ಪ್ರೀತಿಸಿದ ಹುಡುಗಿ ಮೋಸ ಮಾಡಿದ್ದಕ್ಕೆ ಮನನೊಂದ ಯುವಕ; ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣು

ಮೃತ ದುರ್ದೈವಿ ದಿಲೀಪ್ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಯುವತಿ ಪರಿಚಯವಾಗಿದ್ದಾಳೆ. ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸಿ ಇಬ್ಬರು ದೂರವಾಗಿದ್ದರು.

ಪ್ರೀತಿಸಿದ ಹುಡುಗಿ ಮೋಸ ಮಾಡಿದ್ದಕ್ಕೆ ಮನನೊಂದ ಯುವಕ; ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣು
ಆತ್ಮಹತ್ಯೆಗೆ ಶರಣಾಗಿರುವ ಯುವಕ ದಿಲೀಪ್
TV9kannada Web Team

| Edited By: sandhya thejappa

Jun 27, 2022 | 12:27 PM

ಶಿವಮೊಗ್ಗ: ಪ್ರೀತಿಸಿದ ಹುಡುಗಿ ಮೋಸ ಮಾಡಿದ್ದಕ್ಕೆ ಮನನೊಂದ ಯುವಕ ವಿಡಿಯೋ (Video) ಮಾಡಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೊರಬದ ಬೆಟ್ಟದಕೂರ್ಲಿ ಗ್ರಾಮದಲ್ಲಿ ನಡೆದಿದೆ. 26 ವರ್ಷದ ದಿಲೀಪ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಹಾಸನ ಜಿಲ್ಲೆ ಅರಸೀಕೆರೆ ಮೂಲದವನು. ಕೆಲವು ವರ್ಷಗಳಿಂದ ದಿಲೀಪ್ ಮತ್ತು ಕುಟುಂಬಸ್ಥರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಪ್ರೀತಿಸಿದ ಯುವತಿ ಕೆಲವು ದಿನಗಳಿಂದ ಅಂತರ ಕಾಯ್ದುಕೊಂಡಿದ್ದಳು. ಇದೇ ಕಾರಣಕ್ಕೆ ಯುವಕ ಸಾವಿನ ದಾರಿ ಹಿಡಿದಿದ್ದಾನೆ ಎಂದು ತಿಳಿದು ಬಂದಿದೆ.

ಮೃತ ದುರ್ದೈವಿ ದಿಲೀಪ್ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಯುವತಿ ಪರಿಚಯವಾಗಿದ್ದಾಳೆ. ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸಿ ಇಬ್ಬರು ದೂರವಾಗಿದ್ದರು. ಬಳಿಕ ಮನೆಯವರು ಒಪ್ಪಲ್ಲ ಎಂಬ ಕಾರಣ ನೀಡಿ ಯುವತಿ ಪ್ರೀತಿ ನಿರಾಕರಿಸಿದ್ದಾಳೆ. ಕೆಲವು ದಿನಗಳಿಂದ ಯುವತಿ ಅಂತರ ಕಾಯ್ದುಕೊಂಡಿದ್ದಳು. ಇದೇ ಕಾರಣಕ್ಕೆ ಮನನೊಂದ ಯುವಕ ಬೆಟ್ಟದಕೂರ್ಲಿ ಗ್ರಾಮಕ್ಕೆ ಬಂದು ಕೆರೆಯ ಏರಿ ಮೇಲೆ ವಿಷ ಕುಡಿದಿದ್ದಾನೆ.

ವಿಷ ಕುಡಿದು ಬಿದ್ದಿದ್ದ ದಿಲೀಪ್​ನ ಕಂಡು ಸ್ಥಳೀಯರು ಶಿಕಾರಿಪುರ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳೆದಿದ್ದಾನೆ. ಆತ್ಮಹತ್ಯೆಗೆ ಮುನ್ನಾ ಯುವಕ ಮಾಡಿದ್ದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Alia Bhatt Pregnant: ಆಲಿಯಾ ಭಟ್​ ಪ್ರೆಗ್ನೆಂಟ್​; ರಣಬೀರ್​ ಕಪೂರ್​ ಜತೆ ಮದುವೆ ಆಗಿ ಎರಡೂವರೆ ತಿಂಗಳಲ್ಲಿ ಗುಡ್​ ನ್ಯೂಸ್​

ಹುಬ್ಬಳ್ಳಿಯಲ್ಲಿ ಯುವಕ ನೇಣಿಗೆ ಶರಣು: ಹುಬ್ಬಳ್ಳಿ: ತಾಲೂಕಿನ ನೂಲ್ವಿ ಗ್ರಾಮದಲ್ಲಿ ಯುವಕನೊಬ್ಬ ಪ್ರೇಮ ವೈಫಲ್ಯದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಕೊಟ್ರೇಶ್ ಮಠಪತಿ (20) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ‌ಯುವಕ. ಕೂಲಿ ಕೆಲಸ ಮಾಡಿಕೊಂಡಿದ್ದ ಈತ ಕಳೆದ ಎರಡೂ ದಿನಗಳ ಹಿಂದೆ ಮನೆ ಬಿಟ್ಟು ತೆರಳಿದ್ದ. ನೂಲ್ವಿ ಗ್ರಾಮದ ಹೊರ ವಲಯದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ‌.

ಇದನ್ನೂ ಓದಿ

ಇದನ್ನೂ ಓದಿ: Bank Holidays in July 2022: ಜುಲೈ ತಿಂಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ 14 ದಿನ ಬ್ಯಾಂಕ್​ ರಜಾ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada