Ranji Trophy Final: ದೀಪಕ್ ನೋಡಿ ಸಿಎಸ್​ಕೆ ಎಂದು ಕೂಗಿದವರಿಗೆ ಖಡಕ್ ರಿಪ್ಲೇ ನೀಡಿದ ಆರ್​ಸಿಬಿ ಫ್ಯಾನ್ಸ್; ವಿಡಿಯೋ

Ranji Trophy Final 2022: ದೀಪಕರ್​ನ್ನು ನೋಡಿದ ಪ್ರೇಕ್ಷಕರು ಸಿಎಸ್‌ಕೆ-ಸಿಎಸ್‌ಕೆ ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು. ಇದಕ್ಕೆ ತಕ್ಕ ಪ್ರತ್ಯುತ್ತರವಾಗಿ ಅಲ್ಲಿ ನೆರೆದಿದ್ದ ಆರ್​ಸಿಬಿ ಅಭಿಮಾನಿಗಳು ಕೂಡ ಆರ್​ಸಿಬಿ, ಆರ್​ಸಿಬಿ ಎಂಬ ಘೋಷಣೆಯನ್ನು ಕೂಗಿದರು.

Ranji Trophy Final: ದೀಪಕ್ ನೋಡಿ ಸಿಎಸ್​ಕೆ ಎಂದು ಕೂಗಿದವರಿಗೆ ಖಡಕ್ ರಿಪ್ಲೇ ನೀಡಿದ ಆರ್​ಸಿಬಿ ಫ್ಯಾನ್ಸ್; ವಿಡಿಯೋ
ದೀಪಕ್ ಚಹರ್
Follow us
TV9 Web
| Updated By: ಪೃಥ್ವಿಶಂಕರ

Updated on: Jun 26, 2022 | 7:05 AM

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಮತ್ತು ಮಧ್ಯಪ್ರದೇಶ ನಡುವೆ ರಣಜಿ ಟ್ರೋಫಿ ಪ್ರಶಸ್ತಿ ಪಂದ್ಯ ನಡೆಯುತ್ತಿದೆ. ಪಂದ್ಯದ ವೇಳೆ ಏಕಾಏಕಿ ಚೆನ್ನೈ ಸೂಪರ್ ಕಿಂಗ್ಸ್ ಎಂಬ ಘೋಷಣೆಗಳು ಕ್ರೀಡಾಂಗಣದಲ್ಲಿ ಆರಂಭವಾದವು. ಇದಕ್ಕೆ ಪ್ರತ್ಯುತ್ತರವಾಗಿ ಆರ್​ಸಿಬಿ, ಆರ್​ಸಿಬಿ ಎಂಬ ಘೋಷಣೆ ಕೂಡ ಕೇಳಲಾರಂಭಿಸಿತು. ವಾಸ್ತವವಾಗಿ, ಚೆನ್ನೈ ಸೂಪರ್ ಕಿಂಗ್ಸ್‌ನ ಸ್ಟಾರ್ ಬೌಲರ್ ಮತ್ತು ಭಾರತೀಯ ವೇಗದ ಬೌಲರ್ ದೀಪಕ್ ಚಹಾರ್ ಅವರು ರಣಜಿ ಟ್ರೋಫಿಯ ಫೈನಲ್ ವೀಕ್ಷಿಸಲು ಇದ್ದಕ್ಕಿದ್ದಂತೆ ಕ್ರೀಡಾಂಗಣಕ್ಕೆ ಬಂದರು. ಗಾಯದ ಕಾರಣ ಚಾಹರ್ ದೀರ್ಘಕಾಲದವರೆಗೆ ಕ್ರಿಕೆಟ್ ಮೈದಾನದಿಂದ ದೂರವಿದ್ದು, ಪ್ರಸ್ತುತ NCA ಯಲ್ಲಿ ತರಬೇತಿಗೆ ಒಳಗಾಗಿದ್ದಾರೆ.

ಫೆಬ್ರವರಿಯಲ್ಲಿ ಇಂಜುರಿಗೆ ತುತ್ತಾಗಿದ್ದ ದೀಪಕ್ ಚಹರ್

ಇದನ್ನೂ ಓದಿ
Image
Ranji Trophy Final 2022: 4ನೇ ದಿನದಾಟ ಅಂತ್ಯ; ಚಾಂಪಿಯನ್ ಪಟ್ಟಕ್ಕೇರುವ ಸನಿಹದಲ್ಲಿ ಮಧ್ಯಪ್ರದೇಶ
Image
NZ vs ENG: ಕಿವೀಸ್ ಎದುರು ಆಂಗ್ಲ ಜೋಡಿಗಳ ಅಬ್ಬರ; 62 ವರ್ಷಗಳ ಹಳೆಯ ದಾಖಲೆ ಉಡೀಸ್..!
Image
SL vs AUS: ಆಸೀಸ್ ವಿರುದ್ಧದ ಟೆಸ್ಟ್ ಸರಣಿಗೆ ಲಂಕಾ ತಂಡ ಪ್ರಕಟ; ನಿಷೇಧಕ್ಕೊಳಗಾಗಿದ್ದ ಸ್ಪಿನ್ನರ್​ಗೆ ಅವಕಾಶ

ಈ ವರ್ಷದ ಫೆಬ್ರವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ವೇಳೆ ಚಹರ್ ಗಾಯಗೊಂಡಿದ್ದರು. ಹೀಗಾಗಿ ಫಿಟ್ನೆಸ್ಗಾಗಿ ದೀಪಕ್ NCA ಗೆ ಹೋಗಿದ್ದರು. ದೀಪಕ್ ಐಪಿಎಲ್ 2022 ರ ದ್ವಿತೀಯಾರ್ಧದಲ್ಲಿ ತಂಡಕ್ಕೆ ಮರಳಲು ತಯಾರಿ ನಡೆಸುತ್ತಿದ್ದರು, ಆದರೆ ನಂತರ ಅವರಿಗೆ ಮತ್ತೊಂದು ಇಂಜುರಿಯಾಗಿದ್ದರಿಂದ ಸಂಪೂರ್ಣ ಪಂದ್ಯಾವಳಿಯಿಂದ ಹೊರಗುಳಿಯಬೇಕಾಯ್ತು. ಈ ಗಾಯದಿಂದಾಗಿ ಅವರು ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ವಿರುದ್ಧದ ಸರಣಿಯಿಂದಲೂ ಹೊರಗುಳಿದಿದ್ದರು. ಹೀಗಾಗಿ ಎನ್​ಸಿಎಯಲ್ಲಿರುವ ಚಹರ್ ರಣಜಿ ಫೈನಲ್ ವೀಕ್ಷಿಸಲು ಕ್ರೀಡಾಂಗಣಕ್ಕೆ ಎಂಟ್ರಿಕೊಟ್ಟರು. ದೀಪಕರ್​ನ್ನು ನೋಡಿದ ಪ್ರೇಕ್ಷಕರು ಸಿಎಸ್‌ಕೆ-ಸಿಎಸ್‌ಕೆ ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು. ಇದಕ್ಕೆ ತಕ್ಕ ಪ್ರತ್ಯುತ್ತರವಾಗಿ ಅಲ್ಲಿ ನೆರೆದಿದ್ದ ಆರ್​ಸಿಬಿ ಅಭಿಮಾನಿಗಳು ಕೂಡ ಆರ್​ಸಿಬಿ, ಆರ್​ಸಿಬಿ ಎಂಬ ಘೋಷಣೆಯನ್ನು ಕೂಗಿದರು. ಅಭಿಮಾನಿಗಳ ಉತ್ಸಾಹ ಕಂಡು ಚಹರ್ ಕೂಡ ಮುಗುಳ್ನಕ್ಕರು. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬಹಳ ದಿನದಿಂದ ವಿಶ್ರಾಂತಿಯಲ್ಲಿದ್ದಾರೆ ಚಹರ್

ಚಹರ್ ಕೊನೆಯ ಬಾರಿಗೆ ಫೆಬ್ರವರಿಯಲ್ಲಿ ಭಾರತದ ಪರ ಪಂದ್ಯವನ್ನು ಆಡಿದ್ದರು. ಚಹರ್ ಅನುಪಸ್ಥಿತಿಯಲ್ಲಿ, ಬಿಸಿಸಿಐ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಗೆ ಮೊದಲ ಬಾರಿಗೆ ವೇಗಿಗಳಾದ ಅರ್ಷದೀಪ್ ಮತ್ತು ಉಮ್ರಾನ್ ಮಲಿಕ್ ಅವರನ್ನು ತಂಡದಲ್ಲಿ ಆಯ್ಕೆ ಮಾಡಿತ್ತು. ಇಬ್ಬರಿಗೂ ಚೊಚ್ಚಲ ಅವಕಾಶ ಸಿಗದಿದ್ದರೂ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

ರಣಜಿ 4ನೇ ದಿನದಾಟ

ನಾಲ್ಕನೇ ದಿನದಾಟದ ಅಂತ್ಯಕ್ಕೆ ಮುಂಬೈ 2 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿದೆ. ಮುಂಬೈ ಇನ್ನೂ 49 ರನ್ ಹಿಂದಿದೆ. ನಾಯಕ ಪೃಥ್ವಿ ಶಾ (44) ರನ್ ಗಳಿಸಿ ಔಟಾದರು. ಅವರು ಯಶ್ ದುಬೇಕರ್ ಬೌಲಿಂಗ್​ನಲ್ಲಿ ಗೌರವ್ ಯಾದವ್​ಗೆ ಕ್ಯಾಚ್ ನೀಡಿದರು. ಪೃಥ್ವಿ 52 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 2 ಸಿಕ್ಸರ್‌ಗಳಿಂದ 44 ರನ್ ಗಳಿಸಿದರು. ಹಾರ್ದಿಕ್ ತಮೆರೆಲಾ (25) ಕುಮಾರ್ ಕಾರ್ತಿಕೇಯ ಬೌಲಿಂಗ್​ನಲ್ಲಿ ಔಟಾದರು. ಈಗ ಅರ್ಮಾನ್ ಜಾಫರ್ (30) ಮತ್ತು ಸುವೇದ್ ಪರ್ಕರ್ (9) ರನ್ ಗಳಿಸಿ ಆಡುತ್ತಿದ್ದಾರೆ.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ