- Kannada News Photo gallery Cricket photos Robin uthappa wife sheetal uthappa pregnant photos goes viral
ಮತ್ತೆ ತಂದೆಯಾಗಲಿದ್ದಾರೆ ರಾಬಿನ್ ಉತ್ತಪ್ಪ; ಪತ್ನಿ ಶೀತಲ್ ಬೇಬಿ ಬಂಪ್ ಫೋಟೋಗಳು ಸಖತ್ ವೈರಲ್
Robin Uthappa: ರಾಬಿನ್ ಉತ್ತಪ್ಪ ಭಾರತದ ಪರ 46 ODI ಮತ್ತು 13 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ODIಗಳಲ್ಲಿ ಸುಮಾರು 26 ರ ಸರಾಸರಿಯಲ್ಲಿ ಒಟ್ಟು 934 ರನ್ ಗಳಿಸಿದ್ದಾರೆ.
Updated on:Jun 25, 2022 | 9:30 PM

ರಾಬಿನ್ ಉತ್ತಪ್ಪ ಮತ್ತೆ ತಂದೆಯಾಗಲಿದ್ದು, ಪತ್ನಿ ಶೀತಲ್ ಉತ್ತಪ್ಪ ಕೆಂಪು ಬಣ್ಣದ ಡ್ರೆಸ್‌ನಲ್ಲಿ ಬೇಬಿ ಬಂಪ್‌ನಲ್ಲಿ ಕಾಣಿಸಿಕೊಂಡಿರುವ ಸುಂದರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಉತ್ತಪ್ಪ ಅವರು ಪತ್ನಿ ಮತ್ತು ಮಗನೊಂದಿಗಿನ ಕೆಲವು ಸುಂದರವಾದ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಉತ್ತಪ್ಪ ದಂಪತಿಗಳ ಮನಮೋಹಕ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ, ಈ ದಂಪತಿಗಳ ಮೊದಲ ಮಗ ಮುಂಬರುವ ಮಗುವಿನ ಶಬ್ದವನ್ನು ಕೇಳುತ್ತಿರುವುದನ್ನು ಕಾಣಬಹುದು.

6 ವರ್ಷಗಳ ಹಿಂದೆ ಉತ್ತಪ್ಪ ಮತ್ತು ಶೀತಲ್ ಪರಸ್ಪರ ಕೈ ಹಿಡಿದಿದ್ದರು. ಇಬ್ಬರಿಗೂ ಐದು ವರ್ಷದ ಮಗನಿದ್ದಾನೆ. ಉತ್ತಪ್ಪ ಅವರ ಪತ್ನಿ ಶೀತಲ್ ಅವರು ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಮೆಟರ್ನಿಟಿ ಫೋಟೋಶೂಟ್ ಅನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡ ಫೋಟೋಗಳಲ್ಲಿ, ಮೂವರೂ ಬಿಳಿ ಟಿ-ಶರ್ಟ್ ಮತ್ತು ಡೆನಿಮ್ ಜೀನ್ಸ್ ಧರಿಸಿದ್ದಾರೆ. ರಾಬಿನ್ ಉತ್ತಪ್ಪ ಭಾರತದ ಪರ 46 ODI ಮತ್ತು 13 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ODIಗಳಲ್ಲಿ ಸುಮಾರು 26 ರ ಸರಾಸರಿಯಲ್ಲಿ ಒಟ್ಟು 934 ರನ್ ಗಳಿಸಿದ್ದಾರೆ, ಆದರೆ T20 ನಲ್ಲಿ ಅವರು 249 ರನ್ ಗಳಿಸಿದ್ದಾರೆ.

ರಾಬಿನ್ ಉತ್ತಪ್ಪ ಅವರ ಪತ್ನಿ ಶೀತಲ್ ಉತ್ತಪ್ಪ ವೃತ್ತಿಪರ ಟೆನಿಸ್ ಆಟಗಾರ್ತಿ. ಅವರು ತಮ್ಮ ಇನ್ಸ್ಟಾ ಪ್ರೊಫೈಲ್ನಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಅವರು 9 ನೇ ವಯಸ್ಸಿನಲ್ಲಿ ಟೆನಿಸ್ ಆಡಲು ಪ್ರಾರಂಭಿಸಿದರು, ಆದರೆ 33 ನೇ ವಯಸ್ಸಿನಲ್ಲಿ ಅವರು ಈ ಕ್ರೀಡೆಗೆ ವಿದಾಯ ಹೇಳಿದರು.
Published On - 9:30 pm, Sat, 25 June 22



















