NZ vs ENG: ಕಿವೀಸ್ ಎದುರು ಆಂಗ್ಲ ಜೋಡಿಗಳ ಅಬ್ಬರ; 62 ವರ್ಷಗಳ ಹಳೆಯ ದಾಖಲೆ ಉಡೀಸ್..!
NZ vs ENG: ಶತಕ ಇನ್ನಿಂಗ್ಸ್‌ನ ಸಹಾಯದಿಂದ 5000 ಟೆಸ್ಟ್ ರನ್ ಗಳಿಸಿದ ಜಾನಿ ಬೈರ್‌ಸ್ಟೋವ್ ಟೆಸ್ಟ್‌ನಲ್ಲಿ 5,000 ರನ್ ಪೂರೈಸಿದರು. ಈ ಸಾಧನೆ ಮಾಡಿದ ಇಂಗ್ಲೆಂಡ್‌ನ 24ನೇ ಆಟಗಾರ ಎನಿಸಿಕೊಂಡರು.
ಜಾನಿ ಬೈರ್‌ಸ್ಟೋವ್ (Johnny Bairstow) ಶತಕ ಮತ್ತು ಜೇಮಿ ಓವರ್‌ಟನ್ (Jamie Overton) ಜೊತೆಗಿನ ದಾಖಲೆಯ ಜೊತೆಯಾಟದ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನ ಎರಡನೇ ದಿನದಲ್ಲಿ ಇಂಗ್ಲೆಂಡ್ ಪ್ರಬಲ ಪುನರಾಗಮನ ಮಾಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 329 ರನ್ ಗಳಿಸಿತ್ತು. ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 55ಕ್ಕೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಲ್ಲಿಂದ, ಬೈರ್‌ಸ್ಟೋ ಮತ್ತು ಓವರ್‌ಟನ್ ಏಳನೇ ವಿಕೆಟ್‌ಗೆ ಅಜೇಯ 209 ರನ್‌ಗಳ ಜೊತೆಯಲ್ಲಿ ತಂಡವು ಪುಟಿದೇಳಲು ನೆರವಾದರು.
ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿದೆ. ಬೈರ್ಸ್ಟೋವ್ 130, ಓವರ್ಟನ್ ಔಟಾಗದೆ 89 ರನ್ ಗಳಿಸಿದ್ದಾರೆ. ಕಿವೀಸ್ ಬೌಲರ್‌ಗಳಲ್ಲಿ ಟ್ರೆಂಟ್ ಬೌಲ್ಟ್ ಮೂರು ವಿಕೆಟ್ ಪಡೆದರೆ, ನೈಲ್ ವೈಜ್ನರ್ ಎರಡು ವಿಕೆಟ್ ಪಡೆದರು. ಟಿಮ್ ಸೌಥಿ ಒಂದು ವಿಕೆಟ್ ಪಡೆದರು. ಸದ್ಯ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 65 ರನ್ ಹಿನ್ನಡೆಯಲ್ಲಿದೆ.
62 ವರ್ಷಗಳ ಹಳೆಯ ದಾಖಲೆ ಪುಡಿಪುಡಿ
ಬೈರ್ಸ್ಟೋವ್ ಮತ್ತು ಓವರ್‌ಟನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಏಳನೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟವನ್ನು ನಡೆಸಿದರು. ಇದರೊಂದಿಗೆ ಇವರಿಬ್ಬರು ಜಿಮ್ ಪಾರ್ಕ್ ಮತ್ತು ಮೈಕ್ ಸ್ಮಿತ್ ಅವರ 62 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. 1960 ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ, ಪಾರ್ಕ್ ಮತ್ತು ಸ್ಮಿತ್ ಏಳನೇ ವಿಕೆಟ್‌ಗೆ 197 ರನ್‌ಗಳ ಜೊತೆಯಾಟವನ್ನು ನಡೆಸಿದರು.
24 ನೇ ಇಂಗ್ಲಿಷ್ ಬ್ಯಾಟರ್
ಶತಕ ಇನ್ನಿಂಗ್ಸ್‌ನ ಸಹಾಯದಿಂದ 5000 ಟೆಸ್ಟ್ ರನ್ ಗಳಿಸಿದ ಜಾನಿ ಬೈರ್‌ಸ್ಟೋವ್ ಟೆಸ್ಟ್‌ನಲ್ಲಿ 5,000 ರನ್ ಪೂರೈಸಿದರು. ಈ ಸಾಧನೆ ಮಾಡಿದ ಇಂಗ್ಲೆಂಡ್‌ನ 24ನೇ ಆಟಗಾರ ಎನಿಸಿಕೊಂಡರು.
92 ವರ್ಷಗಳ ನಂತರ ಸರ್ ಬ್ರಾಡ್ಮನ್ ಸಾಧನೆ ಪುನರಾವರ್ತನೆ
ಮಿಚೆಲ್ 92 ವರ್ಷಗಳ ನಂತರ ಸರ್ ಬ್ರಾಡ್ಮನ್ ಅವರ ಸಾಧನೆಯನ್ನು ಪುನರಾವರ್ತಿಸಿದರು. ಪಂದ್ಯದ ಮೂರನೇ ದಿನ ನ್ಯೂಜಿಲೆಂಡ್ ಪರ ಡ್ಯಾರಿಲ್ ಮಿಚೆಲ್ (109) ಶತಕ ದಾಖಲಿಸಿದರು. ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಂಗ್ಲಿಷ್ ಪಿಚ್‌ಗಳಲ್ಲಿ ಸತತ ಮೂರು ಶತಕಗಳನ್ನು ಗಳಿಸಿದರು. ಈ ಶತಕದೊಂದಿಗೆ ಈ ಸಾಧನೆ ಮಾಡಿದ ಮೊದಲ ಎದುರಾಳಿ ಆಟಗಾರ ಎನಿಸಿಕೊಂಡರು. ಸರ್ ಡ್ಯಾನ್ ಬ್ರಾಂಡ್‌ಮನ್ 1930 ರಲ್ಲಿ ಈ ಸಾಧನೆ ಮಾಡಿದರು. ಇಂಗ್ಲೆಂಡ್ ವಿರುದ್ಧದ ಅವರ ತವರು ಟೆಸ್ಟ್ ಸರಣಿಯಲ್ಲಿ ಬ್ರಾಂಡ್‌ಮನ್ ಸತತ ಮೂರು ಶತಕಗಳನ್ನು ಗಳಿಸಿದ್ದರು.
ಮಿಚೆಲ್ ಅವರ ಇನ್ನಿಂಗ್ಸ್‌ನಿಂದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 329 ರನ್‌ಗಳಿಗೆ ಆಲೌಟ್ ಆಗಿತ್ತು. ಟಾಮ್ ಬ್ಲಂಡೆಲ್ (55) ತಮ್ಮ ವೃತ್ತಿಜೀವನದ ಆರನೇ ಅರ್ಧಶತಕ ಗಳಿಸಿದರು. ಆ ಬಳಿಕ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಾಗಲಿಲ್ಲ.
ಲೀಚ್ ಐದು ವಿಕೆಟ್
ಇಂಗ್ಲೆಂಡ್ ಪರ ಎಡಗೈ ಸ್ಪಿನ್ನರ್ ಜಾಕ್ ಲೀಚ್ ಐದು ವಿಕೆಟ್ ಪಡೆದರು. ಸ್ಟುವರ್ಟ್ ಬ್ರಾಡ್ 3 ವಿಕೆಟ್, ಮ್ಯಾಥ್ಯೂ ಪಾಟ್ಸ್ ಮತ್ತು ಜೇಮಿ ಓವರ್ಟನ್ ತಲಾ ಒಂದು ವಿಕೆಟ್ ಪಡೆದರು. ಆತಿಥೇಯರು ಮೊದಲ ಎರಡು ಟೆಸ್ಟ್‌ಗಳನ್ನು ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದಾರೆ.
Published On - 6:44 pm, Sat, 25 June 22