ಮದುವೆಯಾಗಲು ಯುವತಿ ಸಿಗದಿದ್ದಕ್ಕೆ ಮನನೊಂದು ಯುವಕ ವಿಷ ಸೇವಿಸಿ ಆತ್ಮಹತ್ಯೆ

| Updated By: ವಿವೇಕ ಬಿರಾದಾರ

Updated on: Jan 16, 2024 | 9:14 AM

ಮದುವೆಯಾಗಲು ಯುವತಿ ಸಿಗದಿದ್ದಕ್ಕೆ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೂಡ್ಲಿಗಿ ತಾಲೂಕಿನ‌ ಗುಡೇಕೋಟೆ ಗ್ರಾಮದಲ್ಲಿ ನಡೆದಿದೆ. ಗುಡೇಕೋಟೆ ಗ್ರಾಮದ ಬಿ.‌ಮಧುಸೂದನ್ (26) ಮೃತ ದುರ್ದೈವಿ.

ಮದುವೆಯಾಗಲು ಯುವತಿ ಸಿಗದಿದ್ದಕ್ಕೆ ಮನನೊಂದು ಯುವಕ ವಿಷ ಸೇವಿಸಿ ಆತ್ಮಹತ್ಯೆ
ಮೃತ ಮಧುಸೂದನ್​​
Follow us on

ವಿಜಯನಗರ, ಜನವರಿ 16: ಮದುವೆಯಾಗಲು ಯುವತಿ (Girl) ಸಿಗದಿದ್ದಕ್ಕೆ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೂಡ್ಲಿಗಿ (Kudligi) ತಾಲೂಕಿನ‌ ಗುಡೇಕೋಟೆ ಗ್ರಾಮದಲ್ಲಿ ನಡೆದಿದೆ. ಗುಡೇಕೋಟೆ ಗ್ರಾಮದ ಬಿ.‌ಮಧುಸೂದನ್ (26) ಮೃತ ದುರ್ದೈವಿ. ಯುವಕನ ತಂದೆ ಅರೆ ಹುಚ್ಚನ ಹಾಗೆ ವರ್ತನೆ ಮಾಡುತ್ತಾನೆಂದು ಕನ್ಯೆ ಕೊಡಲು ನಿರಾಕರಿಸುತ್ತಿದ್ದರಂತೆ. ಇದರಿಂದ ಮನನೊಂದಿದ್ದ ಯುವಕ ಕುಡಿಯಲು ಆರಂಭಿಸಿದ್ದಾನೆ. ನನಗೆ ಮದುವೆ ಅಗಲ್ಲ ಎಂದು ಮಧುಸೂದನ್ ಜನವರಿ 5ರಂದು ವಿಷಸೇವಿಸಿದ್ದಾನೆ. ಕೂಡಲೆ ಮಧುಸೂಧನ್​​ನನ್ನು ಬಳ್ಳಾರಿಯ ವಿಮ್ಸ್​​ ಆಸ್ಪತ್ರೆಗ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಧುಸೂಧನ್​ ಮೃತಪಟ್ಟಿದ್ದಾನೆ. ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಕಲಬುರಗಿ: ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆ ಬಾವಿಗೆಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಳಂದ ಪಟ್ಟಣದ ಶರಣನಗರದಲ್ಲಿ‌ ನಡೆದಿದೆ. ಶರಣಮ್ಮ ಶಿವಲಿಂಗಪ್ಪಾ ಖೇಡ್ (48) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮಕ್ಕಳಾಗಲಿಲ್ಲ ಎಂದು ಜಿಗುಪ್ಸೆಗೊಂಡು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಆಳಂದ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:24 am, Tue, 16 January 24