ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ, ಮಗು ಸಾವು: ಪತ್ನಿ, ಪುತ್ರನಿಗೆ ಗುಂಡುಹಾರಿಸಿ ಪತಿ ಆತ್ಮಹತ್ಯೆ ಶಂಕೆ
ಅಮೆರಿಕಾದಲ್ಲಿ ದಾವಣಗೆರೆ ಮೂಲದ ಮೂವರು ಸಾವು ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಗ, ಪತ್ನಿ ಕೊಂದು ಗುಂಡು ಹಾರಿಸಿಕೊಂಡು ತಾನು ಸಹ ಸಾವಿಗೆ ಶರಣಾಗಿದ್ದಾನೆ. ಮೂವರು ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ಸದ್ಯ ಬಾಲ್ಟಿಮೋರ್ ಕೌಂಟಿ ಪೊಲೀಸರಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಪ್ರಾಥಮಿಕ ಮಾಹಿತಿಯಿಂದ ಅವಳಿ ಹತ್ಯೆ, ಆತ್ಮಹತ್ಯೆ ವಿಚಾರ ಬಹಿರಂಗವಾಗಿದೆ.
ದಾವಣಗೆರೆ, ಆಗಸ್ಟ್ 20: ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ (couple), ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 15ರಂದು ರಾತ್ರಿ ಮಗು ಯಶ್ ಹಾಗೂ ಪತ್ನಿ ಪ್ರತಿಭಾಗೆ ಗುಂಡುಹಾರಿಸಿ ಪತಿ ಯೋಗೇಶ್ ಸೂಸೈಡ್ ಮಾಡಿಕೊಂಡಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆ ಬಳಿಕ ಸಂಪೂರ್ಣ ಮಾಹಿತಿ ತಿಳಿಯಲಿದೆ. ಈ ಕುರಿತಾಗಿ ಅಮೆರಿಕದ ಬಾಲ್ಟಿಮೋರ್ ಕೌಂಟಿ ಪೊಲೀಸರಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ಸ್ವಗ್ರಾಮಕ್ಕೆ ಮೃತದೇಹಗಳನ್ನು ತರಿಸಿಕೊಡುವಂತೆ ಡಿಸಿ ಮೂಲಕ ಮೃತ ಯೋಗೇಶ್ ತಾಯಿ ಶೋಭಾ ಮನವಿ ಮಾಡಿಕೊಂಡಿದ್ದು, ಮನವಿ ಪತ್ರ ಸ್ವೀಕರಿಸಿ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ರವಾನೆ ಮಾಡಲಾಗಿದೆ.
ಅಮೆರಿಕಾದಲ್ಲಿಯೇ ಇರುವ ಮೃತ ಪ್ರತಿಭಾಳ ಸಹೋದರ ಸಂಬಂಧಿ ಸೋಮಶೇಖರ ಎಂಬುದರಿಗೆ ಮೂರು ಶವ ಸ್ವದೇಶಕ್ಕೆ ತರುವ ಜವಾಬ್ದಾರಿ ನೀಡಲಾಗಿದೆ.
ಮೃತ ಯೋಗೇಶ್ ನಿವಾಸಕ್ಕೆ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಭೇಟಿ
ದಾವಣಗೆರೆ ನಗರದ ವಿದ್ಯಾನಗರದಲ್ಲಿ ಇರುವ ಮೃತ ಎಚ್ಎನ್ ಯೋಗೇಶ್ ನಿವಾಸಕ್ಕೆ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಭೇಟಿ ನೀಡಿದ್ದು, ತಾಯಿ ಶೋಭಾ ಜೊತೆ ಮಾತು ಕತೆ ನಡೆಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ವಿದೇಶಾಂಗ ಇಲಾಖೆ ಜೊತೆ ಸಂಪರ್ಕ ಮಾಡಲಾಗಿದೆ. ಸ್ಥಳೀಯವಾಗಿ ಪೊಲೀಸ್ ಅಧಿಕಾರಿಗಳು ಸಾವು ಸಂಭವಿಸಿದ ಬಗ್ಗೆ ತನಿಖೆ ಮಾಡುತ್ತಿದ್ದಾರೆ.ಶವ ಸ್ವದೇಶಕ್ಕೆ ತರುವುದು ಇನ್ನಷ್ಟು ದಿನ ವಿಳಂಬ ಆಗಬಹುದು ಎಂದು ತಿಳಿಸಿದರು.
ಇದನ್ನೂ ಓದಿ: ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ, ಮಗು ಸಾವು: ಮೃತದೇಹ ತರಿಸಿಕೊಡುವಂತೆ ಸರ್ಕಾರಕ್ಕೆ ತಾಯಿ ಮನವಿ
ಪೊಲೀಸ್ ತನಿಖೆ ಮುಗಿದ ಬಳಕ ಮೂರು ಶವಗಳನ್ನ ಸ್ವದೇಶಕ್ಕೆ ತರಲು ಒಂದು ಎಜೆನ್ಸ್ ಸಹ ಗುರ್ತಿಸಲಾಗಿದೆ. ಮೃತನ ಸಹೋದರ ಪುನೀತ್ ಅಂತಾ ಇದ್ದಾರೆ. ಅವರಿಗೆ ಮಾಹಿತಿ ನೀಡಲಾಗಿದೆ. ಕುಟುಂಬ ಸದಸ್ಯರು ಶವಗಳನ್ನ ಸ್ವದೇಶಕ್ಕೆ ತರಲಿಕೆ ಒಪ್ಪಿದರೇ ಅಥವಾ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡುವ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಈ ಬಗ್ಗೆ ಎರಡು ಗಂಟೆಗೊಮ್ಮೆ ಮಾಹಿತಿ ಲಭ್ಯವಾಗುತ್ತಿದೆ. ಇದನ್ನ ಕುಟುಂಬ ಸದಸ್ಯರಿಗೆ ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಹೇಳಿದ್ದಾರೆ.
ಆಗಸ್ಟ್ 15ರಂದು ರಾತ್ರಿ, ಅಂದರೆ ಇಡೀ ದೇಶವೇ ಸ್ವಾತಂತ್ರ್ಯೋತ್ಸವ ಆಚರಣೆಯ ಸಂಭ್ರಮದಲ್ಲಿ ಇದ್ದರೇ ಅಲ್ಲಿ ಮೂರು ಜೀವಗಳು ರಕ್ತದ ಮಡುವಿನಲ್ಲಿ ಬಿದಿದ್ದವು. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ಯೋಗೇಶ್ ಮತ್ತು ಪತ್ನಿ ಪ್ರತಿಭಾ ಕೂಡಾ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಇದೇ ಟೆಕ್ಕಿ ಫ್ಯಾಮಿಲಿ ಅಮೆರಿಕಾದಲ್ಲಿ ವಾಸವಾಗಿತ್ತು.
ಇದನ್ನೂ ಓದಿ: ಬೆಂಗಳೂರು: ಸರಗಳ್ಳತನ ನಂತರ ಮಲೆ ಮಹದೇಶ್ವರನಿಗೆ ಹರಕೆ ಸಂದಾಯ ಮಾಡಿದ ಆರೋಪಿಗಳು, ಮುಂದೇನಾಯ್ತು?
ಅಲ್ಲೇ ಕೆಲಸ ಮಾಡುತ್ತಿದ್ದ ದಂಪತಿ ತಮ್ಮ ಪುತ್ರ ಆರು ವರ್ಷದ ಯಶ್ ಜತೆ ನೆಲಸಿದ್ದರು. ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ನಲ್ಲಿದ್ದ ದಂಪತಿಗೆ ಅದೇನ್ ಆಯ್ತೋ ಏನೋ ದೇವರಿಗೆ ಗೊತ್ತು. ಮೊದಲು ಪತ್ನಿ ಹಾಗೂ ಪುತ್ರನಿಗೆ ಗುಂಡಿಕ್ಕಿ ತಾನು ಸಹ ಗುಂಡು ಹಾಕಿಸಿಕೊಂಡು ಸಾವನ್ನಪ್ಪಿರುವುದಾಗಿ ಸದ್ಯ ಪೊಲೀಸ್ ಮಾಹಿತಿಯಿಂದ ಗೊತ್ತಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.