ENG vs IND: ಟೀಂ ಇಂಡಿಯಾ ಆಯ್ತು, ಈಗ ಇಂಗ್ಲೆಂಡ್ ತಂಡದಲ್ಲೂ ಕೊರೊನಾ; ಪ್ರಮುಖ ಬ್ಯಾಟರ್​ಗೆ ಸೋಂಕು..!

ENG vs IND: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಬರ್ಮಿಂಗ್‌ಹ್ಯಾಮ್ ಟೆಸ್ಟ್‌ಗೆ ಅಪಾಯ ಎದುರಾಗಿದೆ. ಭಾರತ ತಂಡದಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು, ಇದೀಗ ಇಂಗ್ಲೆಂಡ್ ತಂಡದಲ್ಲೂ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.

ENG vs IND: ಟೀಂ ಇಂಡಿಯಾ ಆಯ್ತು, ಈಗ ಇಂಗ್ಲೆಂಡ್ ತಂಡದಲ್ಲೂ ಕೊರೊನಾ; ಪ್ರಮುಖ ಬ್ಯಾಟರ್​ಗೆ ಸೋಂಕು..!
ಬೆನ್ ಫೋಕ್ಸ್‌
TV9kannada Web Team

| Edited By: pruthvi Shankar

Jun 26, 2022 | 4:50 PM

ಭಾರತ ಮತ್ತು ಇಂಗ್ಲೆಂಡ್ (India and England) ನಡುವೆ ನಡೆಯಲಿರುವ ಬರ್ಮಿಂಗ್‌ಹ್ಯಾಮ್ ಟೆಸ್ಟ್‌ಗೆ ಅಪಾಯ ಎದುರಾಗಿದೆ. ಭಾರತ ತಂಡದಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು, ಇದೀಗ ಇಂಗ್ಲೆಂಡ್ ತಂಡದಲ್ಲೂ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬೆನ್ ಫೋಕ್ಸ್‌ (Ben Foakes) ಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಕೊರೊನಾ ಸೋಂಕಿತ ಫಾಕ್ಸ್ ಹೆಡಿಂಗ್ಲಿ ಟೆಸ್ಟ್‌ನಿಂದ ತನ್ನ ಹೆಸರನ್ನು ಹಿಂಪಡೆದಿದ್ದಾರೆ. ಅವರ ಸ್ಥಾನಕ್ಕೆ ಸ್ಯಾಮ್ ಬಿಲ್ಲಿಂಗ್ಸ್ ಅವರನ್ನು ಇಂಗ್ಲೆಂಡ್ ತಂಡ ಸೇರಿಸಿಕೊಂಡಿದೆ, ಆದರೂ ಅವರು ಈ ಬಗ್ಗೆ ಇನ್ನೂ ಐಸಿಸಿಯ ಅನುಮೋದನೆಯನ್ನು ಪಡೆದಿಲ್ಲ.

ಹಿಂದಿನ ಶನಿವಾರ, ಫಾಕ್ಸ್ ಬೆನ್ನುನೋವಿನಿಂದ ನರುಳುತ್ತಿದ್ದರಿಂದ ವಿಕೆಟ್ ಕೀಪ್ ಮಾಡಲಿಲ್ಲ. ಹಾಗಾಗಿ ಜಾನಿ ಬೈರ್‌ಸ್ಟೋ ಅವರ ಸ್ಥಾನವನ್ನು ಭರ್ತಿ ಮಾಡಿದ್ದರು. ಶನಿವಾರ ಸಂಜೆ ಫಾಕ್ಸ್‌ ಅವರ ಕೊರೊನಾ ಪರೀಕ್ಷೆಯನ್ನು ಮಾಡಲಾಗಿದ್ದು, ಫಲಿತಾಂಶವು ಪಾಸಿಟಿವ್ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Rohit Sharma: ಭಾರತಕ್ಕೆ ದೊಡ್ಡ ಆಘಾತ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೋವಿಡ್ ಪಾಸಿಟಿವ್

ಬೆನ್ ಫಾಕ್ಸ್ ಬದಲಿಗೆ ಬಿಲ್ಲಿಂಗ್ಸ್

ಟಿ20 ಬ್ಲಾಸ್ಟ್‌ನಲ್ಲಿ ಕೆಂಟ್ ಪರ ಕ್ರಿಕೆಟ್ ಆಡುತ್ತಿದ್ದ ಬಿಲ್ಲಿಂಗ್ಸ್ ಅವರನ್ನು ನೇರವಾಗಿ ಇಂಗ್ಲೆಂಡ್‌ನ ಪ್ಲೇಯಿಂಗ್ ಇಲೆವೆನ್‌ಗೆ ಸೇರಿಸಿಕೊಳ್ಳಲಾಗಿದೆ. ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್ ಆಡಲು ಇನ್ನೂ 5 ವಿಕೆಟ್ ಪಡೆಯಬೇಕಿದೆ. ಹೆಡಿಂಗ್ಲಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಬೆನ್ ಫಾಕ್ಸ್ ತಮ್ಮ ಖಾತೆಯನ್ನು ತೆರೆಯಲಿಲ್ಲ. 3 ಎಸೆತಗಳನ್ನು ಎದುರಿಸಿದ ಅವರು ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.

ಫಾಕ್ಸ್ ಭಾರತದ ವಿರುದ್ಧ ಆಡುವುದರ ಬಗ್ಗೆ ಸಸ್ಪೆನ್ಸ್

ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೊರಡಿಸಿದ ಹೇಳಿಕೆಯಲ್ಲಿ, ಬೆನ್ ಫಾಕ್ಸ್ ಹೊರತುಪಡಿಸಿ, ಬೇರೆ ಯಾವುದೇ ಆಟಗಾರರು ಕೊರೊನಾ ಪಾಸಿಟಿವ್ ಆಗಿಲ್ಲ ಎಂದು ಹೇಳಲಾಗಿದೆ. ಕೊರೊನಾ ಪಾಸಿಟಿವ್‌ನಿಂದಾಗಿ ಭಾರತ ವಿರುದ್ಧದ ಬರ್ಮಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಫಾಕ್ಸ್ ಆಡುವ ಬಗ್ಗೆ ಸಸ್ಪೆನ್ಸ್ ಇದೆ. ಆದರೆ, ಅದಕ್ಕೂ ಮುನ್ನ ಅವರು ಚೇತರಿಸಿಕೊಳ್ಳಲಿ ಎಂದು ಮಂಡಳಿ ಬಯಸುತ್ತಿದೆ.

ಭಾರತ ತಂಡದಲ್ಲೂ ಕೊರೊನಾ ದಾಳಿ

ಇದನ್ನೂ ಓದಿ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಟೌಡಿ ಸರಣಿ ಸದ್ಯ 2-1 ರಿಂದ ಟೀಂ ಇಂಡಿಯಾ ಪರವಾಗಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕೊರೊನಾ ಕಾರಣ ಈ ಸರಣಿಯ ಕೊನೆಯ ಟೆಸ್ಟ್ ಅನ್ನು ಕಳೆದ ವರ್ಷ ಮುಂದೂಡಲಾಗಿತ್ತು. ಆದರೆ ಅದಕ್ಕೂ ಮುನ್ನ ಭಾರತ ತಂಡದ ಪಾಳೆಯದಲ್ಲೂ ಕೊರೊನಾ ಮನೆ ಮಾಡಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಾಸಿಟಿವ್ ಎಂದು ಪತ್ತೆಯಾಗಿದ್ದು, ಸದ್ಯ ವೈದ್ಯರ ಮೇಲ್ವಿಚಾರಣೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಹಿತ್‌ಗೆ ಕೊರೊನಾ ಪಾಸಿಟಿವ್ ಆದ ನಂತರ ಈಗ ಎಲ್ಲಾ ಭಾರತೀಯ ಆಟಗಾರರಿಗೆ ಕೊರೊನಾ ಪರೀಕ್ಷೆ ನಡೆಯಲಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada