ಏಮ್ಸ್ ಪ್ರವೇಶ ಪರೀಕ್ಷೆಯಲ್ಲಿ ವಿಜಯಪುರದ ವಿದ್ಯಾರ್ಥಿನಿ ದೇಶಕ್ಕೇ ಪ್ರಥಮ
ಜನರಲ್ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ವಿದ್ಯಾರ್ಥಿನಿ ಡಿ.ಎಂ.ದಿವ್ಯಾ ಶೇ.67.08 ಅಂಕಗಳನ್ನು ಗಳಿಸುವ ಮೂಲಕ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ವಿಜಯಪುರ: ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಆಯೋಜಿಸಿದ್ದ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ನಗರದ ವೈದ್ಯಕೀಯ ವಿದ್ಯಾರ್ಥಿನಿ ದಿವ್ಯಾ ದೇಶಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ.
ಜನರಲ್ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ವಿದ್ಯಾರ್ಥಿನಿ ಡಿ.ಎಂ.ದಿವ್ಯಾ ಶೇ.67.08 ಅಂಕಗಳನ್ನು ಗಳಿಸುವ ಮೂಲಕ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ನವೆಂಬರ್ 20ರಂದು ಪರೀಕ್ಷೆ ನಡೆದಿತ್ತು.
ವಿಜಯಪುರ ಸೆಷನ್ಸ್ ಕೋರ್ಟ್ನ ಹಿರಿಯ ವಕೀಲ ಅರವಿಂದ ಹಿರೊಳ್ಳಿ ಪುತ್ರಿ ದಿವ್ಯಾ, ಬಿಎಲ್ಡಿಇ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ ಪಡೆದಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ನಲ್ಲಿ ಎಂಡಿ, ಪಾಂಡಿವೇರಿಯ ಜಿಪ್ ಮೇರ್ (JIPMER) ನಲ್ಲಿ ಫೆಲೋಷಿಪ್ ಇನ್ ಕ್ರಿಟಿಕಲ್ ಕೇರ್ ಹಾಗೂ ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಫೆಲೋಷಿಪ್ ಇನ್ ನ್ಯೂರೋ ಕ್ರಿಟಿಕಲ್ ಕೇರ್ ವ್ಯಾಸಂಗ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಕೊವಿಡ್ ಎರಡನೇ ಅಲೆ ಆತಂಕ; ತಜ್ಞರ ಜೊತೆ ಸಭೆ ನಡೆಸಿ ಅಂತಿಮ ನಿರ್ಧಾರ ಅಂದ್ರು ಡಾ.ಕೆ.ಸುಧಾಕರ್
ಭಾರತ್ ಬಂದ್ಗೆ ಹರಿದುಬರುತ್ತಿದೆ ಬೆಂಬಲ: ನಾಳೆ ಕಾಣಸಿಗುತ್ತದೆ ರಾಜ್ಯ ರೈತರ, ಕಾರ್ಮಿಕರ ಬಲಾಬಲ
Published On - 2:34 pm, Mon, 7 December 20