IND vs SL: ಮಂಧಾನ- ಹರ್ಮನ್‌ಪ್ರೀತ್ ಅಬ್ಬರ; ಎರಡನೇ ಟಿ20 ಗೆಲುವಿನೊಂದಿಗೆ ಸರಣಿ ಗೆದ್ದ ಭಾರತ ಮಹಿಳಾ ಪಡೆ
IND vs SL: ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಮಹಿಳಾ ತಂಡ ಮೂರು ಪಂದ್ಯಗಳ ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸಿದೆ.
ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಮಹಿಳಾ ತಂಡ ಮೂರು ಪಂದ್ಯಗಳ ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸಿದೆ. ದಂಬುಲ್ಲಾದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳ ಜಯ ಸಾಧಿಸಿದೆ. ಟೀಂ ಇಂಡಿಯಾದ ಸ್ಟಾರ್ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ (Smriti Mandhana) 39 ಮತ್ತು ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) 31 ರನ್ ಗಳಿಸಿದರು. ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 125 ರನ್ ಗಳಿಸಿತು. ಅನುಭವಿ ಉಪನಾಯಕಿ ಸ್ಮೃತಿ ಮಂಧಾನ (34 ಎಸೆತಗಳಲ್ಲಿ 39 ರನ್), ಶೆಫಾಲಿ ವರ್ಮಾ (10 ಎಸೆತಗಳಲ್ಲಿ 17 ರನ್) ಮತ್ತು ಸಭಿನಾನಿ ಮೇಘನಾ (10 ಎಸೆತಗಳಲ್ಲಿ 17 ರನ್) ಅವರ ನೆರವಿನಿಂದ ಭಾರತ 19.1 ಓವರ್‌ಗಳಲ್ಲಿ 126 ರನ್‌ಗಳ ಗುರಿಯನ್ನು ತಲುಪಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2-0 ಮುನ್ನಡೆ ಸಾಧಿಸಿದೆ.
ಅಲ್ಪ ಗುರಿ ಮುಟ್ಟುವಲ್ಲಿ ಭಾರತದ ಇನ್ನಿಂಗ್ಸ್ ಎಡವಿತು
ಗುರಿಯು ಅಷ್ಟು ದೊಡ್ಡದಾಗಿರಲಿಲ್ಲ ಆದರೆ ಈ ಸುಲಭ ಗುರಿಯನ್ನು ಬೆನ್ನಟ್ಟುವ ಸಂದರ್ಭದಲ್ಲಿ ಭಾರತ ತಂಡವು ಎಡವಿತು. ನಂತರ ಹರ್ಮನ್‌ಪ್ರೀತ್ 32 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು. ಶ್ರೀಲಂಕಾ ಉತ್ತಮವಾಗಿ ಆರಂಭಿಸಿತು, ಆದರೆ ಏಳು ವಿಕೆಟ್‌ಗೆ 125 ರನ್ ಗಳಿಸಲಷ್ಟೇ ಶಕ್ತವಾಯಿತು. ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ಸೋಮವಾರ ನಡೆಯಲಿದೆ. ಮಂಧಾನ T20I ಗಳಲ್ಲಿ 2,000 ರನ್‌ಗಳನ್ನು ತಲುಪಿದ ಎರಡನೇ ಭಾರತೀಯ ಮಹಿಳಾ ಕ್ರಿಕೆಟಿಗರಾದರು. ಮಂಧಾನ ತಮ್ಮ 84ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು, ಲೆಜೆಂಡರಿ ಕ್ರಿಕೆಟರ್ ಮಿಥಾಲಿ ರಾಜ್ (70 ಇನ್ನಿಂಗ್ಸ್) ಮತ್ತು ಹಾಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ (88 ಇನ್ನಿಂಗ್ಸ್) ನಂತರ ಈ ಸಾಧನೆ ಮಾಡಿದ ಮೂರನೇ ಭಾರತೀಯ ಮಹಿಳಾ ಕ್ರಿಕೆಟಿಗರಾದರು.
Captain @ImHarmanpreet bags the Player of the Match award for her superb all-round performance. ??#TeamIndia win the 2nd #SLvIND T20I by 5 wickets and take an unassailable 2⃣-0⃣ lead in the series. ?? pic.twitter.com/Pz8XcCGwhH
— BCCI Women (@BCCIWomen) June 25, 2022
ಶ್ರೀಲಂಕಾ ಉತ್ತಮ ಆರಂಭ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ ನಾಯಕಿ ಚಾಮರಿ ಅಟಪಟ್ಟು (41 ಎಸೆತಗಳಲ್ಲಿ 43 ರನ್) ಮತ್ತು ವಿಶ್ಮಿ ಗುಣರತ್ನೆ (50 ಎಸೆತಗಳಲ್ಲಿ 45 ರನ್) ನೆರವಿನಿಂದ ಆದರ್ಶ ಆರಂಭ ಕಂಡಿತು. ಇವರಿಬ್ಬರು ಮೊದಲ ವಿಕೆಟ್‌ಗೆ ಟಿ20ನಲ್ಲಿ ಶ್ರೀಲಂಕಾ ಪರ 87 ರನ್‌ಗಳ ಅತ್ಯುತ್ತಮ ಜೊತೆಯಾಟವನ್ನು ನೀಡಿದರು, ಏಕೆಂದರೆ ಭಾರತೀಯ ಬೌಲರ್‌ಗಳು ವಿಕೆಟ್‌ಗಳನ್ನು ಪಡೆಯಲು ವಿಫಲರಾಗಿದ್ದರು. ಆದರೆ ಅಟಪಟ್ಟು ಮತ್ತು ಗುಣರತ್ನೆ ಔಟಾದ ಬಳಿಕ ಶ್ರೀಲಂಕಾ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿದ್ದು, ತಂಡ ಅಷ್ಟು ಕಡಿಮೆ ಸ್ಕೋರ್ ಗಳಿಸಲು ಶಕ್ತವಾಯಿತು. ದೀಪ್ತಿ ಶರ್ಮಾ (ನಾಲ್ಕು ಓವರ್‌ಗಳಲ್ಲಿ 34ಕ್ಕೆ 2) ನಿಸ್ಸಂಶಯವಾಗಿ ಅತ್ಯುತ್ತಮ ಬೌಲರ್ ಆದರೆ ರಾಧಾ ಯಾದವ್ ಮತ್ತು ಪೂಜಾ ವಸ್ತ್ರಾಕರ್ ಕೂಡ ಚೆಂಡಿನೊಂದಿಗೆ ಉತ್ತಮ ಪ್ರದರ್ಶನದೊಂದಿಗೆ ಭಾರತದ ಹಿಡಿತ ಬಿಗಿಗೊಳಿಸಲು ಸಹಾಯ ಮಾಡಿದರು.
ಮೊದಲ ಟಿ20ಯಲ್ಲೂ ಭಾರತಕ್ಕೆ ಗೆಲುವು
ಇದಕ್ಕೂ ಮುನ್ನ ಗುರುವಾರ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಜೆಮಿಮಾ ರೋಡ್ರಿಗಸ್ ಅವರ ಮಹತ್ವದ ಇನ್ನಿಂಗ್ಸ್‌ನಿಂದ ಭಾರತ ತಂಡ 34 ರನ್‌ಗಳ ಜಯ ದಾಖಲಿಸಿತು. ಕೇವಲ 139 ರನ್‌ಗಳ ಸ್ಕೋರ್ ಅನ್ನು ರಕ್ಷಿಸುವ ಯತ್ನದಲ್ಲಿ ಎಡಗೈ ಸ್ಪಿನ್ನರ್ ರಾಧಾ ಯಾದವ್ (22ಕ್ಕೆ 2) ಅಪಾಯಕಾರಿಯಾಗಿ ಕಾಣುತಿದ್ದ ಶ್ರೀಲಂಕಾ ನಾಯಕಿ ಚಾಮರಿ ಅಟಪಟ್ಟು (16 ರನ್) ಮತ್ತು ಹರ್ಷಿತಾ ಮಾದವಿ (10 ರನ್) ಅವರ ವಿಕೆಟ್ ಕಬಳಿಸಿದರು.
Published On - 5:13 pm, Sat, 25 June 22