ವಿಜಯನಗರ: ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಬೈಕ್: ಯುವಕ ಸಾವು, ಯುವತಿ ಪಾರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 20, 2023 | 8:06 PM

ವಿಜಯನಗರ ಜಿಲ್ಲೆಯ ಹೊಸಪೇಟೆ (Hosapete) ತಾಲೂಕಿನ ಕಮಲಾಪುರ ಕೆರೆ ಏರಿ ಬಳಿ ನಿಯಂತ್ರಣ ತಪ್ಪಿ ಬೈಕ್​ಯೊಂದು ಕೆರೆಗೆ ಬಿದ್ದಿದೆ. ಈ ವೇಳೆ ಯುವಕ ಸಾವನ್ನಪ್ಪಿದ್ದು, ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯನಗರ: ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಬೈಕ್: ಯುವಕ ಸಾವು, ಯುವತಿ ಪಾರು
ಕೆರೆಗೆ ಬಿದ್ದು ಯುವಕ ಸಾವು
Follow us on

ವಿಜಯನಗರ, ಆ.20: ಬೈಕ್ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು, ಯುವಕ ಸಾವನ್ನಪ್ಪಿದರೆ, ಇತ್ತ ಯುವತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ( Hosapete) ತಾಲೂಕಿನ ಕಮಲಾಪುರ ಕೆರೆ ಏರಿ ಬಳಿ ನಡೆದಿದೆ. ಮರಿಯಮ್ಮ ಹಳ್ಳಿಯ ನಿವಾಸಿ, ರವಿಕುಮಾರ್ (28) ಮೃತ ಯುವಕ ಎಂದು ಗುರುತಿಸಲಾಗಿದೆ. ಆದರೆ, ಯುವತಿಯ ಗುರುತು ಇನ್ನೂ ಪತ್ತೆಯಾಗಲಿಲ್ಲ. ಇವರು ಹೊಸಪೇಟೆಯಿಂದ ಕಮಲಾಪುರಕ್ಕೆ ಹೋಗುವ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದ್ದು, ಬೈಕ್ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಾಯದಿಂದ ಯುವಕನ ಮೃತದೇಹವನ್ನು ಹೊರ ತೆಗೆಯಲಾಗಿದೆ. ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಘಟನೆ: ನೀರು ಕುಡಿಯಲು ಹೋಗಿದ್ದ ಬಾಲಕ ಸೇರಿ ಇಬ್ಬರು ಸಾವು

ಗದಗ: ನೀರು ಕುಡಿಯಲು ಹೋಗಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದಿದೆ. ನೀರು ಕುಡಿಯಲು ಕೆರೆಗೆ ಹೋಗಿದ್ದ ವ್ಯಕ್ತಿಯೊಬ್ಬ ಕಾಲು ಜಾರಿ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಮೃತನನ್ನು ಹುಣಸಿಕಟ್ಟಿ ಗ್ರಾಮದ ಶಂಕರಗೌಡ (38) ಎಂದು ಗುರುತಿಸಲಾಗಿದೆ. ನುರಿತ ಈಜು ತ‌ಜ‌್ಞರಿಂದ ಶವ ಹೊರತಗೆಯಲಾಗಿದ್ದು, ಕುಟುಂಬಸ್ಥರ ಆಕ್ರಂಧನ ಮುಗಿಲ ಮುಟ್ಟಿದೆ. ಈ ಕುರಿತು ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಇದನ್ನೂ ಓದಿ:ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ, ಮಗು ಸಾವು: ಪತ್ನಿ, ಪುತ್ರನಿಗೆ ಗುಂಡುಹಾರಿಸಿ ಪತಿ ಆತ್ಮಹತ್ಯೆ ಶಂಕೆ

ಇನ್ನು ಅಂತಹುದೇ ಘಟನೆಯೊಂದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದ ಸಮೀಪ ನಡದಿದೆ. ನೀರು ಕುಡಿಯಲು ಹೋಗಿದ್ದ ಬಾಲಕ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾಲುವೆಯಲ್ಲಿ ಈ ಘಟನೆ ನಡೆದಿದೆ. ಹಾರೋಗೇರಿ ಗ್ರಾಮದ ಅಭಿಷೇಕ ಮಾದರ (14) ಮೃತಪಟ್ಟ ದುರ್ಧೈವಿ. ನೀರು ಕುಡಿಯಲು ಹೋದಾಗ ಕಾಲು ಜಾರಿ ಬಿದ್ದು ನೀರಲ್ಲಿ ಮುಳುಗಿ ಹೊರಬರಲಾರದೆ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಸ್ಥಳೀಯರು ಅಭಿಷೇಕನ ಶವ ಹೊರತಗೆದಿದ್ದಾರೆ. ಸ್ಥಳದಲ್ಲಿ ಹೆತ್ತವರ ಹಾಗೂ ಸಂಬಂಧಿಕರ ಆಕ್ರಂಧನ ಮುಗಿಲಮುಟ್ಟಿದ್ದು, ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ