Rohit Sharma: ರೋಹಿತ್ ಅಲಭ್ಯ: ಇಂಗ್ಲೆಂಡ್ ಫ್ಲೈಟ್ ಏರಿದ ಮತ್ತೊಬ್ಬ ಸ್ಟಾರ್ ಓಪನರ್: ಯಾರು ಗೊತ್ತೇ?

Mayank Agarwal: ರೋಹಿತ್ ಶರ್ಮಾ ಜಾಗಕ್ಕೆ ಬದಲಿ ಆಟಗಾರನಾಗಿ ಮಯಾಂಕ್ ಅಗರ್ವಾಲ್ ಅವರನ್ನು ಬಿಸಿಸಿಐ ಇಂಗ್ಲೆಂಡ್​ಗೆ ಕಳಿಹಿಸಿದೆ. ಮಯಾಂಕ್ ಕೂಡ ಇಂದು ಮುಂಜಾನೆ ಆಂಗ್ಲರ ನಾಡಿಗೆ ತಲುಪಿದ್ದಾರೆ.

Rohit Sharma: ರೋಹಿತ್ ಅಲಭ್ಯ: ಇಂಗ್ಲೆಂಡ್ ಫ್ಲೈಟ್ ಏರಿದ ಮತ್ತೊಬ್ಬ ಸ್ಟಾರ್ ಓಪನರ್: ಯಾರು ಗೊತ್ತೇ?
Team India
Follow us
TV9 Web
| Updated By: Vinay Bhat

Updated on: Jun 27, 2022 | 11:56 AM

ಇಂಗ್ಲೆಂಡ್ ವಿರುದ್ಧ ಬಾಕಿ ಇರುವ ಭಾರತ (England vs India) ಜೊತೆಗಿನ ಐದನೇ ಟೆಸ್ಟ್​ ಜುಲೈ 1 ರಿಂದ ಆರಂಭವಾಗಲಿದೆ. ಆದರೆ, ಇದಕ್ಕೂ ಮುನ್ನವೇ ನಾಯಕ ರೋಹಿತ್ ಶರ್ಮಾ (Rohit Sharma) ತಂಡದಿಂದ ಹೊರಬೀಳುವ ಭೀತಿಯಲ್ಲಿದ್ದಾರೆ. ಲೀಸೆಸ್ಟರ್​​​ ವಿರುದ್ಧದ ಅಭ್ಯಾಸ ಪಂದ್ಯದ ಮೂರನೇ ದಿನದಾಟ ಮುಗಿದ ಬಳಿಕ ನಡೆದ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಅವರಿಗೆ ಕೋವಿಡ್ -19 (Covid-19) ಸೋಂಕು ಇರುವುದು ದೃಢಪಟ್ಟಿದೆ. ಪ್ರಸ್ತುತ ಹಿಟ್​ಮ್ಯಾನ್ ತಂಡದ ಹೋಟೆಲ್​​ನಲ್ಲಿ ಪ್ರತ್ಯೇಕವಾಗಿದ್ದಾರೆ ಮತ್ತು ಬಿಸಿಸಿಐ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ. ಜುಲೈ 1 ರ ವೇಳೆಗೆ ಇವರು ಗುಣಮುಖರಾಗುವುದು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ಮತ್ತೊಬ್ಬ ಸ್ಟಾರ್ ಓಪನರ್ ಅನ್ನು ಬಿಸಿಸಿಐ ಆಂಗ್ಲರ ನಾಡಿಗೆ ಕಳುಹಿಸಿದೆ. ರೋಹಿತ್ ಬದಲು ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಹೌದು, ರೋಹಿತ್ ಶರ್ಮಾ ಜಾಗಕ್ಕೆ ಬದಲಿ ಆಟಗಾರನಾಗಿ ಮಯಾಂಕ್ ಅಗರ್ವಾಲ್ ಅವರನ್ನು ಬಿಸಿಸಿಐ ಇಂಗ್ಲೆಂಡ್​ಗೆ ಕಳಿಹಿಸಿದೆ. ಮಯಾಂಕ್ ಕೂಡ ಇಂದು ಮುಂಜಾನೆ ಆಂಗ್ಲರ ನಾಡಿಗೆ ತಲುಪಿದ್ದಾರೆ. ಆದರೆ, ಬಿಸಿಸಿಐ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ರೋಹಿತ್ ಅಲಭ್ಯರಾದರೆ ನೂತನ ನಾಯಕ ಯಾರು ಎಂಬ ಬಗ್ಗೆಯೂ ಸ್ಪಷ್ಟನೆ ನೀಡಿಲ್ಲ. ಆದರೆ, ಮೂಲಗಳ ಪ್ರಕಾರ ಪಂದ್ಯದ ಹೊತ್ತಿಗೆ ರೋಹಿತ್‌ ಚೇತರಿಸದೇ ಇದ್ದರೆ, ವೇಗಿ ಜಸ್‌ಪ್ರೀತ್‌ ಬುಮ್ರಾಗೆ ಕ್ಯಾಪ್ಟನ್‌ ಪಟ್ಟ ಸಿಗುವುದು ಖಾತ್ರಿಯಾಗಿದೆ.

Hardik Pandya: ಉಮ್ರಾನ್ ಮಲಿಕ್​ಗೆ ನೀಡಿದ್ದು ಕೇವಲ 1 ಓವರ್: ಇದಕ್ಕೆ ಹಾರ್ದಿಕ್ ಕೊಟ್ಟ ಕಾರಣವೇನು ಗೊತ್ತೇ?

ಇದನ್ನೂ ಓದಿ
Image
Bhuvneshwar Kumar: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಚೆಂಡೆಸೆದ ಭುವಿ? ಫ್ಯಾನ್ಸ್ ಶಾಕ್​..!
Image
India vs Leicestershire: ವಿರಾಟ್ ಕೊಹ್ಲಿ, ಪಂತ್ ಮಿಂಚಿನ ಪ್ರದರ್ಶನ: ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯ
Image
IND vs IRE: ಕೋಚ್ ಲಕ್ಷ್ಮಣ್ ಮಾಡಿದ ಮಾಸ್ಟರ್ ಪ್ಲಾನ್​ಗೆ ಮಕಾಡೆ ಮಲಗಿದ ಐರ್ಲೆಂಡ್: ಏನದು ಗೊತ್ತೇ?
Image
Umran Malik: ಭಾರತದ ಪರ ಆಡಿದ ಜಮ್ಮು-ಕಾಶ್ಮೀರದ 2ನೇ ಆಟಗಾರ ಉಮ್ರಾನ್ ಮಲಿಕ್: ಹಾಗಿದ್ರೆ ಮೊದಲಿಗ ಯಾರು?

ಭಾರತ ಟೆಸ್ಟ್‌ ತಂಡದ ಉಪನಾಯಕ ಕೆ. ಎಲ್‌ ರಾಹುಲ್‌ ಕೂಡ ಗಾಯದ ಸಮಸ್ಯೆ ಕಾರಣ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿಲ್ಲ. ಹೀಗಾಗಿ ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ಟೆಸ್ಟ್‌ ತಂಡದ ಉಪನಾಯಕನಾಗಿದ್ದ ಬುಮ್ರಾಗೆ ಕ್ಯಾಪ್ಟನ್‌ ಜವಾಬ್ದಾರಿ ಸಿಗಲಿದೆ ಎಂದು ವರದಿಗಳು ಹೇಳಿವೆ. ಆದರೆ, ಈ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.

ಮಯಾಂಕ್ ಅಗರ್ವಾಲ್ ಇಂಗ್ಲೆಂಡ್​ಗೆ ತಲುಪಿದ್ದಾರೆಯಾದರೂ ಕಣಕ್ಕಿಳಿಯುವುದು ಅನುಮಾನವಿದೆ. ಯಾಕೆಂದರೆ ತಂಡದಲ್ಲಿ ಈಗಾಗಲೇ ಶುಭ್ಮನ್ ಗಿಲ್ ಜೊತೆ ಕಣಕ್ಕಿಳಿಯಲು ಓಪನರ್ ಆಗಿ ಕೆಎಸ್ ಭರತ್, ಹನುಮಾ ವಿಹಾರಿ ಹಾಗೂ ಚೇತೇಶ್ವರ್ ಪೂಜಾರ ಇದ್ದಾರೆ. ಅಲ್ಲದೆ ಭರತ್ ಅಭ್ಯಾಸ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಇವರನ್ನು ಆಡಿಸಿದರೂ ಅಚ್ಚರಿ ಪಡಬೇಕಿಲ್ಲ.

ಬೆನ್ ಫೋಕ್ಸ್​ಗೆ ಕೊರೊನಾ:

ಭಾರತ ತಂಡದಲ್ಲಿ ಕೊರೊನಾ ಪ್ರಕರಣ ಕಂಡುಬಂದ ಬೆನ್ನಲ್ಲೇ ಇದೀಗ ಇಂಗ್ಲೆಂಡ್ ತಂಡದಲ್ಲೂ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬೆನ್ ಫೋಕ್ಸ್‌ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಕೊರೊನಾ ಸೋಂಕಿತ ಫಾಕ್ಸ್ ಹೆಡಿಂಗ್ಲಿ ಟೆಸ್ಟ್‌ನಿಂದ ತನ್ನ ಹೆಸರನ್ನು ಹಿಂಪಡೆದಿದ್ದಾರೆ. ಅವರ ಸ್ಥಾನಕ್ಕೆ ಸ್ಯಾಮ್ ಬಿಲ್ಲಿಂಗ್ಸ್ ಅವರನ್ನು ಇಂಗ್ಲೆಂಡ್ ತಂಡ ಸೇರಿಸಿಕೊಂಡಿದೆ. ಹಿಂದಿನ ಶನಿವಾರ, ಫಾಕ್ಸ್ ಬೆನ್ನುನೋವಿನಿಂದ ನರುಳುತ್ತಿದ್ದರಿಂದ ವಿಕೆಟ್ ಕೀಪಿಂಗ್ ಮಾಡಿರಲಿಲ್ಲ. ಹಾಗಾಗಿ ಜಾನಿ ಬೈರ್‌ಸ್ಟೋ ಅವರ ಸ್ಥಾನವನ್ನು ಭರ್ತಿ ಮಾಡಿದ್ದರು. ಶನಿವಾರ ಸಂಜೆ ಫಾಕ್ಸ್‌ ಅವರ ಕೊರೊನಾ ಪರೀಕ್ಷೆಯನ್ನು ಮಾಡಲಾಗಿದ್ದು, ಫಲಿತಾಂಶವು ಪಾಸಿಟಿವ್ ಎಂದು ತಿಳಿದುಬಂದಿದೆ.

Hardik Pandya: ಐರ್ಲೆಂಡ್ ವಿರುದ್ಧ ಕೇವಲ ಒಂದು ವಿಕೆಟ್ ಕಿತ್ತು ಇತಿಹಾಸ ನಿರ್ಮಿಸಿದ ಹಾರ್ದಿಕ್ ಪಾಂಡ್ಯ

ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ