ಲಾಕ್​ಡೌನ್​ ಎಫೆಕ್ಟ್: ಸೂಕ್ತ ಬೆಲೆ ಸಿಗದೆ 20 ಎಕರೆಯಲ್ಲಿದ್ದ ನುಗ್ಗೆಕಾಯಿಯನ್ನು ನಾಶ ಮಾಡಿದ ವಿಜಯಪುರ ರೈತ

|

Updated on: May 15, 2021 | 1:01 PM

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕು ಅರಸೀಕೆರೆ ಗ್ರಾಮದ ರೈತ ಎನ್.ಹರೀಶ್ ನುಗ್ಗೆಕಾಯಿಯನ್ನು ಬೆಳೆದಿದ್ದರು. ಪ್ರತಿ ಎಕರೆಗೆ ತಲಾ ಒಂದು ಲಕ್ಷ ರೂಪಾಯಿ ವೆಚ್ಚಮಾಡಿದ್ದರು. ಲಾಕ್​ಡೌನ್​ ಹಿನ್ನೆಲೆ ಸಾಗಾಣಿಕೆ ಲಾರಿ ಹಾಗೂ ಸೂಕ್ತ ಬೆಲೆ ಇಲ್ಲದ ಹಿನ್ನೆಲೆ ನಾಳೆ ನಾಶದ ನಿರ್ಧಾರವನ್ನು ರೈತ ತೆಗೆದುಕೊಂಡರು.

ಲಾಕ್​ಡೌನ್​ ಎಫೆಕ್ಟ್: ಸೂಕ್ತ ಬೆಲೆ ಸಿಗದೆ 20 ಎಕರೆಯಲ್ಲಿದ್ದ ನುಗ್ಗೆಕಾಯಿಯನ್ನು ನಾಶ ಮಾಡಿದ ವಿಜಯಪುರ ರೈತ
ನುಗ್ಗೆಕಾಯಿಯನ್ನು ರೈತ ನಾಶ ಮಾಡಿದ್ದಾರೆ
Follow us on

ದಾವಣಗೆರೆ: ಕೊರೊನಾ ಸೋಂಕು ಭಾರತಕ್ಕೆ ಕಾಲಿಟ್ಟು ಒಂದು ವರ್ಷ ಕಳೆದು ಹೋಯಿತು. ಸೋಂಕಿನ ಆರ್ಭಟಕ್ಕೆ ಇಡೀ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಬದುಕು ಹೀನಾಯವಾಗಿತ್ತು. ಇನ್ನೇನು ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಯೋಚಿಸುವ ಹೊತ್ತಿಗೆ ಇದರ ಎರಡನೇ ಅಲೆ ಅಪ್ಪಸಿದೆ. ಹೀಗಾಗಿ ಬದುಕು ನಡೆಸುವುದೇ ಕಷ್ಟವಾಗಿದೆ. ಅದರಲ್ಲೂ ರೈತರ ಬದುಕಂತೂ ಹೇಳತೀರದಂತಾಗಿದೆ. ವ್ಯಾಪಾರವಿಲ್ಲದೆ ಬೆಳೆದ ಬೆಳೆಯನ್ನು ನಾಶ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ.

ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಾದ ಕಾರಣ ಹೆಚ್ಚು ವ್ಯಾಪಾರವಾಗುತ್ತಿಲ್ಲ. ಹೀಗಾಗಿ ರೈತ ಬೆಳೆಗೆ ಬೆಲೆ ಇಲ್ಲದಂತಾಗಿದೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ ರೈತರೊಬ್ಬರು ಬೆಳೆಯನ್ನು ನಾಶ ಮಾಡಿದ್ದಾರೆ. 20 ಎಕರೆ ಪ್ರದೇಶದಲ್ಲಿ ಬೆಳೆದ ನುಗ್ಗೆಕಾಯಿ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದ ರೈತ ಎನ್.ಹರೀಶ್ ಬೆಳೆಯನ್ನು ನಾಶ ಮಾಡಿದ್ದಾರೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕು ಅರಸೀಕೆರೆ ಗ್ರಾಮದ ರೈತ ಎನ್.ಹರೀಶ್ ನುಗ್ಗೆಕಾಯಿಯನ್ನು ಬೆಳೆದಿದ್ದರು. ಪ್ರತಿ ಎಕರೆಗೆ ತಲಾ ಒಂದು ಲಕ್ಷ ರೂಪಾಯಿ ವೆಚ್ಚಮಾಡಿದ್ದರು. ಲಾಕ್​ಡೌನ್​ ಹಿನ್ನೆಲೆ ಸಾಗಾಣಿಕೆ ಲಾರಿ ಹಾಗೂ ಸೂಕ್ತ ಬೆಲೆ ಇಲ್ಲದ ಹಿನ್ನೆಲೆ ನಾಳೆ ನಾಶದ ನಿರ್ಧಾರವನ್ನು ರೈತ ತೆಗೆದುಕೊಂಡರು. ಬೆಲೆ ಇಲ್ಲದೇ ಬೆಳೆ ಇಟ್ಟುಕೊಂಡಿರುವುದು ದಂಡ ಎಂದು ನುಗ್ಗೆಯನ್ನು ಸಂಪೂರ್ಣವಾಗಿ ತೆಗೆದು ಬೇರೆ ಬೆಳೆಯನ್ನು ಬೆಳೆಯುವ ಯೋಜನೆಯನ್ನು ರೂಪಿಸಿದ್ದಾರೆ.

ಲೋಡ್‌ಗಟ್ಟಲೆ ಟೊಮೆಟೊವನ್ನು ರಸ್ತೆ ಬದಿ ಸುರಿದ ರೈತರು
ಕೋಲಾರ: ಟೊಮೆಟೊಗೆ ಸೂಕ್ತ ಬೆಲೆ ಸಿಗದ ಕಾರಣ ಲೋಡ್‌ಗಟ್ಟಲೆ ಟೊಮೆಟೊವನ್ನು ರೈತರು ರಸ್ತೆ ಬದಿ ಸುರಿದಿದ್ದಾರೆ. ಜಿಲ್ಲೆಯ ಮುಳಬಾಗಿಲು ತಾಲೂಕಿನ ಎನ್.ವಡ್ಡಹಳ್ಳಿ ಮಾರ್ಕೆಟ್ ಬಳಿ ಈ ಘಟನೆ ನಡೆದಿದೆ. 15 ಕೆ.ಜಿ. ಒಂದು ಬಾಕ್ಸ್​ಗೆ 10 ರುಪಾಯಿಗೂ ಮಾರಾಟವಾಗದೆ ಕಂಗಾಲಾದ ರೈತರು ರಸ್ತೆ ಬದಿಯಲ್ಲಿ ಬೆಳೆದ ಬೆಳೆಯನ್ನು ಸುರಿದು ಬರಿಗೈಯಲ್ಲಿ ಮನೆಗೆ ತೆರಳಿದರು.

ಇದನ್ನೂ ಓದಿ

ರಾಜಕಾರಣಿಗಳೇ ಹುಷಾರು… ಅವತರಿಸಿದ್ದಾನೆ ನಕಲಿ ಪೋಲ್​ ಸ್ಟ್ರಾಟೆಜಿಸ್ಟ್​ ಪ್ರಶಾಂತ್ ಕಿಶೋರ್!

ಕೊರೊನಾ ನಿಯಮ ಉಲ್ಲಂಘಿಸಿ ಮಡಿಕೇರಿ ಮೆಡಿಕಲ್ ವಿದ್ಯಾರ್ಥಿಗಳ ಜಾಲಿ ಟ್ರಿಪ್; ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ

(Vijayapura farmer destroyed a 20 acre drumstick crop without a proper price)

Published On - 12:11 pm, Sat, 15 May 21