AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hardik Pandya: ಐರ್ಲೆಂಡ್ ವಿರುದ್ಧ ಕೇವಲ ಒಂದು ವಿಕೆಟ್ ಕಿತ್ತು ಇತಿಹಾಸ ನಿರ್ಮಿಸಿದ ಹಾರ್ದಿಕ್ ಪಾಂಡ್ಯ

IND vs IRE 1st T20I: ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ಮಾದರಿಯ ಕ್ರಿಕೆಟ್​​ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ 9ನೇ ನಾಯಕ ಹಾರ್ದಿಕ್ ಪಾಂಡ್ಯ ಆದರು.  ಇದರ ಜೊತೆಗೆ ವಿಶೇಷ ದಾಖಲೆ ಬರೆಯುವ ಮೂಲಕ ಇತಿಹಾಸ ಕೂಡ ನಿರ್ಮಾಣ ಮಾಡಿದ್ದಾರೆ.

Hardik Pandya: ಐರ್ಲೆಂಡ್ ವಿರುದ್ಧ ಕೇವಲ ಒಂದು ವಿಕೆಟ್ ಕಿತ್ತು ಇತಿಹಾಸ ನಿರ್ಮಿಸಿದ ಹಾರ್ದಿಕ್ ಪಾಂಡ್ಯ
Hardik Pandya IRE vs IND
TV9 Web
| Edited By: |

Updated on: Jun 27, 2022 | 9:24 AM

Share

ಐರ್ಲೆಂಡ್ (IND vs IRE) ವಿರುದ್ಧದ ಮೊದಲ ಟಿ20 ಹಾರ್ದಿಕ್ ಪಾಂಡ್ಯ (Hardik Pandya) ಅವರಿಗೆ ಮರೆಯಲಾಗದ ಪಂದ್ಯ. ಟಿ20 ಮಾದರಿಯ ಕ್ರಿಕೆಟ್​​ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ 9ನೇ ನಾಯಕ ಹಾರ್ದಿಕ್ ಆದರು.  ಇದರ ಜೊತೆಗೆ ವಿಶೇಷ ದಾಖಲೆ ಬರೆಯುವ ಮೂಲಕ ಇತಿಹಾಸ ಕೂಡ ನಿರ್ಮಾಣ ಮಾಡಿದ್ದಾರೆ. ಟಾಸ್ ಗೆದ್ದ ಟೀಮ್ ಇಂಡಿಯಾ (Team India) ನಾಯಕ ಹಾರ್ದಿಕ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ನಿರಂತರವಾಗಿ ಮಳೆ ಸುರಿಯುತ್ತಿದ್ದ ಪರಿಣಾಮ ನಿಗದಿಯಾದ ಸಮಯಕ್ಕೆ ಪಂದ್ಯ ಆರಂಭವಾಗಲಿಲ್ಲ. ಮಳೆ ನಿಂತ ಬಳಿಕ 8 ಓವರ್ ಖಡಿತಗೊಳಿಸಿ 12 ಓವರ್​ಗಳ ಪಂದ್ಯವನ್ನು ನಡೆಸಲು ನಿರ್ಧರಿಸಿದರು. ಐರ್ಲೆಂಡ್ ತಂಡ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯಿತು. ಭುವನೇಶ್ವರ್ ಕುಮಾರ್ ಆರಂಭದಲ್ಲೇ ವಿಕೆಟ್ ಕೀಳುವ ಮೂಲಕ ಭಾರತಕ್ಕೆ ಬ್ರೇಕ್ ಕೊಟ್ಟರು. ಇದರ ಬೆನ್ನಲ್ಲೇ ಹಾರ್ದಿಕ್ ಕೂಡ ಬೌಲಿಂಗ್ ಮಾಡಿದರು.

ಪಾಂಡ್ಯ ಎರಡನೇ ಓವರ್ ಬೌಲಿಂಗ್ ಮಾಡಿ ಪೌಲ್ ಸ್ಟಿರ್ಲಿಂಗ್ ವಿಕೆಟ್ ಕಿತ್ತರು. ಈ ಮೂಲಕ ವಿಶೇಷ ದಾಖಲೆ ಮಾಡಿದ್ದಾರೆ. ಟಿ20 ಕ್ರಿಕೆಟ್​​ನಲ್ಲಿ ಭಾರತ ಪರ ನಾಯಕರಾದ 9 ಆಟಗಾರರ ಪೈಕಿ ವಿಕೆಟ್ ಪಡೆದುಕೊಂಡ ಮೊದಲ ನಾಯಕ ಹಾರ್ದಿಕ್ ಪಾಂಡ್ಯ ಎನಿಸಿಕೊಂಡರು. ಈ ಹಿಂದೆ ವಿರೇಂದ್ರ ಸೆಹ್ವಾಗ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಅಜಿಂಕ್ಯಾ ರಹಾನೆ, ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ರಿಷಭ್ ಪಂತ್ ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಆದರೆ, ಇವರು ಯಾರೂ ನಾಯಕನಾಗಿ ವಿಕೆಟ್ ಪಡೆದುಕೊಂಡಿರಲಿಲ್ಲ. ಇದೀಗ ಹಾರ್ದಿಕ್ ಭಾರತ ಪರ ಯಾರೂ ಮಾಡಿರದ ಸಾಧನೆ ಮಾಡಿದ್ದಾರೆ.

India vs Leicestershire: ವಿರಾಟ್ ಕೊಹ್ಲಿ, ಪಂತ್ ಮಿಂಚಿನ ಪ್ರದರ್ಶನ: ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯ

ಇದನ್ನೂ ಓದಿ
Image
Umran Malik: ಭಾರತದ ಪರ ಆಡಿದ ಜಮ್ಮು-ಕಾಶ್ಮೀರದ 2ನೇ ಆಟಗಾರ ಉಮ್ರಾನ್ ಮಲಿಕ್: ಹಾಗಿದ್ರೆ ಮೊದಲಿಗ ಯಾರು?
Image
India vs Ireland 1st T20 Playing 11: ಮೊದಲ ಟಿ20 ಪಂದ್ಯಕ್ಕೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
Image
IND vs IRE: ಟೀಂ ಇಂಡಿಯಾಕ್ಕೆ ಜಮ್ಮು ಎಕ್ಸ್‌ಪ್ರೆಸ್ ಪ್ರವೇಶ; ಉಮ್ರಾನ್ ಮಲಿಕ್‌ಗೆ ಚೊಚ್ಚಲ ಅವಕಾಶ
Image
India vs Ireland, 1st T20, Highlights: ಹಾರ್ದಿಕ್- ಹೂಡ ಅಬ್ಬರ; ಭಾರತಕ್ಕೆ ಸುಲಭ ಜಯ

ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡ 22 ರನ್ ಆಗುವ ಹೊತ್ತಿಗೆ 3 ವಿಕೆಟ್ ಕಳೆದುಕೊಂಡಿತು. ಆದರೆ, ಹ್ಯಾರಿ ಟೆಕ್ಟರ್‌ ಅವರು ಬಾರಿಸಿದ ಅರ್ಧಶತಕ ತಂಡಕ್ಕೆ ನೆರವಾಯಿತು. ಏಕಾಂಗಿ ಹೋರಾಟ ನಡೆಸಿದ ಟೆಕ್ಟರ್‌ 33 ಎಸೆತಗಳಲ್ಲಿ 6 ಫೋರ್‌ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡ ಅಜೇಯ 64 ರನ್‌ಗಳ ಕೊಡುಗೆ ಕೊಟ್ಟರು. ಪರಿಣಾಮ ಐರ್ಲೆಂಡ್ 12 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್‌ಗಳ ಸವಾಲಿನ ಮೊತ್ತವನ್ನೇ ದಾಖಲಿಸಿತು.  ಭಾರತ ತಂಡದ ಪರ ಭುವನೇಶ್ವರ್‌ ಕುಮಾರ್‌, ಹಾರ್ದಿಕ್‌ ಪಾಂಡ್ಯ, ಅವೇಶ್‌ ಖಾನ್‌ ಮತ್ತು ಯುಜ್ವೇಂದ್ರ ಚಹಲ್ ತಲಾ ಒಂದು ವಿಕೆಟ್‌ ಪಡೆದರು.

ಟಾರ್ಗೆಟ್ ಬೆನ್ನಟ್ಟು ಬಂದ ಭಾರತ ಅಚ್ಚರಿಯ ನಿರ್ಧಾರ ತೆಗೆದುಕೊಂಡಿತು. ಕೋಚ್ ಲಕ್ಷ್ಮಣ್ ಹೊಸ ಬೆಳವಣಿಗೆ ಎಂಬಂತೆ ಆರಂಭಿಕ ಬ್ಯಾಟರ್‌ ಆಗಿ ಇಶಾನ್ ಕಿಶನ್ ಜೊತೆ ಆಲ್‌ರೌಂಡರ್‌ ದೀಪಕ್‌ ಹೂಡ ಅವರನ್ನು ಕಣಕ್ಕಿಳಿಸಿದರು. ಇದರಿಂದ ಐರ್ಲೆಂಡ್ ಯೋಜನೆಯಲ್ಲ ತಲೆಕೆಳಗಾಯಿತು. ಹೂಡ ಎದುರಿಸಿದ 29 ಎಸೆತಗಳಲ್ಲಿ 6 ಫೋರ್ ಮತ್ತು 2 ಸಿಕ್ಸರ್‌ಗಳೊಂದಿಗೆ ಅಜೇಯ 47 ರನ್‌ ಸಿಡಿಸಿ ತಂಡವನ್ನು ಸುಲಭವಾಗಿ ಗುರಿ ಮುಟ್ಟುವಂತೆ ಮಾಡಿದರು. ಮತ್ತೊಬ್ಬ ಓಪನರ್‌ ಇಶಾನ್ ಕಿಶನ್‌ 11 ಎಸೆತಗಳಲ್ಲಿ 26 ರನ್‌ ಕೊಡುಗೆ ಸಲ್ಲಿಸಿದರೆ, ಕ್ಯಾಪ್ಟನ್‌ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 24 ರನ್‌ ಸಿಡಿಸಿದರು. 7 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಭಾರತ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

IND vs IRE: ಕೋಚ್ ಲಕ್ಷ್ಮಣ್ ಮಾಡಿದ ಮಾಸ್ಟರ್ ಪ್ಲಾನ್​ಗೆ ಮಕಾಡೆ ಮಲಗಿದ ಐರ್ಲೆಂಡ್: ಏನದು ಗೊತ್ತೇ?

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ