ತನ್ನಿಬ್ಬರು ಮಕ್ಕಳನ್ನ ಬಸ್​ ನಿಲ್ದಾಣದಲ್ಲಿ ಬಿಟ್ಟು ಬಂದು ಸಮುದ್ರಕ್ಕೆ ಜಿಗಿದ ಮಹಿಳೆ

| Updated By: ವಿವೇಕ ಬಿರಾದಾರ

Updated on: Nov 26, 2023 | 1:42 PM

ಶನಿವಾರ (ನ.26) ಸಂಜೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹೆಡ್‌ಬಂದರ್ ಬಳಿ ಇರುವ ಸಮುದ್ರಕ್ಕೆ ಹಾರಿ ಮಹಿಳೆ ಮಾಡಿಕೊಂಡಿದ್ದಾರೆ. ಸಾಂತಗಲ ಗ್ರಾಮದ ನಿವಾಸಿಯಾಗಿದ್ದ ನಿವೇದಿತಾ ನಾಗರಾಜ ಭಂಡಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ.

ತನ್ನಿಬ್ಬರು ಮಕ್ಕಳನ್ನ ಬಸ್​ ನಿಲ್ದಾಣದಲ್ಲಿ ಬಿಟ್ಟು ಬಂದು ಸಮುದ್ರಕ್ಕೆ ಜಿಗಿದ ಮಹಿಳೆ
ಸಾಂದರ್ಭಿಕ ಚಿತ್ರ
Follow us on

ಕಾರವಾರ ನ.26: ಶನಿವಾರ (ನ.26) ಸಂಜೆ ಉತ್ತರ ಕನ್ನಡ (Uttar Kannada) ಜಿಲ್ಲೆಯ ಕುಮಟಾ (Kumata) ಪಟ್ಟಣದ ಹೆಡ್‌ಬಂದರ್ ಬಳಿ ಇರುವ ಸಮುದ್ರಕ್ಕೆ (Sea) ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಂತಗಲ ಗ್ರಾಮದ ನಿವಾಸಿಯಾಗಿದ್ದ ನಿವೇದಿತಾ ನಾಗರಾಜ ಭಂಡಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ನಿವೇದಿತಾ ಅವರು ಮನೆಯಿಂದ ಸ್ಕೂಟಿ ಮೇಲೆ ಇಬ್ಬರೂ ಗಂಡುಮಕ್ಕಳನ್ನು ಕರೆದುಕೊಂಡು ಬಂದು, ಕುಮಟಾದ ಪಿಕ್‌ಅಪ್ ಬಸ್‌ನಿಲ್ದಾಣದ ಬಳಿ ಇಳಿಸಿದ್ದಾರೆ. ನಂತರ ನಿವೇದಿತಾ ಮಾಂಗಲ್ಯ, ಕಾಲುಂಗುರ, ಮೊಬೈಲ್​ ಅನ್ನು ಸ್ಕೂಟಿಯಲ್ಲಿ ಇಟ್ಟು ಹತ್ತಿರದಲ್ಲೇ ಇದ್ದ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆ ಸಮುದ್ರಕ್ಕೆ ಹಾರುವುದನ್ನ ಗಮನಿಸಿದ ಲೈಫ್‌ಗಾರ್ಡ್ ರಕ್ಷಣೆಗೆ ಮುಂದಾಗಿದ್ದರು. ಅಲೆಗಳ ಅಬ್ಬರ ಹೆಚ್ಚಿದ್ದ ಹಿನ್ನೆಲೆಯಲ್ಲಿ ನಿವೇದಿತಾ ಕಣ್ಮರೆಯಾಗಿದ್ದಾಳೆ. ಸ್ಥಳಕ್ಕೆ ಕುಮಟಾ ಪೊಲೀಸ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಲಾರಿ ಮತ್ತು ಬೈಕ್​ ಮಧ್ಯೆ ಅಪಘಾತ: ಯುವತಿ ಸಾವು

ಭಟ್ಕಳ ಪಟ್ಟಣ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಬೈಕ್​ ಮಧ್ಯೆ ಅಪಘಾತ ಸಂಭವಿಸಿದ್ದು ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕಾರ್ಗಲ್ ಮೂಲದ ನಿಖಿತಾ ಮಹಾಬಲೇಶ್ವರ ಗೊಂಡ (23) ಮೃತ ಯುವತಿ. ಬೈಕ್​ನಲ್ಲಿದ್ದ ಗುಲ್ಮಿ ನಿವಾಸಿ ಗಣೇಶ್ ಗೊಂಡ (35) ಅವರಿಗೆ ಗಾಯಗಳಾಗಿದ್ದು, ಗಿರಿಜಾ ಕೊಂಡ (45) ಎಂಬುವರ ಸ್ಥಿತಿ ಗಂಭೀರವಾಗಿದೆ. ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂವರು ಭಟ್ಕಳದಿಂದ ಶಿರಾಲಿಗೆ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:35 pm, Sun, 26 November 23