1983 World Cup: ಕಪಿಲ್​ಗೆ ನಾನು ಸಾಥ್​ ನೀಡಿರದಿದ್ದರೆ? ಯಾರೂ ಕ್ರೆಡಿಟ್ ನೀಡಲಿಲ್ಲ! ಕಿರ್ಮಾನಿ ಮನದಾಳದ ನೋವಿದು

1983 World Cup: ಕಪಿಲ್ 175 ರನ್‌ಗಳಿಸಲು ಪ್ರಮುಖ ಕಾರಣ ಮತ್ತೊಂದು ಬದಿಯಿಂದ ಕಿರ್ಮಾನಿ ನೀಡಿದ ಸಾಥ್​ನಿಂದ ಭಾರತಕ್ಕೆ ಅರ್ಹತೆ ಪಡೆಯಲು ಕಾರಣವೆಂದು ಯಾವುದೇ ವರದಿಗಾರನಾಗಲಿ ಅಥವಾ ಸಾಮಾಜಿಕ ಮಾಧ್ಯಮದಲ್ಲಾಗಲಿ ಯಾರೂ ಹೇಳಲಿಲ್ಲ.

1983 World Cup: ಕಪಿಲ್​ಗೆ ನಾನು ಸಾಥ್​ ನೀಡಿರದಿದ್ದರೆ? ಯಾರೂ ಕ್ರೆಡಿಟ್ ನೀಡಲಿಲ್ಲ! ಕಿರ್ಮಾನಿ ಮನದಾಳದ ನೋವಿದು
ಸೈಯದ್ ಕಿರ್ಮಾನಿ
TV9kannada Web Team

| Edited By: pruthvi Shankar

Jun 25, 2022 | 3:15 PM

ಭಾರತ ತನ್ನ ಮೊದಲ ವಿಶ್ವಕಪ್ (1983 World Cup) ಎತ್ತಿಹಿಡಿದು ಇಂದಿಗೆ ಬರೋಬ್ಬರಿ 39 ವರ್ಷಗಳು ಕಳೆದಿವೆ. ಅಂದರೆ 1983 ರಲ್ಲಿ ಇದೇ ದಿನಾಂಕದಂದು ಅಂದರೆ ಜೂನ್ 25 ರಂದು ಭಾರತ ವಿಶ್ವಕಪ್ ಗೆದ್ದುಕೊಂಡಿತು. ಕಪಿಲ್ ದೇವ್ (Kapil Dev) ನಾಯಕತ್ವದಲ್ಲಿ ಟೀಮ್ ಇಂಡಿಯಾ ಆ ಕಾಲದ ಬಲಿಷ್ಠ ತಂಡ ಮತ್ತು ಕಳೆದ ಎರಡು ಸೀಸನ್​ಗಳಲ್ಲಿ ವಿಶ್ವಕಪ್‌ ಗೆದ್ದಿದ್ದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಕಪಿಲ್ ದೇವ್ ನಾಯಕತ್ವದ ಈ ತಂಡ ಇಂತಹ ಅದ್ಭುತಗಳನ್ನು ಮಾಡುತ್ತದೆ ಮತ್ತು ವಿಶ್ವಕಪ್ ಗೆಲ್ಲುತ್ತದೆ ಎಂದು ಯಾರೂ ಕೂಡ ಭಾವಿಸಿರಲಿಲ್ಲ. ಆದರೆ ಇಂತಹ ಅದ್ಭುತವೊಂದನ್ನು ಟೀಂ ಇಂಡಿಯಾ ಮಾಡಿ ತೀರಿತ್ತು. ಇದಕ್ಕೆ ಪ್ರಮುಖ ಕಾರಣ ತಂಡದ ಶತ ಪ್ರಯತ್ನ ಮತ್ತು ತಂಡದ ಪ್ರತಿಯೊಬ್ಬ ಆಟಗಾರನ ಕೊಡುಗೆಯಾಗಿದೆ. ಅಂದು ಭಾರತ ತಂಡದ ಸದಸ್ಯರಾಗಿದ್ದ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ (Syed Kirmani) ಕೂಡ ಇದನ್ನೇ ಸತ್ಯವೆನ್ನುತ್ತಾರೆ. ಆದರೆ ಐತಿಹಾಸಿಕ ವಿಶ್ವಕಪ್ ಗೆಲುವಿನ ಬಗ್ಗೆ ಕಿರ್ಮಾನಿ ತಮ್ಮ ನೋವನ್ನು ಇಂದು ಹೊರಹಾಕಿದ್ದಾರೆ. ಜತೆಗೆ 1983 ರ ವಿಶ್ವಕಪ್​ನಲ್ಲಿ ತಂಡಕ್ಕೆ ನಾನು ನೀಡಿದ ಕೊಡುಗೆಯನ್ನು ಯಾರು ಕೂಡ ನೆನೆಯಲಿಲ್ಲ ಎಂಬ ಆಪಾದನೆಯೊಂದನ್ನು ಮಾಡಿದ್ದಾರೆ. ಆದರೆ ತನಗೆ ಇದರ ಬಗ್ಗೆ ಯಾವುದೇ ವಿಷಾದವಿಲ್ಲ ಎಂದು ಹೇಳಿದ್ದಾರೆ.

ಆ ವಿಶ್ವಕಪ್​ನಲ್ಲಿ ಭಾರತದ ಪಯಣ ಏರಿಳಿತಗಳಿಂದ ಕೂಡಿತ್ತು. ಈ ಪಯಣದಲ್ಲಿ ತಂಡದ ನಾಯಕ ಕಪಿಲ್ ದೇವ್ ಜಗವೇ ನಿಬ್ಬೇರಗಾಗುವಂತಹ ಇನ್ನಿಂಗ್ಸ್ ಆಡಿದ್ದು ಇಲ್ಲಿಯವರೆಗೂ ಚರ್ಚೆಯಾಗುತ್ತಲ್ಲೆ ಇದೆ. ವಾಸ್ತವವಾಗಿ ಅಂದು ಜಿಂಬಾಬ್ವೆ ವಿರುದ್ಧ ಕಪಿಲ್ ಈ ಇನ್ನಿಂಗ್ಸ್ ಆಡಿದ್ದರು. ಆ ಪಂದ್ಯದಲ್ಲಿ ಕಪಿಲ್ ತಂಡವನ್ನು ಸಂಕಷ್ಟದ ಪರಿಸ್ಥಿತಿಯಿಂದ ಹೊರತಂದು 175 ರನ್ ಸಿಡಿಸಿದ್ದರು. ಈ ಪಂದ್ಯವನ್ನು ಭಾರತ ಗೆಲ್ಲುವಲ್ಲಿ ಕಪಿಲ್ ಅವರ ಈ ಇನ್ನಿಂಗ್ಸ್ ಪ್ರಮುಖ ಕಾರಣವಾಗಿತ್ತು. ಬಹಳ ಮುಖ್ಯವಾಗಿ, ಕಪಿಲ್ ಅವರಿಗೆ ಇನ್ನೊಂದು ತುದಿಯಿಂದ ಬೆಂಬಲ ಸಿಕ್ಕಿದ್ದರಿಂದ ಈ ಕಷ್ಟದ ಇನ್ನಿಂಗ್ಸ್ ಆಡಲು ಸಾಧ್ಯವಾಯಿತು. ಅದಕ್ಕೆ ಬೆಂಬಲ ನೀಡಿದವರು ಕಿರ್ಮಾನಿ. ಅವರು ಕಪಿಲ್ ಅವರನ್ನು ಬೆಂಬಲಿಸದಿದ್ದರೆ ಬಹುಶಃ ಭಾರತ ವಿಶ್ವಕಪ್ ಗೆಲ್ಲುತ್ತಿರಲಿಲ್ಲ ಎಂಬುದನ್ನು ಸ್ವತಃ ಕಿರ್ಮಾನಿಯವರೇ ಹೇಳಿದ್ದಾರೆ.

ಇದನ್ನೂ ಓದಿ: 1983 world cup final: 1983 ರ ವಿಶ್ವಕಪ್ ಫೈನಲ್‌ನ ಆ 5 ರೋಚಕ ಕ್ಷಣಗಳನ್ನು ಭಾರತ ಎಂದಿಗೂ ಮರೆಯುವುದಿಲ್ಲ

ಯಾರೂ ಕ್ರೆಡಿಟ್ ನೀಡಲಿಲ್ಲ

TV9 ಕನ್ನಡದ ಅಂಗಸಂಸ್ಥೆ ಇಂಗ್ಲಿಷ್ ವೆಬ್‌ಸೈಟ್ News9 ನಲ್ಲಿ ಅಂಕಣ ಬರೆದಿರುವ ಕಿರ್ಮಾನಿ, ಕಪಿಲ್ ಅವರು ಜಿಂಬಾಬ್ವೆ ವಿರುದ್ಧ ದಾಖಲೆಯ 175 ರನ್ ಗಳಿಸಿದರು. ಆದರೆ ಜನರು ಕಪಿಲ್ ಅವರ ಅದ್ಭುತ ಇನ್ನಿಂಗ್ಸ್ ಬಗ್ಗೆ ಮಾತ್ರ ಮಾತನಾಡುತ್ತಾರೆ. ಅವರಿಗೆ ಯಾರು ಬೆಂಬಲ ನೀಡಿದರು ಎಂದು ಯಾರು ಕೂಡ ನೆನೆಸಿಕೊಳ್ಳುವುದಿಲ್ಲ. ಅಂದು ನಾನು ಇಲ್ಲದಿದ್ದರೆ ಅವರೊಂದಿಗೆ ಆ ಜೊತೆಯಾಟವನ್ನು ಯಾರು ಮಾಡುತ್ತಿದ್ದರು? ಅಂದು ನಾನು ಸಾಥ್ ನೀಡದಿದ್ದರೆ, ವಿಶ್ವಕಪ್ ಗೆಲ್ಲುವುದನ್ನು ಮರೆತು ಬಿಡಿ. ನಾಕ್‌ಔಟ್‌ಗೆ ನಾವು ಅರ್ಹತೆ ಕೂಡ ಪಡೆಯುತ್ತಿರಲಿಲ್ಲ. ಕಪಿಲ್ 175 ರನ್‌ಗಳಿಸಲು ಹಾಗೂ ಭಾರತ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಪ್ರಮುಖ ಕಾರಣ ಮತ್ತೊಂದು ಬದಿಯಿಂದ ಕಿರ್ಮಾನಿ ನೀಡಿದ ಸಾಥ್​ ಕಾರಣವೆಂದು ಯಾವುದೇ ವರದಿಗಾರನಾಗಲಿ ಅಥವಾ ಸಾಮಾಜಿಕ ಮಾಧ್ಯಮದಲ್ಲಾಗಲಿ ಯಾರೂ ಹೇಳಲಿಲ್ಲ.

ವಿಕೆಟ್ ಕೀಪಿಂಗ್‌ನಲ್ಲೂ ಅದ್ಭುತ ಸಾಧನೆ

ಜೊತೆಗೆ ನನ್ನ ಅತ್ಯುತ್ತಮ ವಿಕೆಟ್ ಕೀಪಿಂಗ್ ಬಗ್ಗೆ ಯಾವುದೇ ಚರ್ಚೆ ನಡೆಯುತ್ತಿಲ್ಲ ಎಂದು ಕಿರ್ಮಾನಿ ದೂರಿದ್ದಾರೆ. “ನಾನು ವಿಶ್ವಕಪ್‌ನಲ್ಲಿ 14 ವಿಕೆಟ್ ಉರಳಲು ಕಾರಣನಾಗಿದ್ದೆ. ಈ ಟೂರ್ನಿಯಲ್ಲಿ ನನಗೆ ಅತ್ಯುತ್ತಮ ವಿಕೆಟ್‌ಕೀಪರ್ ಪ್ರಶಸ್ತಿ ಸಿಕ್ಕಿತು. ನಾನು ಜೂನ್‌ನಲ್ಲಿ ನಡೆದ ಮೊದಲ ಲೀಗ್ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಐದು ಕ್ಯಾಚ್‌ಗಳನ್ನು ತೆಗೆದುಕೊಂಡೆ. ಇದರಿಂದ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ವಿಕೆಟ್‌ಕೀಪರ್ ಎನಿಸಿಕೊಂಡೆ. ಹೀಗಾಗಿ ನನಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಸಿಗಬೇಕಿತ್ತು ಆದರೆ ಪ್ರಶಸ್ತಿ ಮದನ್ ಲಾಲ್‌ಗೆ ದಕ್ಕಿತು. ಆದ್ದರಿಂದ ನನಗೆ ಸಿಕ್ಕಿದ್ದರಲ್ಲಿ ನಾನು ತೃಪ್ತಿಪಡಬೇಕಾಯಿತ್ತು. ಅಲ್ಲದೆ ನನಗೆ ಏನು ಸಿಕ್ಕಿದೆಯೋ ಅದು ನನಗೆ ಸಂತೋಷ ನೀಡಿದೆ ಎಂದು ಕಿರ್ಮಾನಿ ಹೇಳಿದ್ದಾರೆ.

ಫೈನಲ್‌ನಲ್ಲಿ ಹಿಡಿದ ಅದ್ಭುತ ಕ್ಯಾಚ್

ಇದನ್ನೂ ಓದಿ

ಅಂತಿಮ ಪಂದ್ಯದಲ್ಲೂ ಕಿರ್ಮಾನಿ ಅದ್ಭುತ ಕ್ಯಾಚ್ ಹಿಡಿದಿದ್ದರು. ಇದನ್ನು ಉಲ್ಲೇಖಿಸಿರುವ ಕಿರ್ಮಾನಿ, “ಫೈನಲ್‌ನಲ್ಲಿ ನಾನು ಫೌದ್ ಬಚ್ಚಸ್ ಅವರ ಕ್ಯಾಚ್ ತೆಗೆದುಕೊಂಡಿದ್ದೆ. ಇದು ನನ್ನ ವೃತ್ತಿಜೀವನದ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಒಂದಾಗಿದೆ. ಮೊದಲ ಸ್ಲಿಪ್ ಕಡೆಗೆ ಡೈವಿಂಗ್ ಮಾಡಿ ನಾನು ಈ ಕ್ಯಾಚ್ ತೆಗೆದುಕೊಂಡೆ. ಬಲ್ವಿಂದರ್ ಸಂಧು ಅವರ ವೇಗದ ಎಸೆತದಲ್ಲಿ ನಾನು ಈ ಕ್ಯಾಚ್ ತೆಗೆದುಕೊಂಡಡಿದ್ದೆ ಎಂದು ಅಂದು ಕಿರ್ಮಾನಿ ಮಾಡಿದ ಅದ್ಭುತ ಕೀಪಿಂಗ್ ಬಗ್ಗೆ ನೆನೆದಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada