AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕಾರಣಿಗಳೇ ಹುಷಾರು… ಅವತರಿಸಿದ್ದಾನೆ ನಕಲಿ ಪೋಲ್​ ಸ್ಟ್ರಾಟೆಜಿಸ್ಟ್​ ಪ್ರಶಾಂತ್ ಕಿಶೋರ್!

Prashant Kishor: ಲೂಧಿಯಾನಾ ಗ್ರಾಮೀಣ ವಿಭಾಗದ ಜಂಟಿ ಪೊಲೀಸ್ ಆಯುಕ್ತ (JCP) ಸಚಿನ್​ ಶರ್ಮಾ ಹೇಳುವಂತೆ ಪ್ರಮುಖ ಆರೋಪಿ ಗೌರವ್​​ ಶರ್ಮಾಗೂ ಪೋಲ್​ ಸ್ಟ್ರಾಟೆಜಿಸ್ಟ್​ ಪ್ರಶಾಂತ್ ಕಿಶೋರ್ ಅವರಿಗೂ ಯಾವುದೇ ಸಂಪರ್ಕ ಇಲ್ಲ. ಬಂಧಿತ ರಾಕೇಶ್​ ಕುಮಾರ್​ ಭಾಸಿನ್ ಮತ್ತು ರಜತ್ ಕುಮಾರ್​ ರಾಜಾ ಅವರಿಬ್ಬರೂ ಮೊದಲು ಟಿಕೆಟ್​ ಆಕಾಂಕ್ಷಿಗಳನ್ನು ಸಂಪರ್ಕಿಸಿ, ಚುನಾವಣಾ ಟಿಕೆಟ್​ ಕೊಡಿಸುವ ಮಾತುಗಳನ್ನಾಡುತ್ತಿದ್ದರಂತೆ.

ರಾಜಕಾರಣಿಗಳೇ ಹುಷಾರು... ಅವತರಿಸಿದ್ದಾನೆ ನಕಲಿ ಪೋಲ್​ ಸ್ಟ್ರಾಟೆಜಿಸ್ಟ್​ ಪ್ರಶಾಂತ್ ಕಿಶೋರ್!
ಸಾಂಕೇತಿಕ ಚಿತ್ರ
ಸಾಧು ಶ್ರೀನಾಥ್​
|

Updated on:May 15, 2021 | 11:38 AM

Share

ಪ್ರಶಾಂತ್ ಕಿಶೋರ್​ ಗೊತ್ತಲ್ಲಾ?​ ವಿದೇಶದಲ್ಲಿ ಶಿಕ್ಷಣ ಪಡೆದು ಭಾರತದಲ್ಲಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗುವಲ್ಲಿ ಮಹತ್ವದ ಪ್ರಚಾರ ಕಾರ್ಯಭಾರ ನಿಭಾಯಿಸಿದ್ದವರು. ಆನಂತರ ಮೋದಿ ತಂಡದಿಂದ ದೂರವಾಗಿ ಅವರ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡು ಇತ್ತೀಚೆಗೆ ಪಶ್ಚಿಮ ಬಂಗಾಲದ ಮಮತಾ ಬ್ಯಾನರ್ಜಿ ಅವರು ಪುನಃ ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪಿಸುವಲ್ಲಿ ಗುರುತರ ಪಾತ್ರ ವಹಿಸಿದ್ದರು. ಆದಾದ ಬಳಿಕ.. ಈ ಚುನಾವಣಾ ರಾಯಭಾರ ಕೆಲಸಗಳು ಸಾಕು. ಸ್ವಲ್ಪ ಕಾಲ ಚುನಾವಣಾ ಪ್ರಚಾರಗಳಿಂದ ವಿಮುಖನಾಗುವೆ ಎಂದು ಸ್ವತಃ ಅವರೇ ಘೋಷಿಸಿದ್ದರು. ಆದರೆ ಅವರ ಅನುಪಸ್ಥಿತಿ ಕಾಡುತ್ತದೆ ಅಂತಾನೋ ಏನೋ ಅವರ ನಕಲಿಯೊಬ್ಬ ಅವತರಿಸಿದ್ದಾನೆ. ಆದರೆ ಅವನು ಅಪರಾವತಾರವನ್ನು ಆರಂಭದಲ್ಲೇ ಪೊಲೀಸರು ಚಿವುಟಿ ಹಾಕಿದ್ದಾರೆ. ಅವನೊಬ್ಬನ್ನಷ್ಟೇ ಅಲ್ಲ; ಅವನ ಗ್ಯಾಂಗ್​ ಅನ್ನೂ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

ಇದೆಲ್ಲಾ ಘಟಿಸಿರುವುದು ಲೂಧಿಯಾನಾ​ದಲ್ಲಿ. ಆರೋಪಿ ಮೊದಲು ಪಂಜಾಬ್​ನ ಬಾಟ್ಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ತಾನೇ ಎಂದು ನಕಲಿಯಾಗಿ ಗುರುತಿಸಿಕೊಂಡಿದ್ದಾನೆ. ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್​ ಕೊಡಿಸುವುದಾಗಿ ಸಂಗ್ರೂರ್​ನ ಇಬ್ಬರು ಸ್ಥಳೀಯ ನಾಯಕರು ಮತ್ತು ಜಲಂಧರ್​ನ ಮಾಜಿ ಮೇಯರ್​ ಒಬ್ಬರಿಗೆ ಟಿಕೆಟ್​ ಕೊಡಿಸುವ ಭರವಸೆ ನೀಡಿದ್ದಾನೆ ಈ ನಕಲಿ ಆಸಾಮಿ. ಅಷ್ಟೇ ಅಲ್ಲ ಲೂಧಿಯಾನಾದ ಹಾಲಿ ಶಾಸಕನಿಗೂ ಮತ್ತೆ ಟಿಕೆಟ್​ ಭಾಗ್ಯ ಕಲ್ಪಿಸುವುದಾಗಿ ಈ ಗ್ಯಾಂಗ್​ ಭರವಸೆ ನೀಡಿತ್ತಂತೆ!

ಲೂಧಿಯಾನಾ​ ಪೊಲೀಸರು ಶುಕ್ರವಾರ ಇಬ್ಬರನ್ನು ಅರೆಸ್ಟ್ ಮಾಡಿದ್ದರು. ಅವರು ನೀಡಿದ ಮಾಹಿತಿಯಂತೆ ಅವರ ತಂಡದ ನಾಯಕ ಪೋಲ್​ ಸ್ಟ್ರಾಟೆಜಿಸ್ಟ್​ ಪ್ರಶಾಂತ್ ಕಿಶೋರ್​ ತಾನೇ ಎಂದು ಹೇಳಿಕೊಂಡು ಅನೇಕ ರಾಜಕೀಯ ನೇತಾರರಿಗೆ ಯಾಮಾರಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಸದರಿ ನಕಲಿ ಪ್ರಶಾಂತ್ ಕಿಶೋರ್ ಎಂಬಾತ​ ಕಾಂಗ್ರೆಸ್​ ಪಕ್ಷದ ವತಿಯಿಂದ ಮುಂದಿನ ವರ್ಷ ವಿಧಾನಸಭಾ ಚುನಾವಣೆಗೆ ಟಿಕೆಟ್​ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ ಎಂಬ ಮಾಹಿತಿಯೂ ಹೊರಬಿದ್ದಿದೆ.

ರಾಕೇಶ್​ ಕುಮಾರ್​ ಭಾಸಿನ್ ಮತ್ತು ರಜತ್ ಕುಮಾರ್​ ರಾಜಾ ಬಂಧಿತರು, ಇಬ್ಬರೂ ಶಿವ ಸೇನಾ (ಸೂರ್ಯವಂಶಿ) ಸದಸ್ಯರು ಎಂದು ತಿಳಿದುಬಂದಿದೆ. ಗೌರವ್​​ ಶರ್ಮಾ ಎಂಬುವವನ್ನು ಈಗ ಪರಾರಿಯಾಗಿದ್ದಾನೆ. ಈ ಮೂವರೂ ಸೇರಿಕೊಂಡು 5 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಲಪಟಾಯಿಸಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ತಂಡದ ಮುಖ್ಯಸ್ಥನಾಗಿದ್ದ ಗೌರವ್​​ ಶರ್ಮಾ ತಾನು ಪೋಲ್​ ಸ್ಟ್ರಾಟೆಜಿಸ್ಟ್​ ಪ್ರಶಾಂತ್ ಕಿಶೋರ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದರೆ ಉಳಿದಿಬ್ಬರು ಅವನಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರಂತೆ.

ರಾಕೇಶ್​ ಕುಮಾರ್​ ಭಾಸಿನ್ ಶಿವ ಸೇನಾದ (ಸೂರ್ಯವಂಶಿ) ಅಖಿಲ ಭಾರತ ಅಧ್ಯಕ್ಷನಾಗಿದ್ದರೆ ರಜತ್ ಕುಮಾರ್​ ರಾಜಾ ಅದೇ ಸಂಘಟನೆಯ ಸೆಕ್ರೆಟರಿ! ಕುತೂಹಲದ ಸಂಗತಿಯೆಂದ್ರೆ ಈಗ ಸಿಕ್ಕಿಬಿದ್ದಿರುವ ಖದೀಮ ರಾಕೇಶ್​ ಕುಮಾರ್​ ಭಾಸಿನ್​ಗೆ ತೀವ್ರಗಾಮಿಗಳಿಂದ ಜೀವಬೆದರಿಕೆ ಇದೆಯೆಂದು ಪಂಜಾಬ್​ ಸರ್ಕಾರ ಅವನಿಗೆ ನಾಲ್ಕು ಮಂದಿ ಅಂಗರಕ್ಷಕರ ಮೂಲಕ ಭದ್ರತೆ ನೀಡುತ್ತಿತ್ತು!

ನಕಲಿ ಪೋಲ್​ ಸ್ಟ್ರಾಟೆಜಿಸ್ಟ್​ ಪ್ರಶಾಂತ್ ಕಿಶೋರ್ ಕಾರ್ಯವಿಧಾನ ಹೀಗಿತ್ತು…

ಲೂಧಿಯಾನಾ ಗ್ರಾಮೀಣ ಭಾಗದ ಜಂಟಿ ಪೊಲೀಸ್ ಆಯುಕ್ತ (JCP) ಸಚಿನ್​ ಶರ್ಮಾ ಹೇಳುವಂತೆ ಪ್ರಮುಖ ಆರೋಪಿ ಗೌರವ್​​ ಶರ್ಮಾಗೂ ಪೋಲ್​ ಸ್ಟ್ರಾಟೆಜಿಸ್ಟ್​ ಪ್ರಶಾಂತ್ ಕಿಶೋರ್ ಅವರಿಗೂ ಯಾವುದೇ ಸಂಪರ್ಕ ಇಲ್ಲ. ಬಂಧಿತ ರಾಕೇಶ್​ ಕುಮಾರ್​ ಭಾಸಿನ್ ಮತ್ತು ರಜತ್ ಕುಮಾರ್​ ರಾಜಾ ಅವರಿಬ್ಬರೂ ಮೊದಲು ಟಿಕೆಟ್​ ಆಕಾಂಕ್ಷಿಗಳನ್ನು ಸಂಪರ್ಕಿಸಿ, ಚುನಾವಣಾ ಟಿಕೆಟ್​ ಕೊಡಿಸುವ ಮಾತುಗಳನ್ನಾಡುತ್ತಿದ್ದರಂತೆ.

ಬಳಿಕ, ಕಿಂಗ್​ಪಿನ್​ ಗೌರವ್​​ ಶರ್ಮಾನೊಂದಿಗೆ ಸಂಪರ್ಕ ಕುದುರಿಸುತ್ತಿದ್ದರಂತೆ. ಅವನೋ.. ತಾನೇ ಪೋಲ್​ ಸ್ಟ್ರಾಟೆಜಿಸ್ಟ್​ ಪ್ರಶಾಂತ್ ಕಿಶೋರ್ ಅಂತಾ ಹೇಳಿಕೊಂಡು ಟಿಕೆಟ್​ ಆಕಾಂಕ್ಷಿಗಳನ್ನು ಪುಸಲಾಯಿಸುತ್ತಿದ್ದನಂತೆ! ಕೇವಲ ಪಂಜಾಬ್​ ಅಷ್ಟೇ ಅಲ್ಲ; ಪಕ್ಕದ ಹರ್ಯಾಣಾ, ಬಿಹಾರ, ರಾಜಸ್ಥಾನ ಮತ್ತಿತರ ರಾಜ್ಯಗಳ ಅನೇಕ ಟಿಕೆಟ್​ ಆಕಾಂಕ್ಷಿಗಳು ಗೌರವ್​​ ಶರ್ಮಾ ಗ್ಯಾಂಗ್​ ಮೋಡಿಗೆ ಸುಲಭದ ತುತ್ತಾಗಿದ್ದಾರೆ ಎಂದು JCP ತಿಳಿಸಿದ್ದಾರೆ.

(Gang promising election tickets busted by Ludhiana Police kingpin Gaurav Sharma posed as Prashant Kishor)

Prashant Kishor: ರಾಜಕೀಯ ಪಕ್ಷಗಳಿಗೆ ಸಲಹೆ ನೀಡುವ ಕೆಲಸಕ್ಕೆ ಗುಡ್​ಬೈ ಹೇಳಿದ ಪ್ರಶಾಂತ್ ಕಿಶೋರ್

Published On - 11:34 am, Sat, 15 May 21

Follow Us
ಕೊಟ್ಟ ಮಾತು ಉಳಿಸಿಕೊಳ್ತೇವೆ: ವಿಧಾನಸಭೆಯಲ್ಲಿ ವಿಜಯ್ ಮೊದಲ ಭಾಷಣ
ಕೊಟ್ಟ ಮಾತು ಉಳಿಸಿಕೊಳ್ತೇವೆ: ವಿಧಾನಸಭೆಯಲ್ಲಿ ವಿಜಯ್ ಮೊದಲ ಭಾಷಣ
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್