Karwar: ನಿಧಿ ಆಸೆಗೆ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬಾವಿ ಅಗೆಯುತ್ತಿದ್ದ ಅನ್ಯ ಕೋಮಿನ ಯುವಕರು, ಅರಣ್ಯಾಧಿಕಾರಿ ವಶಕ್ಕೆ

| Updated By: ಸಾಧು ಶ್ರೀನಾಥ್​

Updated on: Dec 26, 2022 | 1:13 PM

ಇದನ್ನ ಅಕಸ್ಮಾತ್ತಾಗಿ ಸ್ಥಳೀಯರು ಗಮನಿಸಿ ವಿಚಾರಿಸಿದ್ದಾರೆ. ಆಗ ಅವರು ದೇವರ ಕಥೆ ಕಟ್ಟಿದ್ದಾರೆ. ಆದರೆ ಇವರು ಅನ್ಯಕೋಮಿನ ಸಮುದಾಯದವರು, ಇವರಿಗೆ ಹೇಗೆ ಶಿರಸಿ ಮಾರಿಕಾಂಬಾ ಮೈ ಮೇಲೆ ಬರುತ್ತೆ ಅಂತಾ ಅನುಮಾನ ಬಂದು ಅರಣ್ಯ ಸಿಬ್ಬಂದಿಗೆ ಅವರು ಮಾಹಿತಿ ನೀಡಿದ್ದಾರೆ.

Karwar: ನಿಧಿ ಆಸೆಗೆ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬಾವಿ ಅಗೆಯುತ್ತಿದ್ದ ಅನ್ಯ ಕೋಮಿನ ಯುವಕರು, ಅರಣ್ಯಾಧಿಕಾರಿ ವಶಕ್ಕೆ
ನಿಧಿ ಆಸೆಗೆ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬಾವಿ ತೋಡಿದ ಅನ್ಯ ಕೋಮಿನ ಯುವಕರು,
Follow us on

ಅದು ಕಾಯ್ದಿಟ್ಟ ದಟ್ಟ ಅರಣ್ಯ ಪ್ರದೇಶ, ಅಲ್ಲಿ ಬೆರಳೆಣಿಕೆಯಷ್ಟು ಮಾತ್ರ ಅಲ್ಲೊಂದು ಇಲ್ಲೊಂದು ಮನೆಯ ಇರುತ್ತೆ. ಜನಸಂಖ್ಯೆ ಕೂಡ ತೀರ ವಿರಳ. ಆ ಪ್ರದೇಶದಲ್ಲಿ ಕೆಲ ಭೂಪರು (Youth) ಕಳೆದ ಅಮವಾಸ್ಯೆಯಿಂದ ಆ ಜಾಗದಲ್ಲಿರುವ ದೊಡ್ಡ ಬಂಡೆಕಲ್ಲಿಗೆ ಕುಂಕುಮ, ಹಳದಿ, ನಿಂಬೆ, ಹೂವಿನ ಹಾರ ಹಾಕಿ ಪೂಜೆ ಮಾಡಿ ಸಲಾಕೆ, ಗುದ್ದಲಿ ಹಿಡಿದು ಭೂಮಿಯನ್ನ ಅಗಿಯುತ್ತಿದ್ದಾರೆ. ಅರೇ! ಯಾಕೆ, ಏನಿದು ಅಂತೀರಾ? ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ಶಿರಸಿ ಮಾರಿಕಾಂಬಾ ದೇವರು ಕನಸಲ್ಲಿ ಬಂದು ಬಾವಿ (well) ತೋಡಿ, ಅಲ್ಲಿ ಬರುವ ನೀರನ್ನ ಮೈ ಮೇಲೆ ಹಾಕಿ ಅಂತಾ ಹೇಳಿದರಂತೆ, ಅದರಂತೆ…

ಹೌದು ದಟ್ಟ ಅರಣ್ಯದಲ್ಲಿ ಜನನಿಬಿಡ ಪ್ರದೇಶದಲ್ಲಿ ಕಲ್ಲಿಗೆ ಕುಂಕುಮ, ಹಳದಿ, ಲಿಂಬೂ, ಹೂವಿನ ಹಾರ ಹಾಕಿ ಖದೀಮರು ಪೂಜೆ ಮಾಡಿದ್ದಾರೆ. ಇನ್ನೊಂದು ಕಡೆ ಸಲಾಕಿ, ಗುದ್ದಲಿ ಹಿಡಿದು ಆಳವಾಗಿ ಭೂಮಿ ಅಗೆದಿರುವ ಭೂಪರೂ ಇವರೇ. ಮತ್ತೊಂದು ಕಡೆ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಯಾಕೆ ಹೀಗೆ ಬಾವಿ ತೋಡುತ್ತಿದ್ದಾರೆ ಎಂದು ಅರಣ್ಯ ಸಿಬ್ಬಂದಿ (forest department) ಪ್ರಶ್ನೆ ಮಾಡಿದ್ದಾರೆ.

ಈ ದೃಶ್ಯಗಳೆಲ್ಲಾ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರ (Karwar) ತಾಲೂಕಿನ ಬೇಳೂರು (Belur) ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ. ಎಸ್, ಕಳೆದ ನಾಲ್ಕೈದು ದಿನಗಳಿಂದ ಬೇಳೂರು ಗ್ರಾಮದಿಂದ 7 ಕಿಮೀ ದೂರದಲ್ಲಿ ಜನನಿಬಿಡ ಅರಣ್ಯ ಪ್ರದೇಶದಲ್ಲಿ ನಿತ್ಯ ಬಂಡೆಗಲ್ಲಿಗೆ ಪೂಜೆ ಮಾಡಿ ನಿಧಿ ಆಸೆಗೆ ಹಾರೆ, ಗುದ್ದಲಿ, ಸಲಾಕೆ ಹಿಡಿದು ಬಾವಿ ತೋಡುತ್ತಾ ಬಂದಿರುವ ಈ ಭೂಪರು ಕಾರವಾರ ತಾಲೂಕಿನ ಶಿರವಾಡದವರು.

ಹಿದಾಯತ್ ಅಬ್ದುಲ್ ಗನಿ (43), ರಸ್ತುಂ ರಜಾಕ್ ಸಾಬ್ (53), ಹರ್ಷದ್ ಅಲಿ ಹೈದರ್ (21), ಸರಫರಾಜ್ ಅಬಿಬುಲ್ಲಾ (25) ಇವರೆ ಈ ಖದೀಮರು. ಇದ್ರಲ್ಲಿ ರುಸ್ತುಂ ರಜಾಕ್ ಎಂಬುವನಿಗೆ ಮೈ ಮೇಲೆ ಶಿರಸಿ ಮಾರಿಕಾಂಬಾ ದೇವರು ಬರುತ್ತಂತೆ. ಕಳೆದ ಅಮವಾಸ್ಯೆ ದಿನ ದೇವರು ಕನಸಲ್ಲಿ ಬಂದು ಈ ಜಾಗದಲ್ಲಿ ನಾನು ನೆಲೆಸಿದ್ದೇನೆ..

ನೀವು ಇಲ್ಲಿಗೆ ಬಂದು ಆಳದವರಗೆ ಬಾವಿ ತೋಡಿ ಅಲ್ಲಿ ಬರುವ ಪವಿತ್ರ ಗಂಗಾಜಲವನ್ನ ನನ್ನ ಮೈಗೆ ಸಿಂಪಡಿಸಿ. ನಂತರ ಇದು ಪುಣ್ಯ ಕ್ಷೇತ್ರವಾಗುತ್ತೆ ಅಂತಾ ಹೇಳಿದ್ರರಂತೆ. ಇದನ್ನೇ ನೆಪವಾಗಿಟ್ಟುಕೊಂಡು ಈ ಭೂಪರು ಕಳೆದ ನಾಲ್ಕು ದಿನಗಳಿಂದ ಬಾವಿ ತೋಡುತ್ತಿದ್ದಾರೆ! ಇದನ್ನ ಗಮನಿಸಿದ ಸ್ಥಳೀಯರಿಗೆ ಅನುಮಾನ ಮೂಡಿದೆ, ಹಾಗಾಗಿ ತಕ್ಷಣ ಅರಣ್ಯಾಧಿಕಾರಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಈ ದಟ್ಟ ಕಾಡಿನಲ್ಲಿ ಅಲ್ಲೊಂದು, ಇಲ್ಲೊಂದು ಬೆರೆಳೆಣಿಕೆ ಅಷ್ಟು ಮಾತ್ರ ಮನೆಗಳಿರುತ್ತವೆ.. ಜೊತೆಗೆ ಜನ್ರು ಕೂಡ ಕಾಡು ಪ್ರಾಣಿಗಳ ಭಯ ಇರುವುದರಿಂದ ಅಷ್ಟೊಂದು ಕಾಡಿನ ಒಳ ಭಾಗದಲ್ಲಿ ಓಡಾಡುವುದಿಲ್ಲ.. ಇದನ್ನ ಅಸ್ತ್ರವಾಗಿಸಿಕೊಂಡ ಈ ಖದೀಮರು ಕಾಡಿನ ನಡುವೆ ಇರುವ ದೊಡ್ಡ ಬಂಡೆಗೆ ಪೂಜೆ ಸಲ್ಲಿಸಿ, ಕಳೆದ ನಾಲ್ಕೈದು ದಿನಗಳಲ್ಲಿ ಅದರ ಸಮೀಪದಲ್ಲೇ 15 ರಿಂದ 20 ಅಡಿಗಳ ಬಾವಿಯನ್ನು ತೋಡಿದ್ದಾರೆ.

ಇದನ್ನ ಅಕಸ್ಮಾತ್ತಾಗಿ ಸ್ಥಳೀಯರೊಬ್ಬರು ಗಮನಿಸಿ ಅವರನ್ನ ವಿಚಾರಿಸಿಕೊಂಡಿದ್ದಾರೆ. ಆಗ ಅವರು ದೇವರ ಕಥೆ ಕಟ್ಟಿದ್ದಾರೆ.. ಆದರೆ ಇವರು ಅನ್ಯಕೋಮಿನ ಸಮುದಾಯದವರು, ಇವರಿಗೆ ಹೇಗೆ ಶಿರಸಿ ಮಾರಿಕಾಂಬಾ ದೇವರು ಮೈ ಮೇಲೆ ಬರುತ್ತೆ ಅಂತಾ ಆ ವ್ಯಕ್ತಿಗೆ ಅನುಮಾನ ಬಂದು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ ಕೆ.ಸಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ಅರಣ್ಯ ಸಿಬ್ಬಂದಿಯಿಂದ ದಾಳಿ ಮಾಡಿದ್ದಾರೆ. ಇದರಿಂದ ಆರೋಪಿಗಳು ಸ್ಥಳದಲ್ಲಿಯೇ ಸಿಕ್ಕಿಬಿದ್ದಿದ್ದಾರೆ. ಕಾದಿಟ್ಟ ಕಾಡಿನೊಳಗೆ ಅನುಮತಿಯಲ್ಲದೇ ಯಾಕೆ ಪ್ರವೇಶಿಸಿದ್ದೀರಿ? ಇಲ್ಲಿ ಯಾಕೆ ಬಾವಿ ತೋಡುತ್ತಿದ್ದೀರಿ? ಎಂದು ಅಧಿಕಾರಿಗಳು ಕೇಳಿದ್ದಾರೆ.

ಅದಕ್ಕೆ… ಕಳೆದ ಅಮಾವಾಸ್ಯೆಯ ದಿನ ರಾತ್ರಿ ನಮಗೆ ಶಿರಸಿಯ ಮಾರಿಕಾಂಬೆ ಕನಸಿನಲ್ಲಿ ಬಂದು ಇಲ್ಲಿ ಪೂಜೆ ಸಲ್ಲಿಸಲು ತಿಳಿಸಿದ್ದಾಳೆ. ಹಾಗಾಗಿ ನಾವು ಬಾವಿ ತೋಡುತ್ತಿದ್ದೇವೆ. ನಾವು ಯಾವುದೇ ಮರವನ್ನೂ ಕತ್ತರಿಸಿಲ್ಲ‌ ಎಂದು ಆರೋಪಿಗಳು ಉತ್ತರಿಸಿದ್ದಾರೆ.

Also Read:

ದುರ್ಗದ ಕುರಿಗಾಹಿ ಬಾಲಕಿ ವಿಶ್ವ ಥ್ರೋಬಾಲ್ ಗೆದ್ದುಬಂದಳು, ಆದರೆ ಹೋಗುವ ಮುನ್ನ ಆರ್ಥಿಕ ನೆರವು ಕೇಳಿದರೆ ಸಿಎಂ ಬೊಮ್ಮಾಯಿ ಇಲ್ಲಾ ಅಂದರು!

ಆದರೆ ಸಂರಕ್ಷಿತ ಪ್ರದೇಶದಲ್ಲಿ ಈ ರೀತಿ ಕೆಲಸ ಮಾಡುವುದು ತಪ್ಪು ಎಂದು ಆರೋಪಿಗಳ ವಿರುದ್ಧ 1963ರ ಅರಣ್ಯ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿ ನಾಲ್ವರನ್ನ ವಶಕ್ಕೆ ಪಡೆದಿದ್ದೇವೆ ಎಂದು ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ತಿಳಿಸಿದ್ದಾರೆ.

ಒಟ್ಟಿನಲ್ಲಿ, ಅನ್ಯಕೋಮಿನ ಯುವಕರ ಮೇಲೆ ಶಿರಸಿ ಮಾರಿಕಾಂಬಾ ದೇವರು ಬರುತ್ತಾ.. ? ದೇವರು ಕನಸ್ಸಿನಲ್ಲಿ ಬಂದು ಹೇಳಿದ್ದಕ್ಕೆ ಬಾವಿ ತೋಡಿದ್ರಾ.. ? ಅಥವಾ ನಿಧಿ ಆಸೆಗೆ ಇವರು ದೇವರ ನಾಟಕ ಮಾಡಿ ಭಾವಿ ತೋಡುತ್ತಿದ್ದಾರಾ? ಅಂತಾ ಮುಂದೆ ತನಿಖೆಯಿಂದ ಗೊತ್ತಾಗಬೇಕಿದೆ.. ಈ ಕುರಿತು ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ವಿನಾಯಕ ಬಡಿಗೇರ, ಟಿವಿ 9, ಕಾರವಾರ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ