ಒಂದು ಏರಿಯಾದಲ್ಲಿ ಮಾತ್ರ ರಸ್ತೆಯ ಡಾಂಬರು ಹಾಳಾಗಿದೆ; ತುರ್ತಾಗಿ ಕಾಮಗಾರಿ ಮಾಡಿದ್ದರಿಂದ ರಸ್ತೆ ಹಾಳಾಗಿದೆ, ಅದು ತಪ್ಪಾ? -ಕೆ.ಎಸ್. ಈಶ್ವರಪ್ಪ
ಒಂದು ಏರಿಯಾದಲ್ಲಿ ಮಾತ್ರ ರಸ್ತೆಯ ಡಾಂಬರು ಹಾಳಾಗಿದೆ. ಬೆಂಗಳೂರು, ಮೈಸೂರಿಗೆ ಪ್ರಧಾನಿ ಬೇಕಾದಷ್ಟು ಕೆಲಸ ಮಾಡಿದ್ದಾರೆ. ತುರ್ತಾಗಿ ಕಾಮಗಾರಿ ಮಾಡಿದ್ದರಿಂದ ರಸ್ತೆ ಹಾಳಾಗಿದೆ, ಅದು ತಪ್ಪಾ? ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಲಾಗಿದೆ. ಅದಕ್ಕಾಗಿ 40 ಪರ್ಸೆಂಟ್ ಸರ್ಕಾರ ಎನ್ನುವುದು ಸರಿ ಅಲ್ಲ ಎಂದು ಕೆ.ಎಸ್. ಈಶ್ವರಪ್ಪ ಗರಂ ಆಗಿದ್ದಾರೆ.
ಶಿವಮೊಗ್ಗ: ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಬಂದು ಹೋದ ಬಳಿಕ ರಸ್ತೆ ಹಾಳಾದ ವಿಚಾರಕ್ಕೆ ಸಂಬಂಧಿಸಿ ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಸಮರ್ಥನೆ ನೀಡಿದ್ದಾರೆ. ಒಂದು ಏರಿಯಾದಲ್ಲಿ ಮಾತ್ರ ರಸ್ತೆಯ ಡಾಂಬರು ಹಾಳಾಗಿದೆ. ಬೆಂಗಳೂರು, ಮೈಸೂರಿಗೆ ಪ್ರಧಾನಿ ಬೇಕಾದಷ್ಟು ಕೆಲಸ ಮಾಡಿದ್ದಾರೆ. ತುರ್ತಾಗಿ ಕಾಮಗಾರಿ ಮಾಡಿದ್ದರಿಂದ ರಸ್ತೆ ಹಾಳಾಗಿದೆ, ಅದು ತಪ್ಪಾ? ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಲಾಗಿದೆ. ಅದಕ್ಕಾಗಿ 40 ಪರ್ಸೆಂಟ್ ಸರ್ಕಾರ ಎನ್ನುವುದು ಸರಿ ಅಲ್ಲ ಎಂದು ಕೆ.ಎಸ್. ಈಶ್ವರಪ್ಪ ಗರಂ ಆಗಿದ್ದಾರೆ.
ಆರ್ಎಸ್ಎಸ್ ಗೆ ಬೈಯ್ಯುವ ಕೆಟ್ಟ ಚಾಳಿ ಸಿದ್ದರಾಮಯ್ಯಗೆ ಇತ್ತು. ಒಂದು ಏರಿಯಾದಲ್ಲಿ ರಸ್ತೆ ಹಾಳಾಗಿರೋದು ಹೌದು. ಪ್ರಧಾನಿ ಮೋದಿ ಬೆಂಗಳೂರು-ಮೈಸೂರಿಗೆ ಬೇಕಾದಷ್ಟು ಕೆಲಸ ಮಾಡಿದ್ದಾರೆ. ರಸ್ತೆ ಹಾಳಾಗಿರೋದು ತಪ್ಪೇ! ಅರ್ಜೆಂಟ್ ಲ್ಲಿ ಮಾಡುವಾಗ ಹಾಳಾಗಿದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ. ಅದಕ್ಕೊಸ್ಕರ 40% ಸರ್ಕಾರ ಎನ್ನುವುದು ಸರಿ ಅಲ್ಲ. ವಿಪಕ್ಷಗಳ ಹಣೆಬರಹಕ್ಕೆ ಒಂದೇ ಒಂದು ಕೇಸ್ ತೋರಿಸೋದಕ್ಕೆ ಆಗಿಲ್ಲ. ಕಂಟ್ರ್ಯಾಕ್ಟರ್ ಕೊಟ್ಟಿರೋದು ಸಾಬೀತು ಮಾಡಲಿ. ಪದೇ ಪದೇ ಪರ್ಸೆಂಟ್ ಕಮಿಷನ್ ಬಗ್ಗೆ ಹೇಳ್ತಾ ಹೋದರೆ ಉತ್ತರ ಕೊಡಲಾಗದು. ಆರ್ಎಸ್ಎಸ್ ವಿರುದ್ಧ ಹೇಳಿಕೆ ಸಿದ್ದರಾಮಯ್ಯ ಚಾಳಿ, ಕುಮಾರಸ್ವಾಮಿಗೆ ಹೋಗ್ತಾ ಇದೆ. ಕಾಂಗ್ರೆಸ್-ಜೆಡಿಎಸ್ ನಾಯಕರು ಮುಸ್ಲಿಂ ಓಲೈಕೆಗೆ ಆರ್ಎಸ್ಎಸ್ ಬೈಯ್ತಾರೆ. ಅವರ ಓಟು ಬಂದು ಬಿಡುತ್ತೆ ಎಂಬ ಚಿಂತನೆಯಲ್ಲಿದ್ದಾರೆ. ಓಟುಗಳನ್ನ ನೀವು ತಗೊಳ್ಳಿ. ಬಿಜೆಪಿ ಬಹಳ ಕಡೆ ಮುಸ್ಲಿಂ ಓಟಿನ ಮೇಲೆ ಅವಲಂಬಿಸಿಲ್ಲ. ಇದನ್ನೂ ಓದಿ: Ranji Trophy Final: ಅಂದು ನಾಯಕ, ಇಂದು ಕೋಚ್: ಚಾಂಪಿಯನ್ ತಂಡದ ಹಿಂದಿದೆ ಪಂಡಿತ್ ಪ್ಲ್ಯಾನ್..!
ಶಿವಮೊಗ್ಗದಲ್ಲಂತೂ ಆಗಿಲ್ಲ, ನಾನು ಅವರ ಬೀದಿಗೆ ಹೋಗಿ ಓಟು ಕೇಳಿಲ್ಲ. ಜನ ಓಟು ಕೊಡ್ತಾ ಇದ್ದಾರೆ, ಅಭಿವೃದ್ಧಿ ಕೆಲಸ ಆಗ್ತಾ ಇದೆ ಎಂದರು. ಇನ್ನು ಕುಮಾರಸ್ವಾಮಿ ಮುಂದಿನ ಸಿಎಂ ಭರವಸೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಯಾವ ಕಾರಣಕ್ಕೂ ಬೇರೆ ಪಕ್ಷದವರು ಸಿಎಂ ಆಗಲ್ಲ. ಬಿಜೆಪಿ ಪಕ್ಷದದವರೇ ಸಿಎಂ ಆಗ್ತಾರೆ. ಆಯಾ ಪಕ್ಷದ ಶಾಸಕರನ್ನ ಹಿಡಿದಿಟ್ಟುಕೊಳ್ಳೋದು ಅವರಿಗೆ ಬಿಟ್ಟಿದ್ದು. ಬಿಜೆಪಿ ಚೆನ್ನಾಗಿದೆ ಎಂದು ಬರ್ತಾರೆ. ಬಂದವರಿಗೆ ಬರಬೇಡಿ ಎಂದು ಹೇಳಲಾಗುತ್ತಾ? ರಾಜ್ಯದಲ್ಲಿ ಬಿಜೆಪಿ ಜೊತೆ ಬಂದವರು ಚೆನ್ನಾಗಿ ಕೆಲಸ ಮಾಡ್ತಾ ಇದ್ದಾರೆ. ಮನೆ ಮಗನನ್ನ ಚೆನ್ನಾಗಿ ಇಟ್ಟುಕೊಳ್ಳಿ. ಶಾಸಕರನ್ನ ನೀವು ವಿಶ್ವಾಸದಿಂದ ಇಟ್ಟುಕೊಳ್ಳಿ. ಅವರೇಕೆ ಬೇರೆ ಪಕ್ಷದ ಜೊತೆ ಹೋಗಬೇಕು? ಮಹಾರಾಷ್ಟ್ರದ ಸಿಎಂ ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಶಾಸಕರಿಗೆ ಬೇಸರ ಆಗಿತ್ತು. ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ನೋಡಿ ಮೆಚ್ಚಿದ್ದಾರೆ ಎಂದರು. ಇದನ್ನೂ ಓದಿ: ಕೇವಲ 6 ಸೆಕೆಂಡ್ಗಳಲ್ಲಿ ಸೋಡಾ ಕುಡಿದು ಮತ್ತೊಂದು ವಿಶ್ವದಾಖಲೆ ಬರೆದ ವೃತ್ತಿಪರ ಭಕ್ಷಕ!
Published On - 4:18 pm, Sun, 26 June 22