IND vs IRE: ಕೋಚ್ ಲಕ್ಷ್ಮಣ್ ಮಾಡಿದ ಮಾಸ್ಟರ್ ಪ್ಲಾನ್ಗೆ ಮಕಾಡೆ ಮಲಗಿದ ಐರ್ಲೆಂಡ್: ಏನದು ಗೊತ್ತೇ?
Deepak Hooda: ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ (Ireland vs India) 7 ವಿಕೆಟ್ಗಳ ಅಮೋಘ ಗೆಲುವು ಕಂಡಿದೆ. ಕೋಚ್ ಲಕ್ಷ್ಮಣ್ ಹೊಸ ಬೆಳವಣಿಗೆ ಎಂಬಂತೆ ಆರಂಭಿಕ ಬ್ಯಾಟರ್ ಆಗಿ ಇಶಾನ್ ಕಿಶನ್ ಜೊತೆ ಆಲ್‌ರೌಂಡರ್ ದೀಪಕ್ ಹೂಡ ಅವರನ್ನು ಕಣಕ್ಕಿಳಿಸಿದರು. ಇದರಿಂದ ಐರ್ಲೆಂಡ್ ಯೋಜನೆಯಲ್ಲ ತಲೆಕೆಳಗಾಯಿತು.
ಡಬ್ಲಿನ್ನ ದಿ ವಿಲೇಜ್ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ (Ireland vs India) 7 ವಿಕೆಟ್ಗಳ ಅಮೋಘ ಗೆಲುವು ಕಂಡಿದೆ. ಮಳೆ ಕಾರಣ ಅಂದುಕೊಂಡ ಸಮಯಕ್ಕೆ ಪಂದ್ಯ ಶುರುವಾಗಲಿಲ್ಲ. ಹೀಗಾಗಿ ಉಭಯ ತಂಡಗಳಿಗೆ 8 ಓವರ್ ಖಡಿತಗೊಳಿಸಿ ತಲಾ 12 ಓವರ್ಗಳನ್ನಷ್ಟೆ ನೀಡಲಾಯಿತು. ದಕ್ಷಿಣ ಆಫ್ರಿಕಾ ಟಿ20 ಸರಣಿಯಲ್ಲಿ ಸತತವಾಗಿ ಟಾಸ್ ಸೋತಿದ್ದ ಭಾರತ ಇಲ್ಲಿ ಕೊನೆಗೂ ಟಾಸ್ ಗೆದ್ದಿತು. ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇತ್ತೀಚೆಗಷ್ಟೇ ಅಂತ್ಯಗೊಂಡ ಐಪಿಎಲ್ನಲ್ಲಿ ಅತಿ ವೇಗದ ಬೌಲಿಂಗ್‌ನಿಂದ ಮೋಡಿ ಮಾಡಿದ್ದ ಉಮ್ರಾನ್ ಮಲಿಕ್‌ಗೆ (Umran Malik) ಚೊಚ್ಚಲ ಅಂತರರಾಷ್ಟ್ರೀಯ ಕ್ರಿಕೆಟ್ ಆಡುವ ಅದೃಷ್ಟ ಒಲಿದು ಬಂತು. ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ಕೆಲ ಹೊಸ ಪ್ರಯೋಗ ನಡೆಸಿ ಇದರಲ್ಲಿ ಭರ್ಜರಿ ಯಶಸ್ಸು ಕೂಡ ಕಂಡರು.
ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡ 22 ರನ್ ಆಗುವ ಹೊತ್ತಿಗೆ 3 ವಿಕೆಟ್ ಕಳೆದುಕೊಂಡಿತು. ಆದರೆ, ಹ್ಯಾರಿ ಟೆಕ್ಟರ್ ಅವರು ಬಾರಿಸಿದ ಅರ್ಧಶತಕ ತಂಡಕ್ಕೆ ನೆರವಾಯಿತು. ಏಕಾಂಗಿ ಹೋರಾಟ ನಡೆಸಿದ ಟೆಕ್ಟರ್ 33 ಎಸೆತಗಳಲ್ಲಿ 6 ಫೋರ್ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡ ಅಜೇಯ 64 ರನ್‌ಗಳ ಕೊಡುಗೆ ಕೊಟ್ಟರು. ಪರಿಣಾಮ ಐರ್ಲೆಂಡ್ 12 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್‌ಗಳ ಸವಾಲಿನ ಮೊತ್ತವನ್ನೇ ದಾಖಲಿಸಿತು. ಭಾರತ ತಂಡದ ಪರ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಅವೇಶ್ ಖಾನ್ ಮತ್ತು ಯುಜ್ವೇಂದ್ರ ಚಹಲ್ ತಲಾ ಒಂದು ವಿಕೆಟ್ ಪಡೆದರು.
Umran Malik: ಭಾರತದ ಪರ ಆಡಿದ ಜಮ್ಮು-ಕಾಶ್ಮೀರದ 2ನೇ ಆಟಗಾರ ಉಮ್ರಾನ್ ಮಲಿಕ್: ಹಾಗಿದ್ರೆ ಮೊದಲಿಗ ಯಾರು?
Thank you to our fans in Ireland and across the UK for turning out in large numbers and cheering for #TeamIndia. ????
See you again on Tuesday. ?? #IREvIND pic.twitter.com/1UUm2m4D0g
— BCCI (@BCCI) June 26, 2022
ಟಾರ್ಗೆಟ್ ಬೆನ್ನಟ್ಟು ಬಂದ ಭಾರತ ಅಚ್ಚರಿಯ ನಿರ್ಧಾರ ತೆಗೆದುಕೊಂಡಿತು. ಕೋಚ್ ಲಕ್ಷ್ಮಣ್ ಹೊಸ ಬೆಳವಣಿಗೆ ಎಂಬಂತೆ ಆರಂಭಿಕ ಬ್ಯಾಟರ್ ಆಗಿ ಇಶಾನ್ ಕಿಶನ್ ಜೊತೆ ಆಲ್‌ರೌಂಡರ್ ದೀಪಕ್ ಹೂಡ ಅವರನ್ನು ಕಣಕ್ಕಿಳಿಸಿದರು. ಇದರಿಂದ ಐರ್ಲೆಂಡ್ ಯೋಜನೆಯಲ್ಲ ತಲೆಕೆಳಗಾಯಿತು. ಹೂಡ ಎದುರಿಸಿದ 29 ಎಸೆತಗಳಲ್ಲಿ 6 ಫೋರ್ ಮತ್ತು 2 ಸಿಕ್ಸರ್‌ಗಳೊಂದಿಗೆ ಅಜೇಯ 47 ರನ್ ಸಿಡಿಸಿ ತಂಡವನ್ನು ಸುಲಭವಾಗಿ ಗುರಿ ಮುಟ್ಟುವಂತೆ ಮಾಡಿದರು. ಮತ್ತೊಬ್ಬ ಓಪನರ್ ಇಶಾನ್ ಕಿಶನ್ 11 ಎಸೆತಗಳಲ್ಲಿ 26 ರನ್ ಕೊಡುಗೆ ಸಲ್ಲಿಸಿದರೆ, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 24 ರನ್ ಸಿಡಿಸಿದರು. ಐರ್ಲೆಂಡ್ ಪರ ಕ್ರೇಗ್ ಯಂಗ್ (18ಕ್ಕೆ 2) ಎರಡು ವಿಕೆಟ್ ಪಡೆದು ಗಮನ ಸೆಳೆದರು.
7 ವಿಕೆಟ್ಗಳ ಭರ್ಜರಿ ಜಯದೊಂದಿಗೆ ಭಾರತ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಮೂರು ಓವರ್ ಬೌಲಿಂಗ್ ಮಾಡಿ ಕೇವಲ 11 ರನ್ ನೀಡಿ 1 ವಿಕೆಟ್ ಕಿತ್ತ ಯುಜ್ವೇಂದ್ರ ಚಹಲ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು. ಅಂತಿಮ ಎರಡನೇ ಟಿ20 ಕದನ ಜೂನ್ 28 ರಂದು ಇದೇ ಮೈದಾನದಲ್ಲಿ ನಡೆಯಲಿದೆ.
IND vs IRE: ಟೀಂ ಇಂಡಿಯಾಕ್ಕೆ ಜಮ್ಮು ಎಕ್ಸ್‌ಪ್ರೆಸ್ ಪ್ರವೇಶ; ಉಮ್ರಾನ್ ಮಲಿಕ್‌ಗೆ ಚೊಚ್ಚಲ ಅವಕಾಶ