IND vs IRE T20I Head to Head: ಆಂಗ್ಲರನ್ನು ಮಣಿಸಿದ ಐರ್ಲೆಂಡ್‌ ಭಾರತಕ್ಕೆ ಸುಲಭದ ತುತ್ತಲ್ಲ! ಅಂಕಿ ಅಂಶ ಹೇಳುವುದೇನು?

India vs Ireland T20I Head to Head: ಈ ಎರಡು ತಂಡಗಳ ನಡುವೆ ಇದುವರೆಗೆ ಕೇವಲ ಮೂರು ಟಿ20 ಪಂದ್ಯಗಳು ನಡೆದಿದ್ದು, ಅದರಲ್ಲಿ ಐರ್ಲೆಂಡ್ ಎಲ್ಲಾ ಮೂರು ಪಂದ್ಯಗಳನ್ನು ಸೋತಿದೆ.

IND vs IRE T20I Head to Head: ಆಂಗ್ಲರನ್ನು ಮಣಿಸಿದ ಐರ್ಲೆಂಡ್‌ ಭಾರತಕ್ಕೆ ಸುಲಭದ ತುತ್ತಲ್ಲ! ಅಂಕಿ ಅಂಶ ಹೇಳುವುದೇನು?
IND vs IRE
Follow us
| Updated By: ಪೃಥ್ವಿಶಂಕರ

Updated on:Jun 25, 2022 | 2:36 PM

ಭಾರತ ತಂಡದ ಐರ್ಲೆಂಡ್ ಪ್ರವಾಸ (IND vs IRE) ಭಾನುವಾರದಿಂದ ಆರಂಭವಾಗುತ್ತಿದೆ. ಈ ಪ್ರವಾಸದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಈ ತಂಡ ಎರಡು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ವರ್ಷ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ (T20 World Cup)ನ ದೃಷ್ಟಿಯಿಂದ ಈ ಸರಣಿಯನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಈ ಪ್ರವಾಸ ಮತ್ತು ಇಂಗ್ಲೆಂಡ್ ವಿರುದ್ಧದ ನಂತರದ ಟಿ20 ಸರಣಿಯು ಟೀಮ್ ಇಂಡಿಯಾದ ವಿಶ್ವಕಪ್ ತಂಡದ ಪರಿಸ್ಥಿತಿಯನ್ನು ತೆರವುಗೊಳಿಸುತ್ತದೆ. ಸದ್ಯ ಇಂಗ್ಲೆಂಡ್‌ನಲ್ಲಿರುವ ಭಾರತ ತಂಡ ಟೆಸ್ಟ್‌ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದು, ಅಭ್ಯಾಸ ಪಂದ್ಯದಲ್ಲಿ ನಿರತವಾಗಿದೆ. ಅದಕ್ಕಾಗಿಯೇ ಐರ್ಲೆಂಡ್ ಪ್ರವಾಸಕ್ಕೆ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಲಾಗಿದ್ದು, ಹಲವು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ.

ಯುವ ಆಟಗಾರರಿಂದ ಕಂಗೊಳಿಸುತ್ತಿರುವ ಟೀಂ ಇಂಡಿಯಾ, ಐರ್ಲೆಂಡ್ ಅನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಈ ತಂಡ ಈ ಮಾದರಿಯಲ್ಲಿ ಕೆಲವು ಉತ್ತಮ ಆಟಗಾರರನ್ನು ಹೊಂದಿದೆ. ಅದರಲ್ಲಿ ಕ್ಯಾಪ್ಟನ್ ಆಂಡಿ ಬಾಲ್ಬಿರ್ನಿ ಅಥವಾ ಕುರ್ಟಿಸ್ ಕೆಂಪ್ಫರ್ ಪ್ರಮುಖರು. ಈ ಆಟಗಾರರು ಟಿ20 ಕ್ರಿಕೆಟ್​ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಭಾರತ ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ T20I ಸರಣಿಯನ್ನು ತವರಿನಲ್ಲಿ ಆಡಿದ್ದು ಅದು 2-2 ರಲ್ಲಿ ಡ್ರಾದಲ್ಲಿ ಅಂತ್ಯಗೊಂಡಿತು. ಸರಣಿಯ ಐದನೇ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರಿಂದ ಈ ಸರಣಿಯನ್ನು ಗೆಲ್ಲುವ ಮೂಲಕ ಆ ಸರಣಿಯನ್ನು ಸರಿದೂಗಿಸಲು ಟೀಂ ಇಂಡಿಯಾ ಪ್ರಯತ್ನಿಸಲಿದೆ.

ಇದನ್ನೂ ಓದಿ: R Vinay Kumar: ಟೀಂ ಇಂಡಿಯಾ ಮಾಜಿ ವೇಗಿ, ಕನ್ನಡಿಗ ವಿನಯ್​ ಕುಮಾರ್​ ದಂಪತಿಗಳಿಗೆ ಹೆಣ್ಣು ಮಗು ಜನನ

ಇದನ್ನೂ ಓದಿ
Image
T20I World Record: ಟಿ20 ಕ್ರಿಕೆಟ್​ನಲ್ಲಿ ಪಾಕಿಸ್ತಾನಕ್ಕೆ ಸೆಡ್ಡು ಹೊಡೆಯಲಿದೆ ಭಾರತ; ಹೊಸ ದಾಖಲೆಯತ್ತ ರೋಹಿತ್ ಸೇನೆ!
Image
IND VS LEI: ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧವೇ ಅರ್ಧಶತಕ ಸಿಡಿಸಿದ ರಿಷಭ್ ಪಂತ್..!

ಮುಖಾಮುಖಿ ಅಂಕಿಅಂಶ

ಈ ಸರಣಿಗೂ ಮುನ್ನ ಉಭಯ ತಂಡಗಳ ಅಂಕಿ-ಅಂಶಗಳನ್ನು ಗಮನಿಸಿದರೆ, ಭಾರತದ ಮೇಲುಗೈ ಇದರಲ್ಲಿ ಹೆಚ್ಚು. ಈ ಎರಡು ತಂಡಗಳ ನಡುವೆ ಇದುವರೆಗೆ ಕೇವಲ ಮೂರು ಟಿ20 ಪಂದ್ಯಗಳು ನಡೆದಿದ್ದು, ಅದರಲ್ಲಿ ಐರ್ಲೆಂಡ್ ಎಲ್ಲಾ ಮೂರು ಪಂದ್ಯಗಳನ್ನು ಸೋತಿದೆ. 2018ರಲ್ಲಿ ಭಾರತ ಐರ್ಲೆಂಡ್ ಪ್ರವಾಸ ಕೈಗೊಂಡು ಎರಡು ಟಿ20 ಪಂದ್ಯಗಳನ್ನು ಆಡಿತ್ತು. ಈ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರು. 27 ಜೂನ್ 2019 ರಂದು ನಡೆದ ಪಂದ್ಯದಲ್ಲಿ ಭಾರತವು ಐರ್ಲೆಂಡ್ ಅನ್ನು 76 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ಇದಾದ ಬಳಿಕ ಜೂನ್ 29ರಂದು ನಡೆದ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯವನ್ನು 143 ರನ್‌ಗಳಿಂದ ಗೆದ್ದುಕೊಂಡಿತು. ಈ ಎರಡು ಪಂದ್ಯಗಳ ಮೊದಲು, ಈ ಎರಡು ತಂಡಗಳು 2009 ರ ಟಿ 20 ವಿಶ್ವಕಪ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು, ಅದರಲ್ಲಿ ಭಾರತ ಗೆದ್ದಿತ್ತು. ಗುರಿ ಬೆನ್ನಟ್ಟಿದ ಭಾರತ ಎಂಟು ವಿಕೆಟ್‌ಗಳಿಂದ ಈ ಜಯ ಸಾಧಿಸಿತ್ತು.

ತಂಡದ ಮೇಲೆ ನಿಗಾ ವಿವಿಎಸ್ ಲಕ್ಷ್ಮಣ್

ಈ ಪ್ರವಾಸದಲ್ಲಿ ತಂಡದ ಸಹಾಯಕ ಸಿಬ್ಬಂದಿ ಬದಲಾಗಿದ್ದಾರೆ. ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಜೊತೆಗೆ ಸಹಾಯಕ ಸಿಬ್ಬಂದಿ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಟೆಸ್ಟ್ ತಂಡದಲ್ಲಿದ್ದಾರೆ. ಆದ್ದರಿಂದ ಐರ್ಲೆಂಡ್ ಪ್ರವಾಸದಲ್ಲಿ NCA ಮುಖ್ಯಸ್ಥ ಮತ್ತು ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ VVS ಲಕ್ಷ್ಮಣ್ ತಂಡದೊಂದಿಗೆ ತೆರಳಿದ್ದಾರೆ. ಇವರೊಂದಿಗೆ ಹಿರಿಯ ಆಯ್ಕೆ ಸಮಿತಿ ಅಧ್ಯಕ್ಷ ಹಾಗೂ ಭಾರತದ ಮಾಜಿ ವೇಗದ ಬೌಲರ್ ಚೇತನ್ ಶರ್ಮಾ ಕೂಡ ಇದ್ದಾರೆ. ಚೇತನ್ ತಂಡದ ಆಟಗಾರರ ಮೇಲೆ ವಿಶೇಷ ನಿಗಾ ಇಡಲಿದ್ದಾರೆ.

Published On - 2:35 pm, Sat, 25 June 22

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್