ಕರ್ನಾಟಕವು ಮತ್ತೊಂದು ವಂದೇ ಭಾರತ್ ರೈಲು(Vande Bharat Train) ಪಡೆಯಲು ಸಜ್ಜಾಗಿದೆ, ಈ ಬಾರಿ ಕಾಚಿಗುಡ-ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿದೆ. ಪ್ರಸ್ತುತ, ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ವಂದೇ ಭಾರತ್ ರೈಲು ಕಾರ್ಯಾಚರಿಸುತ್ತಿದೆ. ಗಂಟೆಗೆ 160 ಕಿಮೀ ವೇಗವನ್ನು ತಲುಪಬಲ್ಲ ವಂದೇ ಭಾರತ್ ರೈಲು, ಚೆನ್ನೈ ಮತ್ತು ಮೈಸೂರು ನಡುವಿನ 504 ಕಿಲೋಮೀಟರ್ ದೂರವನ್ನು ಕೇವಲ ಮೂರು ಗಂಟೆಗಳಲ್ಲಿ ಕ್ರಮಿಸುತ್ತದೆ.
ದಕ್ಷಿಣ ಭಾರತದಲ್ಲಿ ಸೇವೆ ಸಲ್ಲಿಸಲು ಇನ್ನೂ ಎರಡು ರೈಲುಗಳನ್ನು ನಿಯೋಜಿಸಲಾಗಿದೆ. ಅವುಗಳು ತೆಲಂಗಾಣದ ಸಿಕಂದರಾಬಾದ್‌ನಿಂದ ಆಂಧ್ರಪ್ರದೇಶದ ತಿರುಪತಿ ಮತ್ತು ಮಹಾರಾಷ್ಟ್ರದ ಪುಣೆಗೆ ಸಂಚರಿಸಲಿದೆ. ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಮಾರ್ಗದ ಔಪಚಾರಿಕ ಘೋಷಣೆಯನ್ನು ನಿರೀಕ್ಷಿಸಲಾಗಿದೆ, ಇದು ದೇಶಾದ್ಯಂತ 300-400 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಘೋಷಿಸುವ ನಿರೀಕ್ಷೆಯಿದೆ.
ಈ ರೈಲು ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತದೆ ಮತ್ತು ಚೆನ್ನೈ ಸೆಂಟ್ರಲ್, ಕಟ್ಪಾಡಿ, ಕೆಎಸ್ಆರ್ ಬೆಂಗಳೂರು ನಗರ ಮತ್ತು ಮೈಸೂರಿನಲ್ಲಿ ನಿಲುಗಡೆಯೊಂದಿಗೆ ಮಾರ್ಗವನ್ನು ಒಳಗೊಂಡಿದೆ.
ಪ್ರಸ್ತುತ, ವಂದೇ ಭಾರತ್ ರೈಲುಗಳು ನವದೆಹಲಿ-ವಾರಣಾಸಿ, ನವದೆಹಲಿ-ಜಮ್ಮು ಮತ್ತು ಕಾಶ್ಮೀರದ ಶ್ರೀ ಮಾತಾ ವೈಷ್ಣೋದೇವಿ ಕತ್ರಾ, ಮುಂಬೈ-ಗಾಂಧಿನಗರ, ಹೊಸದಿಲ್ಲಿ-ಹಿಮಾಚಲ ಪ್ರದೇಶದ ಅಂಬ್ ಅಂದೌರಾ, ಚೆನ್ನೈ-ಮೈಸೂರು, ಹೌರಾ-ಹೊಸ ಜಲ್ಪೈಗುರಿ ನಡುವೆ ಓಡುತ್ತಿವೆ. ಬಿಲಾಸ್ಪುರ್-ನಾಗ್ಪುರ ಮತ್ತು ಸಿಕಂದರಾಬಾದ್-ವಿಶಾಖಪಟ್ಟಣಂ ನಡುವೆ ಸಂಚರಿಸಲಿದೆ.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆಗೆ ಸಜ್ಜಾಗಿದೆ. ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ದಕ್ಷಿಣ ಭಾರತವು ತನ್ನ ಮೊದಲ ವಂದೇ ಭಾರತ್ ರೈಲನ್ನು ಪಡೆದುಕೊಂಡಿತು, ಇದನ್ನು ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು.
ಮತ್ತಷ್ಟು ಓದಿ: Vande Bharat Express: ಮುಂದಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪುರಿ ಮತ್ತು ಹೌರಾ ನಡುವೆ ಸಂಚರಿಸುವ ಸಾಧ್ಯತೆ
ಮತ್ತೊಂದು ವಂದೇ ಭಾರತ್ ರೈಲನ್ನು ನೈಋತ್ಯ ರೈಲ್ವೆ (SWR) ಕರ್ನಾಟಕದ ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಪ್ರಸ್ತಾಪಿಸಿದೆ. ವಂದೇ ಭಾರತ್ ರೈಲುಗಳು ಅದರ ವೇಗ, ಸೌಕರ್ಯ ಮತ್ತು ವಿಮಾನದಂತಹ ವೈಶಿಷ್ಟ್ಯಗಳಿಂದಾಗಿ ಹಲವಾರು ಭಾಗಗಳಿಂದ ಪ್ರಶಂಸೆಯನ್ನು ಪಡೆದಿದ್ದರೂ, ಕೆಲವು ಬಾರಿ ಅಪಘಾತ, ಇನ್ನೂ ಕೆಲವು ಬಾರಿ ಕಲ್ಲು ತೂರಾಟಗಳು ನಡೆದಿದ್ದವು.
ಕಳೆದ ನವೆಂಬರ್ 11 ರಂದು ಬೆಂಗಳೂರಿನಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ಪ್ರಾರಂಭಿಸಿತು. ಇದಕ್ಕೆ ಪ್ರಯಾಣಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ರೈಲಿನಲ್ಲಿ ಒದಗಿಸಲಾಗಿ ವಿಶೇಷತೆಗಳತ್ತ ಆಕರ್ಷಿತರಾದ ಪ್ರಯಾಣಿಕರು ಸಾಮಾನ್ಯ ರೈಲುಗಳಿಂದ ವಂದೇ ಭಾರತ್ ರೈಲಿನತ್ತ ಹೆಚ್ಚು ಒಲವು ತೋರುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಜನವರಿ 15 ರಂದು ತೆಲಂಗಾಣದ ಸಿಕಂದರಾಬಾದ್ ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣಂ ಅನ್ನು ಸಂಪರ್ಕಿಸುವ ಈ ವರ್ಷದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು. ಇದು ದೇಶದ ಎಂಟನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾರಂಭವಾದಾಗಿನಿಂದ 100 ಪ್ರತಿಶತ ಆಕ್ಯುಪೆನ್ಸಿಯೊಂದಿಗೆ ಓಡುತ್ತಿದೆ.
ವರ್ಷಾಂತ್ಯದ ವೇಳೆಗೆ 75 ಮತ್ತು ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳನ್ನು ಓಡಿಸುವ ಗುರಿಯನ್ನು ರೈಲ್ವೇ ಇಲಾಖೆ ಹೊಂದಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ