ವಿಜಯನಗರ ಜಿಲ್ಲೆಯಲ್ಲಿ ಮಳೆಗೆ 80ಕ್ಕೂ ಹೆಚ್ಚು ಮನೆ ಕುಸಿತ; ನದಿ ಪಾತ್ರದ 22 ಗ್ರಾಮಗಳ ಜನರ ಸ್ಥಳಾಂತರಕ್ಕೆ ಸೂಚನೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 28, 2023 | 12:42 PM

ವಿಜಯನಗರ ಜಿಲ್ಲೆಯಲ್ಲಿ ಮಹಾ ಮಳೆಗೆ ಜನರು ತತ್ತರಿಸಿ ಹೋಗಿದ್ದು, ಮಳೆ ಅವಾಂತರಕ್ಕೆ ಓರ್ವ ಮಹಿಳೆ ಬಲಿಯಾಗಿದರೆ, ಮೂವರಿಗೆ ಗಾಯಗಳಾಗಿವೆ. ಜೊತೆಗೆ ಮಳೆಗೆ ಕೂಡ್ಲಿಗಿ, ಹೂವಿನಹಡಗಲಿ, ಕೊಟ್ಟೂರು ತಾಲೂಕುಗಳಲ್ಲಿ 80ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿದೆ.

ವಿಜಯನಗರ ಜಿಲ್ಲೆಯಲ್ಲಿ ಮಳೆಗೆ 80ಕ್ಕೂ ಹೆಚ್ಚು ಮನೆ ಕುಸಿತ; ನದಿ ಪಾತ್ರದ 22 ಗ್ರಾಮಗಳ ಜನರ ಸ್ಥಳಾಂತರಕ್ಕೆ ಸೂಚನೆ
ಮಳೆಯಿಂದ ಕುಸಿದ ಮನೆಗಳು
Follow us on

ವಿಜಯನಗರ, ಜು.28: ರಾಜ್ಯಾದ್ಯಂತ ವರುಣನ ಅಬ್ಬರ ಹೆಚ್ಚಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಂತೆ ವಿಜಯನಗರ (Vijayanagara) ಜಿಲ್ಲೆಯಲ್ಲಿಯೂ ಮಹಾ ಮಳೆಗೆ ಜನರು ತತ್ತರಿಸಿ ಹೋಗಿದ್ದು, ಮಳೆ(Rain) ಅವಾಂತರಕ್ಕೆ ಓರ್ವ ಮಹಿಳೆ ಬಲಿಯಾಗಿದರೆ, ಮೂವರಿಗೆ ಗಾಯಗಳಾಗಿವೆ. ಹೌದು ಮಳೆಗೆ ಕೂಡ್ಲಿಗಿ, ಹೂವಿನಹಡಗಲಿ, ಕೊಟ್ಟೂರು ತಾಲೂಕುಗಳಲ್ಲಿ 80ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿದೆ. ಜೊತೆಗೆ ಜಿಲ್ಲೆಯಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಜಿಲ್ಲೆಯ 22 ಗ್ರಾಮಗಳ ನದಿ ಪಾತ್ರದ ಜನರ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ.

ಸತತ ಮಳೆಯಿಂದಾಗಿ ಅನ್ನದಾತ ಬೆಳೆದ ಬೆಳೆಗಳು ನೀರುಪಾಲು

ಬೀದರ್: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತ ಬೆಳೆದ ಬೆಳೆಗಳು ಜಲಾವೃತವಾಗಿದ್ದು, ಜಮೀನಿನಲ್ಲಿ ನಿಂತು ಕಣ್ಣಿರು ಹಾಕುತ್ತಿರುವ ಘಟನೆ ಬಸವಕಲ್ಯಾಣ ತಾಲೂಕಿನಲ್ಲಿ ನಡೆದಿದೆ. ಇನ್ನು ಮಳೆಯಿಂದಾಗಿ ಸೋಯಾ, ತೋಗರಿ, ಉದ್ದು, ಹೆಸರು ಬೆಳೆಗಳನ್ನು ತಡವಾಗಿ ಬಿತ್ತನೆ ಮಾಡಲಾಗಿತ್ತು. ಇದೀಗ ಮಳೆಯಿಂದ ಬೆಳೆಗಳು ನೀರು ಪಾಲಾಗಿದೆ. ಈ ಕುರಿತು ವೈಜ್ಞಾನಿಕವಾಗಿ ಸರ್ವೆ ಮಾಡಿ ಸೂಕ್ತ ಪರಿಹಾರ ಕೊಡುವಂತೆ ರೈತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಲಕ್ಕುಂಡಿ ಗ್ರಾಮದಲ್ಲಿ ಮಳೆಗೆ ಸೋರುತ್ತಿರುವ ಮನೆಗಳು; ತವರಿಗೆ ಹೋದ ಬಾಣಂತಿ, ದೇವಸ್ಥಾನದಲ್ಲಿ ಪತಿ ವಾಸ್ತವ್ಯ

ಮಳೆಗೆ ಧರೆಗುರಳಿದ ಮನೆ, ಕುಟುಂಬಸ್ಥರಿಗೆ ಸಣ್ಣಪುಟ್ಟ ಗಾಯ

ಬೆಳಗಾವಿ: ಜಿಲ್ಲೆಯಾದ್ಯಂತ ಬಿಟ್ಟು ಬಿಡದೇ ಸುರಿಯುತ್ತಿರುವ ಭಾರಿ ಮಳೆಗೆ ಮನೆ ಧರೆಗುರುಳಿದ ಘಟನೆ ನಡೆದಿದೆ. ಕುಟುಂಬಸ್ಥರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ಲಕ್ಷ್ಮೀ ಹೊಂಡೈ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಕುಟುಂಬಸ್ಥರು ಮನೆಯಲ್ಲಿದ್ದಾಗಲೇ ದುರ್ಘಟನೆ ಸಂಭವಿಸಿದೆ. ಗೋಡೆ ಬಿಳ್ಳುತ್ತಿದ್ದಂತೆ ಕೂಡಲೇ ಹೊರಗೆ ಓಡಿಬಂದು ಜೀವ ಉಳಿಸಿಕೊಂಡಿದ್ದಾರೆ. ಈ ಘಟನೆ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ