ವಿಜಯಪುರ, ಜ.06: ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ವಿಜಯಪುರ (Vijayapura) ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ‘ಕಂಬಳಿ ಮೇಲೆ ಅಕ್ಕಿಯಿಂದ ಮಂಡಲ ಹಾಕಿ, ಕೊರಳಲ್ಲಿ ಮೆಣಸಿಕನಾಯಿ ಹಾಗೂ ಲಿಂಬೆಕಾಯಿ ಕಟ್ಟಿಕೊಂಡು ವಿಚಿತ್ರ ರೀತಿಯಲ್ಲಿ ವ್ಯಕ್ಯಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಡಿವೆಪ್ಪ (43) ನೇಣು ಹಾಕಿಕೊಂಡು ಆತ್ಮಹತ್ಯಗೆ ಶರಣಾದ ವ್ಯಕ್ತಿ.
ಇತ ಪಿತ್ರಾರ್ಜಿತವಾಗಿ ಬಂದಿದ್ದ 35 ಎಕರೆಗೂ ಆಧಿಕ ಜಮೀನು ಮಾರಾಟ ಮಾಡಿದ್ದ. ಮಧ್ಯ ಸೇವನೆ ಹಾಗೂ ಇತರೆ ಚಟಗಳ ದಾಸನಾಗಿದ್ದ ಅಡಿವೆಪ್ಪ, ಆಸ್ತಿ ಮಾರಾಟ ಮಾಡಿದ ಬಳಿಕ ಮಾನಸಿಕವಾಗಿ ಆಘಾತಗೊಂಡಿದ್ದನಂತೆ. ಈ ಹಿನ್ನಲೆ ತನ್ನ ಎರಡೂ ಕೈಗಳಲ್ಲಿ ಕೆಂಪು ಬಟ್ಟೆಯಲ್ಲಿ ನಿಂಬೆ ಹಣ್ಣು ಕಟ್ಟಿಕೊಂಡು ಇಂದು ಮುಂಜಾನೆ ಬೇವಿನ ಮರಕ್ಕೆ ನೇಣು ಹಾಕಿಕೊಂಡು ವಿಚಿತ್ರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:Iowa School Shootout: ಅಯೋವಾ ಶಾಲೆಯಲ್ಲಿ ಗುಂಡಿನ ದಾಳಿ; ವಿದ್ಯಾರ್ಥಿ ಸಾವು, ಆರೋಪಿ ಆತ್ಮಹತ್ಯೆ
ಬೆಳಗಾವಿ: ಗೂಡ್ಸ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಶಿಕ್ಷಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಅಥಣಿಯ ಗುಡ್ಡದ ಲಕ್ಷ್ಮೀ ದೇಗುಲ ಬಳಿ ನಡೆದಿದೆ. ಮಸರಗುಪ್ಪಿ ಗ್ರಾಮದ ಶಿಕ್ಷಕ ರವಸಾಬ್ R.ಹಿಪ್ಪರಗಿ(57) ಮೃತವ್ಯಕ್ತಿ. ಘಟನಾ ಸ್ಥಳಕ್ಕೆ ಅಥಣಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:37 pm, Sat, 6 January 24