಾ ಜೊತೆಗೆ ಕಮಲಾಕರ್​​ ಭಟ್​​ ಗುರೂಜಿ
Image Credit source: Tv9 Kannada
Edited By:

Updated on: Feb 03, 2026 | 3:31 PM

ಕಾರವಾರ, ಫೆಬ್ರವರಿ 03: ಸುಚಿತ್ರಾ ಎಂಬ ವಿವಾಹಿತ ಮಹಿಳೆಯ ಜೊತೆಗೆ ಕಮಲಾಕರ ಭಟ್ ಗುರೂಜಿಯ ಅಕ್ರಮ ಸಂಬಂಧ ಆರೋಪ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ. ಅಷ್ಟಕ್ಕೂ ಇಬ್ಬರ ನಡುವಿನ ಸಂಬಂಧ ಬಯಲು ಮಾಡಿದ್ದು, ಒಂದೇ ಒಂದು ಮೆಸೇಜ್​​ ಎನ್ನಲಾಗಿದೆ. 20 ವರ್ಷಗಳ ಹಿಂದೆ ಮಹೆಶ್​​ ಜೊತೆ ಪ್ರೀತಿಸಿ ವಿವಾಹವಾಗಿದ್ದ ಸುಚಿತ್ರಾ ಕಳೆದ 6 ತಿಂಗಳ ಹಿಂದೆ ಗಂಡನಿಗೆ ಗೊತ್ತಿಲ್ಲದೆ ತನ್ನಿಬ್ಬರು ಹೆಣ್ಣು ಮಕ್ಕಳನ್ನೂ ಕರೆದೊಯ್ದು ಶಿವಮೊಗ್ಗದ ಕಮಲಾಕರ ಭಟ್ ಗೂರೂಜಿ ಜೊತೆ ವಾಸವಿದ್ದಳು. ಈ ಬಗ್ಗೆ ಓರ್ವ ಮಗಳು ತಂದೆಗೆ ವಿಷಯ ತಿಳಿಸಿದ್ದರಿಂದಲೇ ಗುರೂಜಿ ಮತ್ತು ಸುಚಿತ್ರಾ ಸಂಬಂಧ ಕುಟುಂಬಸ್ಥರಿಗೆ ಗೊತ್ತಾಗಿದೆ ಎನ್ನಲಾಗಿದೆ.

ತಂದೆಗೆ ಮಗಳು ಮಾಡಿದ್ದ ಮೇಸೇಜ್​ ಏನು?

ನಾನು ಮತ್ತೆ ತಂಗಿ ಒಂದು ರೂಮಿನಲ್ಲಿ ಮಲಗುತ್ತೇವೆ. ತಾಯಿ ಹಾಗೂ ಗುರೂಜಿ ಬೇರೆ ರೂಂನಲ್ಲಿ ಮಲಗುತ್ತಿದ್ದಾರೆ ಎಂಬ ಮಾಹಿತಿಯನ್ನು ಸುಚಿತ್ರಾ ಮಗಳು ತಂದೆ ಮಹೇಶ್​​ಗೆ ತಿಳಿಸಿದ್ದಳು. ಅಲ್ಲದೆ ತಾಯಿ ತನಗೆ ಹಿಂಸೆ ನೀಡುತ್ತಿದ್ದು, ಪ್ಲೀಸ್​​ ಅಪ್ಪ ನನ್ನನ್ನು ಕರೆದುಕೊಂಡು ಹೋಗು ಎಂದು ಮೆಸೇಜ್​​ ಮಾಡಿದ್ದಳು. ಇಲ್ಲದಿದ್ದರೆ ತಾನು ಸಾಯುವುದಾಗಿ ಅಲವತ್ತುಕೊಂಡಿದ್ದಳು. ಈ ವೇಳೆ ಆಕೆಗೆ ಶಿವಮೊಗ್ಗದಿಂದ ಸಿದ್ದಾಪುರಕ್ಕೆ ಬರುವಂತೆ ತಂದೆ ಮಹೇಶ್​ ತಿಳಿಸಿದ್ದರು. ಅದರಂತೆ ಮಗಳು ತಂದೆಯ ಬಳಿ ಬಂದಿದ್ದು, ಆಕೆಯನ್ನು ಸಿದ್ದಾಪುರ ಠಾಣೆಗೆ ಕರೆದುಕೊಂಡು ಹೋಗಿದ್ದ ಮಹೇಶ್​​ ಪತ್ನಿಯ ಕ್ರೌರ್ಯದ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸರ ಸೂಚನೆಯಂತೆ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಮುಂದೆಯೂ ಮಗಳನ್ನು ಹಾಜರಿಪಡಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಕಮಲಾಕರ ಭಟ್​ ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ; ದೂರು ನೀಡಿದ್ದಕ್ಕೆ ಹಲ್ಲೆ, ಓರ್ವ ಸಾವು

ಈ ನಡುವೆ ರಾತ್ರಿ 9.45ರ ಸುಮಾರಿಗೆ ಸುಚಿತ್ರಾ ಮತ್ತು ಆಕೆಯ ತಂದೆ ಸೇರಿ ಇತರ ನಾಲ್ವರು ಚಾಕು ಹಿಡಿದು ಏಕಾಏಕಿ ಮನೆಗೆ ನುಗ್ಗಿದ್ದು, ಅವರನ್ನು ತಡೆದ ಮಹೇಶ್​​, ಅವರ ತಮ್ಮ ವಸಂತ್​​ ನಾಯ್ಕ ಮತ್ತು ನೆರೆ ಮನೆಯ ಕುಮಾರ್​​ಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸುಚಿತ್ರಾ ಜೊತೆಗಿನ ಗುರೂಜಿ ಫೋಟೋ ಲಭ್ಯ

ಕಮಲಾಕರ ಭಟ್ ಗೂರುಜಿ ಜೊತೆಗಿನ ಸುಚಿತ್ರಾ ಫೋಟೋ Tv9ಗೆ ಲಭ್ಯವಾಗಿದೆ. ನನ್ನ ಕುಟುಂಬ ಎಂದು ಗುರೂಜಿ ಹಾಕಿರುವ ಈ ಫೋಟೋ ಇಬ್ಬರೂ ಎಷ್ಟು ಅನ್ಯೋನ್ಯವಾಗಿದ್ದರು ಎಂಬುದಕ್ಕೆ ಸಾಕ್ಷಿ ಎಂಬಂತಿದೆ. ಸುಚಿತ್ರಾಳ ಹೆಗಲ ಮೇಲೆ ಕೈ ಹಾಕಿ ಗುರೂಜಿ ಸೆಲ್ಫಿಯನ್ನೂ ಕ್ಲಿಕ್ಕಿಸಿಕೊಂಡಿದ್ದು, ಈ ಫೋಟೋ ಮಗಳ ಆರೋಪಕ್ಕೆ ಪುಷ್ಟಿ ನೀಡುವಂತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:29 pm, Tue, 3 February 26

Loading...
Unable to load recommendations.
Follow Us