ವಿಜಯನಗರ, ನ.02: ಕರ್ನಾಟಕ ಸಂಭ್ರಮ 50 ರ ಕಾರ್ಯಕ್ರಮವನ್ನು ಇಂದು(ನ.02) ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನಲೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ(Siddaramaiah) ಅವರು ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಜ್ಯೋತಿ ರಥಯಾತ್ರೆ(Jyoti RathaYatra)ಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ‘ಕರ್ನಾಟಕ ನಾಮಕರಣವಾಗಿ 50 ವರ್ಷ ಪೂರ್ಣ ಹಿನ್ನೆಲೆಯಲ್ಲಿ ಜ್ಯೋತಿ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. 1973 ನವೆಂಬರ್ 2 ರಂದು ಜ್ಯೋತಿ ರಥಯಾತ್ರೆಗೆ ಮೈಸೂರು ಜಿಲ್ಲೆಯವರಾದ ದೇವರಾಜ್ ಅರಸು ಅವರು ಇಲ್ಲಿಂದಲೇ ಚಾಲನೆ ನೀಡಿದ್ದರು. ಇದೀಗ ನಾನು ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿದ್ದೇನೆ ಎಂದರು.
‘ಕನ್ನಡ ಆಡಳಿತ ಭಾಷೆಯಾಗಿ, ಕನ್ನಡದಲ್ಲಿಯೇ ಆಡಳಿತ ನಡೆಯಬೇಕು ಎಂದು ಪ್ರತಿಪಾದಿಸಿದ್ದೆ. ಅಂದು ಇಂಗ್ಲಿಷ್ ಟೈಪ್ ರೈಟರ್ ತಗೆದು, ಕನ್ನಡ ಟೈಪರೇಟರ್ ಕೊಡಿಸುವ ಕೆಲಸ ಮಾಡಿದ್ದೆ. ನಮ್ಮ ನೆಲ, ಜಲ, ಭಾಷೆ, ಸಂಸ್ಕ್ರತಿಯನ್ನು ನಾವೆಲ್ಲರೂ ಗೌರವಿಸಬೇಕು. ಕರ್ನಾಟಕವನ್ನು ಸಂಪದ್ಭರಿತ ರಾಜ್ಯ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ನಾವು ದೇವರಲ್ಲಿ, ಜನರಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ, ಮೂಡನಂಬಿಕೆಯಲ್ಲಿ ಅಲ್ಲ ಎಂದರು.
ಇನ್ನು ಇದೇ ವೇಳೆ ‘ಸಮ ಸಮಾಜ ನಿರ್ಮಾಣಕ್ಕೆ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ನೀಡಿದ ಭರವಸೆಯನ್ನು ಈಡಿರಿಸಿದ್ದೇವೆ. ಕರ್ನಾಟಕದಲ್ಲಿ ಕನ್ನಡಕ್ಕೆ ಸಾರ್ವಭೌಮತ್ವ ಇರಬೇಕು. ನಾವು ಬೇರೆಯವರ ಜೊತೆ ಕನ್ನಡ ಬಿಟ್ಟು, ಬೇರೆ ಭಾಷೆ ಮಾತನಡಲ್ಲ ಎಂದು ಪ್ರತಿಜ್ಞೆ ಮಾಡಬೇಕು. ಈ ಮೂಲಕ ಕರ್ನಾಟಕದಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡೋದನ್ನು ಬಿಡಬೇಕು. ಬೇರೆ ಭಾಷೆ ಕಲಿರಿ. ಆದ್ರೆ, ಕನ್ನಡದಲ್ಲಿಯೇ ಮಾತನಾಡಿ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ