AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Archery World Cup: ವಿಶ್ವಕಪ್​ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿ ಚಿನ್ನದ ಪದಕ ಗೆದ್ದ ಭಾರತದ ಆರ್ಚರಿ ತಂಡ..!

Archery World Cup: ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತದ ಜೋಡಿ ಫ್ರಾನ್ಸ್ ವಿರುದ್ಧ 152-149 ಅಂಕಗಳ ಅಂತರದಿಂದ ಜಯ ಸಾಧಿಸಿತು. ಇದಕ್ಕೂ ಮುನ್ನ ದೀಪಿಕಾ ಕುಮಾರಿ, ಅಂಕಿತಾ ಭಗತ್ ಮತ್ತು ಸಿಮ್ರಂಜಿತ್ ಕೌರ್ ಮೂವರು ರಿಕರ್ವ್ ಮಹಿಳಾ ತಂಡ ಈವೆಂಟ್‌ನಲ್ಲಿ ಫೈನಲ್‌ಗೆ ತಲುಪುವ ಮೂಲಕ ಮೊದಲ ಪದಕವನ್ನು ಖಚಿತಪಡಿಸಿದ್ದರು

Archery World Cup: ವಿಶ್ವಕಪ್​ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿ ಚಿನ್ನದ ಪದಕ ಗೆದ್ದ ಭಾರತದ ಆರ್ಚರಿ ತಂಡ..!
ಜ್ಯೋತಿ ಸುರೇಖಾ ಮತ್ತು ಅಭಿಷೇಕ್ ವರ್ಮಾ
TV9 Web
| Updated By: ಪೃಥ್ವಿಶಂಕರ|

Updated on:Jun 25, 2022 | 5:08 PM

Share

ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ ಹಂತ 3 ರಲ್ಲಿ ಭಾರತ ತಂಡ ಅದ್ಭುತ ಸಾಧನೆ ಮಾಡಿದೆ. ಸಂಯುಕ್ತ ಮಿಶ್ರ ತಂಡ (compound mixed team)ದಲ್ಲಿ ಭಾರತದ ಜ್ಯೋತಿ ಸುರೇಖಾ ಮತ್ತು ಅಭಿಷೇಕ್ ವರ್ಮಾ ಚಿನ್ನದ ಪದಕ ಗೆದ್ದಿದ್ದಾರೆ. ಜ್ಯೋತಿಯವರಿಗೆ ಈ ಸೀಸನ್​ನ ಮೊದಲ ವಿಶ್ವಕಪ್ ಇದಾಗಿದ್ದು, ಇದರಲ್ಲಿ ಅವರು ಅದ್ಭುತ ದಾಖಲೆ ಬರೆದಿದ್ದಾರೆ. ಸಂಯುಕ್ತ ಮಿಶ್ರ ತಂಡದ ಫೈನಲ್‌ನಲ್ಲಿ ಭಾರತದ ಜೋಡಿ ಫ್ರಾನ್ಸ್ ತಂಡವನ್ನು ಸೋಲಿಸಿತು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತದ ಜೋಡಿ ಫ್ರಾನ್ಸ್ ವಿರುದ್ಧ 152-149 ಅಂಕಗಳ ಅಂತರದಿಂದ ಜಯ ಸಾಧಿಸಿತು. ಇದಕ್ಕೂ ಮುನ್ನ ದೀಪಿಕಾ ಕುಮಾರಿ, ಅಂಕಿತಾ ಭಗತ್ ಮತ್ತು ಸಿಮ್ರಂಜಿತ್ ಕೌರ್ ಮೂವರು ರಿಕರ್ವ್ ಮಹಿಳಾ ತಂಡ ಈವೆಂಟ್‌ನಲ್ಲಿ ಫೈನಲ್‌ಗೆ ತಲುಪುವ ಮೂಲಕ ಮೊದಲ ಪದಕವನ್ನು ಖಚಿತಪಡಿಸಿದ್ದರು. ಭಾನುವಾರ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದೆ. ಭಾರತ ತಂಡದ ಮುಂದೆ ಚೈನೀಸ್ ತೈಪೆಯ ಸವಾಲು ಎದುರಾಗಲಿದೆ.

ರೋಚಕ ಪಂದ್ಯದಲ್ಲಿ ಗೆದ್ದು ಫೈನಲ್‌ಗೆ ಲಗ್ಗೆ

ಇದನ್ನೂ ಓದಿ
Image
1983 World Cup: ಕಪಿಲ್​ಗೆ ನಾನು ಸಾಥ್​ ನೀಡಿರದಿದ್ದರೆ? ಯಾರೂ ಕ್ರೆಡಿಟ್ ನೀಡಲಿಲ್ಲ! ಕಿರ್ಮಾನಿ ಮನದಾಳದ ನೋವಿದು
Image
IND vs IRE T20I Head to Head: ಆಂಗ್ಲರನ್ನು ಮಣಿಸಿದ ಐರ್ಲೆಂಡ್‌ ಭಾರತಕ್ಕೆ ಸುಲಭದ ತುತ್ತಲ್ಲ! ಅಂಕಿ ಅಂಶ ಹೇಳುವುದೇನು?

ಸಂಯುಕ್ತ ಮಿಶ್ರ ಜೋಡಿ ಅಭಿಷೇಕ್ ವರ್ಮಾ ಮತ್ತು ಜ್ಯೋತಿ ಅವರು ಎಸ್ಟೋನಿಯಾದ ರಾಬಿನ್ ಜತ್ಮಾ ಮತ್ತು ಲಿಸೆಲ್ ಜತ್ಮಾ ಅವರನ್ನು ರೋಚಕ ಸ್ಪರ್ಧೆಯಲ್ಲಿ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ ಭಾರತದ ಜೋಡಿ 156-151 ಅಂತರದಲ್ಲಿ ಜಯಭೇರಿ ಬಾರಿಸಿತು. ಪ್ರೀ ಕ್ವಾರ್ಟರ್ ಫೈನಲ್​ನಲ್ಲಿ ಭಾರತದ ಜೋಡಿ 158-150 ಅಂಕಗಳಿಂದ ಪೋರ್ಟೊ ರಿಕೊ ತಂಡವನ್ನು ಸೋಲಿಸಿತು. ಕ್ವಾರ್ಟರ್ ಫೈನಲ್​ನಲ್ಲಿ ಭಾರತದ ಜೋಡಿಗೆ ಎಲ್ ಸಾಲ್ವಡಾರ್ ನ ರಾಬರ್ಟೊ ಹೆರ್ನಾಂಡೆಜ್ ಮತ್ತು ಸೋಫಿಯಾ ಪೇಜ್ ಕಠಿಣ ಸವಾಲು ಎದುರಾಗಿತ್ತು. ಶೂಟ್‌ಆಫ್‌ನಲ್ಲಿ ಭಾರತ ಗೆಲುವು ಸಾಧಿಸಿತು.

7 ತಿಂಗಳ ನಂತರ ಜ್ಯೋತಿ ವಾಪಸ್ಸ್

ಏಷ್ಯನ್ ಗೇಮ್ಸ್‌ನ ಟ್ರಯಲ್ಸ್‌ನಲ್ಲಿ ಜ್ಯೋತಿಯನ್ನು ಕಡೆಗಣಿಸಲಾಗಿತ್ತು. 7 ತಿಂಗಳ ನಂತರ ತಂಡಕ್ಕೆ ಮರಳಿದ ಅವರು ಈ ಪದಕದೊಂದಿಗೆ ಸಂಭ್ರಮಿಸಿದರು. ವಿಶ್ವ ರ ್ಯಾಂಕಿಂಗ್​ನಲ್ಲಿ ಮೂರನೇ ಸ್ಥಾನದಲ್ಲಿರುವ ಆರ್ಚರ್ ಮತ್ತೊಂದು ಪದಕದ ರೇಸ್​ನಲ್ಲಿದ್ದಾರೆ. ಅವರು ವೈಯಕ್ತಿಕ ಸೆಮಿಫೈನಲ್‌ನಲ್ಲಿ ಫ್ರೆಂಚ್ ದಂತಕಥೆ ಬೀಜಿಂಗ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೋಫಿ ಅವರನ್ನು ಎದುರಿಸಲಿದ್ದಾರೆ.

Published On - 4:05 pm, Sat, 25 June 22

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ