ಉತ್ತರ ಕನ್ನಡ: ಮಳೆಗಾಗಿ ಬೆಂಗಳೂರು ನಗರವಾಸಿಗಳಿಂದ ಸಮುದ್ರ ಮಧ್ಯದಲ್ಲಿ ವಿಶೇಷ ಪೂಜೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 27, 2024 | 7:53 PM

ರಾಜ್ಯದಲ್ಲಿ ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಆರಂಭ ಆಗಿದೆ. ಬೆಸಿಗೆ ಆರಂಭದಲ್ಲೆ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ನೀರಿನ ಸಮಸ್ಯೆ ಆದಷ್ಟು ಬೇಗ ಪರಿಹಾರ ಮಾಡುವಂತೆ ಕೋರಿ. ಮಳೆಗಾಗಿ ಬೆಂಗಳೂರಿನ ಜನ ಸಮುದ್ರ ಮಧ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಾಗಾದ್ರೆ ಸಮುದ್ರ ಮಧ್ಯದಲ್ಲಿ ನಡೆದ ವಿಶೆಷ ಪೂಜೆ ಎಂತಹದ್ದು ಮತ್ತು ಪೂಜೆ ಶಕ್ತಿಯ ಏನು, ಎಂಬುವುದರ ಕುರಿತು ಈ ಸ್ಟೋರಿ ಓದಿ. 

ಉತ್ತರ ಕನ್ನಡ: ಮಳೆಗಾಗಿ ಬೆಂಗಳೂರು ನಗರವಾಸಿಗಳಿಂದ ಸಮುದ್ರ ಮಧ್ಯದಲ್ಲಿ ವಿಶೇಷ ಪೂಜೆ
ಮಳೆಗಾಗಿ ಬೆಂಗಳೂರು ನಗರವಾಸಿಗಳಿಂದ ಸಮುದ್ರ ಮಧ್ಯದಲ್ಲಿ ವಿಶೇಷ ಪೂಜೆ
Follow us on

ಉತ್ತರ ಕನ್ನಡ, ಮಾ.27: ರಾಜ್ಯದಲ್ಲಿ ಉಂಟಾದ ಜಲಕ್ಷಾಮದಿಂದ(Water Crisis) ಮುಕ್ತಿ ಸಿಗಲು ಬೆಂಗಳೂರು ನಗರದ ಶಿವಶಂಕರ ಗುರುಗಳು ಮತ್ತು ಅವರ ತಂಡದಿಂದ ಕಾಳಿ ನದಿ, ಸಮುದ್ರಕ್ಕೆ ಸಂಗಮ ಆಗುವ ಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹೌದು, ಮೊದಲಿಗೆ ಕಡಲ ತೀರದಲ್ಲಿ ಮರಳಿನಿಂದ ನಿರ್ಮಿಸಲಾದ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ ಪುರೋಹಿತರ ತಂಡ, ಮಂತ್ರ ಪಠಣ ಮಾಡುವುದರ ಮೂಲಕ ವರುಣ ದೇವನಿಗಾಗಿ ಪ್ರಾರ್ಥನೆ ಮಾಡಿದರು. ಬಳಿಕ ಬೋಟ್ ಮೂಲಕ ಸಮುದ್ರದ ಮಧ್ಯದಲ್ಲಿ ಹೋಗಿ ಮಂತ್ರ ಪಠಣ ಮಾಡುತ್ತ ಹೊಮ್ ಹಾಕಿದರು. ಈ ವೇಳೆ ಹತ್ತಕ್ಕೂ ಹೆಚ್ಚು ಪುರೋಹಿತರು ಶಿವಶಂಕರ ಗುರುಗಳಿಗೆ ಸಾಥ್ ಕೊಟ್ಟು ಆದಷ್ಟು ಬೇಗ ಕೃಪೆ ಮಾಡುವಂತೆ ಮಳೆ ರಾಯನಿಗೆ ಕೈ ಮುಗಿದು ಕೇಳಿಕೊಂಡರು. ಬಳಿಕ ವರಣ ದೇವನ ಮೂರ್ತಿಗೆ ಸಮುದ್ರದ ನೀರಿನಿಂದ ಸ್ನಾನ ಮಾಡಿಸಿದರು.

ವಿಶೇಷ ಪೂಜೆಯಿಂದ ಮುಂದಿನ 48 ದಿನಗಳಲ್ಲಿ ಉತ್ತಮ ಮಳೆ

ಇನ್ನು ಪ್ರಸಕ್ತ ಸಾಲಿನಲ್ಲಿ ಮಳೆಯ ಅಭಾವದಿಂದ ಬರಗಾಲ ಆವರಿಸಿದೆ. ಬೆಸಿಗೆಯ ಆರಂಭದಲ್ಲಿ ಈ ಪರಿಸ್ಥಿತಿ ಉಂಟಾದರೆ ಇನ್ನೂ ಎರಡು ತಿಂಗಳು ಹೇಗೆ ಕಳೆಯುವುದು ಎಂಬ ಆತಂಕದಕಲ್ಲಿ ಕೆಲವರು ಇದ್ದರೆ. ಇನ್ನೂ ಕೆಲವರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಇಂದು(ಮಾ.27) ರಾಜ್ಯದಲ್ಲಿ ಉಂಟಾದ ಜಲಕ್ಷಾಮದಿಂದ ಮುಕ್ತಿ ಸಿಗಬೇಕಾದ್ರೆ ವರುಣ ದೇವನ ಆಗಮನ ಆಗಬೇಕಿದೆ. ಹಾಗಾಗಿ ಬೆಂಗಳೂರು ನಗರದ ಮುನೇಶ್ವರ ಸ್ವಾಮಿ ದೇವಸ್ಥಾನದ ಪ್ರಮುಖ ಅರ್ಚಕರಾದ ಶಿವಶಂಕರ ನೇತೃತ್ವದಲ್ಲಿ ಸಮುದ್ರದ ಮಧ್ಯದಲ್ಲಿ ವಿಶೇಷ ಪೂಜೆಯಿಂದ ಮುಂದಿನ 48 ದಿನಗಳಲ್ಲಿ ಉತ್ತಮ ಮಳೆ ಆಗುತ್ತೆ ಎಂದು ಪುರೋಹಿತರ ತಂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಇಲ್ಲಿ ಗಂಡಸರು ಸೀರೆ ಉಟ್ಕೊಂಡು ಹೂ ಮುಡಿದು ವಿಶೇಷ ಪೂಜೆ ಮಾಡುತ್ತಾರೆ! ಯಾಕೆ ಗೊತ್ತಾ?

ಈ ಹಿಂದೆ ಜಲಕ್ಷಮಾ ಉಂಟಾದಾಗ ಧರ್ಮಸ್ಥಳದಲ್ಲಿ ಇದೆ ತಂಡ ವಿಶೇಷ ಪೂಜೆ ಸಲ್ಲಿಸಿತ್ತು. ಅಂದು ಉತ್ತಮ ಮಳೆ ಆಗಿ ಜಲಕ್ಷಾಮದಿಂದ ರಾಜ್ಯಕ್ಕೆ ಮುಕ್ತಿ ಸಿಕ್ಕಿತ್ತಂತೆ, ಸದ್ಯ ಬೇಸಿಗೆ ಕಾಲದಲ್ಲಿ ಮಳೆಯ ಅವಶ್ಯಕತೆ ಇರುವುದರಿಂದ, 40 ರಿಂದ 50 ಅಡಿ ಆಳ ಇರುವ ಸಮುದ್ರದ ಮೆಲ್ಮೈಯಲ್ಲಿ ಆಗ್ನಿಗೆ ತುಪ್ಪ ಸುರಿದು ವರುಣ ದೇವನ ಕೃಪೆಗಾಗಿ ಪ್ರಾರ್ಥಿಸಲಾಯಿತು. ಒಟ್ಟಾರೆಯಾಗಿ ರಾಜ್ಯದಲ್ಲಿ ಉಂಟಾದ ನೀರಿನ ಸಮಸ್ಯೆಗೆ ಆದಷ್ಟು ಬೇಗ ಮಳೆ ಕೃಪೆ ಮಾಡಬೇಕಿದೆ. ಸಮುದ್ರದ ಮಧ್ಯದಲ್ಲಿ ಮಾಡಿದ ವಿಶೇಷ ಪೂಜೆಗೆ ಕರುಣಿಸಿ ವರುಣ ದೇವ ಕೃಪೆ ಮಾಡುತ್ತಾನೋ ಎಂಬುವುದನ್ನ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ