ಮಂತ್ರಿಗ್ರೂಪ್ಸ್‌ನ ಸಿಎಂಡಿ ಸುಶೀಲ್ ಪಾಂಡುರಂಗ ಬಂಧನದ ಅಸಲಿ ಕಾರಣ ಬಯಲು; ಅಕ್ರಮದ ಗೂಡಿನ ಆರೋಪದಲ್ಲಿ ವಂಚನೆಯ ಮೊತ್ತವೆಷ್ಟು ಗೊತ್ತಾ?
ಮೊದಲಿಗೆ ಸುಶೀಲ್ ಪಾಂಡುರಂಗ ವಶಕ್ಕೆ ಪಡೆದು ಇಡಿ ವಿಚಾರಣೆ ನಡೆಸಿದೆ. ಈ ಹಿಂದೆ ಕೂಡ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಜೂ.1ರಂದು ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿತ್ತು. ಜೂ.24ರಂದು ಸುಶೀಲ್ ಪಾಂಡುರಂಗ ವಿಚಾರಣೆಗೆ ಹಾಜರಾಗಿದ್ದರು.
ಬೆಂಗಳೂರು: ರಾಜಧಾನಿ ಬೆಂಗಳೂರು ರಿಯಲ್‌ಎಸ್ಟೇಟ್ ಹಬ್ ಆಗಿ ಯಾವ್ದೋ ಕಾಲ ಆಗಿದೆ. ಲೆಕ್ಕವಿಲ್ಲದಷ್ಟು ರಿಯಲ್‌ಎಸ್ಟೇಟ್ ಕಂಪನಿಗಳು, ಡೆವಲಪರ್ಸ್‌ಗಳು ಸಿಲಿಕಾನ್ ಸಿಟಿಯಲ್ಲಿ ಬೀಡುಬಿಟ್ಟಿದೆ. ಅದ್ರಲ್ಲಿ ಮಂತ್ರಿಗ್ರೂಪ್ಸ್ ಸೌತ್ ಇಂಡಿಯಾದಲ್ಲೇ ದೈತ್ಯ ರಿಯಲ್‌ಎಸ್ಟೇಟ್ ಸಂಸ್ಥೆ. ಯಾವುದೇ ಏರಿಯಾಗೆ ಹೋದ್ರು ಮಂತ್ರಿಗ್ರೂಪ್ಸ್‌ನ(Mantri Group) ಅಪಾರ್ಟ್‌ಮೆಂಟ್‌ಗಳು, ಕಟ್ಟಡಗಳು ನಿಮಗೆ ಕಾಣಸಿಗುತ್ವೆ. ಇದೀಗ ಇದೇ ಮಂತ್ರಿಗ್ರೂಪ್ಸ್ ಮೇಲೂ ಅವ್ಯವಹಾರದ ತೂಗುಗತ್ತಿ ನೇತಾಡ್ತಿದೆ. ಇದಕ್ಕೆ ಸಂಬಂಧಿಸಿ ಮಂತ್ರಿಗ್ರೂಪ್ನ ಸಿಎಂಡಿ ಸುಶೀಲ್ ಪಾಂಡುರಂಗ್ನನ್ನು ಇಡಿ(Enforcement Directorate) ಬಂಧಿಸಿದೆ. ಆದ್ರೆ ಸಿಎಂಡಿ ಸುಶೀಲ್ ಪಾಂಡುರಂಗ(CMD Susheel Panduranga Mantri ) ಬಂಧನದ ಅಸಲಿ ಕಾರಣ ಏನು ಎಂಬುವುದು ಈಗ ಬಯಲಾಗಿದೆ.
ಮೊದಲಿಗೆ ಸುಶೀಲ್ ಪಾಂಡುರಂಗ ವಶಕ್ಕೆ ಪಡೆದು ಇಡಿ ವಿಚಾರಣೆ ನಡೆಸಿದೆ. ಈ ಹಿಂದೆ ಕೂಡ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಜೂ.1ರಂದು ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿತ್ತು. ಜೂ.24ರಂದು ಸುಶೀಲ್ ಪಾಂಡುರಂಗ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ವಿಚಾರಣೆಗೆ ಹಾಜರಾದಾಗ ದಾಖಲೆಗಳ ಕೊರತೆ ಎದುರಾಗಿತ್ತು. ಮುಂದಿನ ದಿನಗಳಲ್ಲಿ ಸುಶೀಲ್ ಸಾಕ್ಷಿ ನಾಶಪಡಿಸುವ ಸಾಧ್ಯತೆ ಇದೆ ಎಂದು ವಿದೇಶಕ್ಕೆ ಪರಾರಿಯಾಗುವ ಅನುಮಾನದಿಂದ ಇಡಿ ನಿನ್ನೆ ಸುಶೀಲ್ರನ್ನ ಬಂಧಿಸಿದೆ. ಇದನ್ನೂ ಓದಿ: ಒಂದು ಏರಿಯಾದಲ್ಲಿ ಮಾತ್ರ ರಸ್ತೆಯ ಡಾಂಬರು ಹಾಳಾಗಿದೆ; ತುರ್ತಾಗಿ ಕಾಮಗಾರಿ ಮಾಡಿದ್ದರಿಂದ ರಸ್ತೆ ಹಾಳಾಗಿದೆ, ಅದು ತಪ್ಪಾ? -ಕೆ.ಎಸ್. ಈಶ್ವರಪ್ಪ
ಅಕ್ರಮದ ಗೂಡಿನ ಆರೋಪದಲ್ಲಿ ವಂಚನೆಯ ಮೊತ್ತವೆಷ್ಟು ಗೊತ್ತಾ? ಇಡಿ ಸ್ಥಳೀಯ ಠಾಣೆಯಿಂದ ಪಡೆದ ಮಾಹಿತಿಯಲ್ಲಿದೆ ಸಾವಿರಾರು ಕೋಟಿಯ ವಂಚನೆಯ ದೂರಿನ ದಾಖಲೆ. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ನಲ್ಲಿ ಬರೋಬ್ಬರಿ 1200 ಮಂದಿಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಬರೋಬ್ಬರಿ 1350 ಕೋಟಿ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಹೂಡಿಕೆ ಮಾಡಿದ ಹಣ ಕೇಳಲು ಹೋದವರಿಗೆ ಕಂಪನಿ ಹಣ ವಾಪಾಸ್ ಮಾಡಿಲ್ಲ. ಫೋಜಿ ಸ್ಕೀಂ ಮೂಲಕ ಸಹ ಆಫರ್ ನೀಡಿ ವಂಚನೆ ಮಾಡಿರುವ ಸಂಗತಿ ಪತ್ತೆ ಆಗಿದೆ. ಫೋಜಿ ಸ್ಕೀಂ ಅಂತೆಯೇ buy-back ಅಡಿಯಲ್ಲಿ ಅಕ್ರಮ ನಡೆದಿದೆ. ಪ್ಲಾಟ್ ಕೊಡೊದಾಗಿ, ನಿವೇಶನ ಕೊಡೊದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ. 1350 ಕೋಟಿ ಹಣವೂ ಸುಶೀಲ್ ವಂಚಿಸಿದ್ದಾರೆ. ಏಳರಿಂದ ಹತ್ತು ವರ್ಷಗಳ ಹಿಂದೆಯೇ ಹಣ ಕಟ್ಟಿದ್ರು ಇದೂವರೆಗೂ ಮನೆ ನೀಡಿಯೇ ಇಲ್ಲ. ಹೂಡಿಕೆದಾರರ ಹಣವನ್ನು ವೈಯಕ್ತಿಕ ಬಳಕೆ ಮಾಡಿಕೊಂಡಿದ್ದಾರೆ. ಒಂದು ಕಡೆ ಹಣ ತೆಗೆದು ಮತ್ತೊಂದು ಕಡೆ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಮಂತ್ರಿ ಕಂಪನಿ ವಿವಿಧ ಬ್ಯಾಂಕ್ ಗಳಿಂದ 5000 ಕೋಟಿ ಲೋನ್ ಪಡೆದಿದೆ. ಪಡೆದ ಲೋನ್ ನಲ್ಲಿ 1000 ಕೋಟಿಯಲ್ಲಿ ಕೆಲವು ಅವಧಿ ಮೀರಿದ ಮೊತ್ತ ಇದೆ. ಇನ್ನು ಕೆಲವು ಕಾರ್ಯನಿರ್ವಹಿಸದ ಸ್ವತ್ತುಗಳಾಗಿವೆ(NPA). ಸದ್ಯ ಇಡಿ ವಶದಲ್ಲಿರುವ ಸುಶೀಲ್ ವಿಚಾರಣೆ ಮುಂದುವರೆದಿದೆ.
Published On - 5:00 pm, Sun, 26 June 22