ಭೀಮಾತೀರದ ನಟೋರಿಯಸ್ ಮೃತ ಹಂತಕನ ಹೆಸರಲ್ಲಿ ಆಕ್ಟಿವ್ ಆದ ಮತ್ತೊಂದು ಗ್ಯಾಂಗ್; ರೌಡಿ ಪರೇಡ್ ನಡಿಸಿ ಡಿಎಂಸಿ ಗ್ಯಾಂಗ್ ಬೆವರಿಳಿಸಿದ ಎಸ್ಪಿ ಆನಂದಕುಮಾರ್

| Updated By: ಆಯೇಷಾ ಬಾನು

Updated on: Jun 26, 2022 | 5:38 PM

ಡಿಎಂಸಿ ಗ್ಯಾಂಗ್ ಧರ್ಮರಾಜ‌ ಸಾವಿಗೆ ಪ್ರತೀಕಾರವಾಗಿ ಮಹಾದೇವ ಭೈರಗೊಂಡ ಮೇಲೆ ದಾಳಿ ಮಾಡಿದ್ದರು. ಇದೀಗಾ ಜಾಮೀನಿನ ಮೇಲಿರೋ ಡಿಎಂಸಿ ಗ್ಯಾಂಗ್ ನ ಕೆಲವರು ಏನಾದರೂ ಆ್ಯಕ್ಟಿವಿಟೀಸ್ ಮಾಡಿದರೆ ಹುಷಾರ್ ಎಂದು ಡಿಎಂಸಿ ಗ್ಯಾಂಗ್ ಗೆ ಎಸ್ಪಿ ಆನಂದಕುಮಾರ್ ವಾರ್ನ್ ಮಾಡಿದ್ದಾರೆ.

ಭೀಮಾತೀರದ ನಟೋರಿಯಸ್ ಮೃತ ಹಂತಕನ ಹೆಸರಲ್ಲಿ ಆಕ್ಟಿವ್ ಆದ ಮತ್ತೊಂದು ಗ್ಯಾಂಗ್; ರೌಡಿ ಪರೇಡ್ ನಡಿಸಿ ಡಿಎಂಸಿ ಗ್ಯಾಂಗ್ ಬೆವರಿಳಿಸಿದ ಎಸ್ಪಿ ಆನಂದಕುಮಾರ್
ರೌಡಿ ಪರೇಡ್ ನಡಿಸಿ ಡಿಎಂಸಿ ಗ್ಯಾಂಗ್ ಬೆವರಿಳಿಸಿದ ಎಸ್ಪಿ ಆನಂದಕುಮಾರ್
Follow us on

ವಿಜಯಪುರ: ಜಿಲ್ಲೆಯಲ್ಲಿ ಭೀಮಾತೀರದ ನಟೋರಿಯಸ್ ಹಂತಕ(Bheema Theera Notorious Killer) ದಿವಂಗತ ಧರ್ಮರಾಜ ಹೆಸರಲ್ಲಿ ಡಿಎಂಸಿ(ಧರ್ಮರಾಜ ಮಲ್ಲಿಕಾರ್ಜುನ ಚಡಚಣ) ಗ್ಯಾಂಗ್ ಆ್ಯಕ್ಟಿವ್ ಆಗಿದೆ. ವಿವಾದಾತ್ಮಕ ಪೊಲೀಸ್‌ ಎನ್ಕೌಂಟರ್ಗೆ ಬಲಿಯಾಗಿರೋ ಧರ್ಮರಾಜ ಮಲ್ಲಿಕಾರ್ಜುನ ಚಡಚಣ ಹೆಸರು ಬಳಕೆ ಮಾಡಿಕೊಂಡು ಗ್ಯಾಂಗ್ವೊಂದು ಫೀಲ್ಡ್ಗೆ ಇಳಿದಿದೆ.

ಇನ್ನು ನಿನ್ನೆ ನಡೆದ ರೌಡಿ ಪರೇಡ್ ನಲ್ಲಿ ಇದೇ‌ ಗ್ಯಾಂಗ್ ಸದಸ್ಯರಿಗೆ ಎಸ್ಪಿ ಆನಂದಕುಮಾರ್ ಬೆವರಿಳಿಸಿದ್ದಾರೆ. ಹಾಗೂ ಡಿಎಂಸಿ ಗ್ಯಾಂಗ್ ಬಗ್ಗೆ ಡಿಟೇಲ್ಸ್ ಕಲೆ ಹಾಕಲು ಹೇಳಿದ್ದು ಡಿಎಂಸಿ ಗ್ಯಾಂಗ್ ಅ್ಯಕ್ಟಿವಿಟೀಸ್ ಬಗ್ಗೆ ಪಿನ್ ಪಿನ್ ಟು‌ ಪಿನ್ ಮಾಹಿತಿ ಪಡೆದಿದ್ದಾರೆ. ಇದೇ ಗ್ಯಾಂಗ್ 2019 ನವೆಂಬರ್ 2 ರಂದು ಭೀಮಾತೀರದ ಮಹಾದೇವ ಭೈರಗೊಂಡ ಮೇಲೆ ದಾಳಿ ನಡೆಸಿತ್ತು. ಟಿಪ್ಪರ್ ಮೂಲಕ‌ ಅಪಘಾತ ನಡೆಸಿ ಕಂಟ್ರೀ ಪಿಸ್ತೂಲ್‌ನಿಂದ ಶೂಟ್ ಮಾಡಿತ್ತು. ದಾಳಿಯಲ್ಲಿ‌ ಇಬ್ಬರು ಸಾವಿಗೀಡಾಗಿದ್ದರು. ಮಹಾದೇವ ಭೈರಗೊಂಡ ಸಾವು ಬದುಕಿನ ಮದ್ಯೆ ಹೋರಾಡಿ ಬದುಕುಳಿದಿದ್ದಾರೆ. ಇದನ್ನೂ ಓದಿ: ಭಾರತದ ಮಾಧ್ಯಮ, ಮನರಂಜನಾ ಉದ್ಯಮ 2025ರ ವೇಳೆಗೆ 4 ಲಕ್ಷ ಕೋಟಿ ತಲುಪುವ ನಿರೀಕ್ಷೆ: ಅನುರಾಗ್ ಠಾಕೂರ್

ಡಿಎಂಸಿ ಗ್ಯಾಂಗ್ ಧರ್ಮರಾಜ‌ ಸಾವಿಗೆ ಪ್ರತೀಕಾರವಾಗಿ ಮಹಾದೇವ ಭೈರಗೊಂಡ ಮೇಲೆ ದಾಳಿ ಮಾಡಿದ್ದರು. ಇದೀಗಾ ಜಾಮೀನಿನ ಮೇಲಿರೋ ಡಿಎಂಸಿ ಗ್ಯಾಂಗ್ ನ ಕೆಲವರು ಏನಾದರೂ ಆ್ಯಕ್ಟಿವಿಟೀಸ್ ಮಾಡಿದರೆ ಹುಷಾರ್ ಎಂದು ಡಿಎಂಸಿ ಗ್ಯಾಂಗ್ ಗೆ ಎಸ್ಪಿ ಆನಂದಕುಮಾರ್ ವಾರ್ನ್ ಮಾಡಿದ್ದಾರೆ. ನಿನ್ನೆ ನಗರದ ಪೊಲೀಸ್ ಪರೇಡ್ ಮೈದಾನಲ್ಲಿ‌ ನಡೆದಿರೋ ರೌಡಿ ಪರೇಡ್ ವೇಳೆ ಡಿಎಂಸಿ ಗ್ಯಾಂಗ್ ನವರಿಗೆ ಎಸ್ಪಿ ಬೆವರಿಳಿಸಿದ್ದಾರೆ. ಇದನ್ನೂ ಓದಿ: ಮಂತ್ರಿಗ್ರೂಪ್ಸ್‌ನ ಸಿಎಂಡಿ ಸುಶೀಲ್ ಪಾಂಡುರಂಗ ಬಂಧನದ ಅಸಲಿ ಕಾರಣ ಬಯಲು; ಅಕ್ರಮದ ಗೂಡಿನ ಆರೋಪದಲ್ಲಿ ವಂಚನೆಯ ಮೊತ್ತವೆಷ್ಟು ಗೊತ್ತಾ?