NZ vs ENG: ಅಯ್ಯೋಯ್ಯೋ ಇದೆಂಥಾ ಆಚರಣೆ; ಶತಕ ಸಿಡಿಸಿದ ಆಟಗಾರನಿಗೆ ಚಪ್ಪಲಿ, ಶೂಸ್ ತೋರಿಸಿದ ಅಭಿಮಾನಿಗಳು..!

NZ vs ENG: ಕೆಲವು ಅಭಿಮಾನಿಗಳು ಬೈರ್‌ಸ್ಟೋವ್‌ ಕಡೆಗೆ ತಮ್ಮ ಸ್ಯಾಂಡಲ್ ಮತ್ತು ಬೂಟುಗಳನ್ನು ತೋರಿಸಿ ಸಂಭ್ರಮಿಸಿದರು. ಆದರೆ ಇದಕ್ಕೆ ಬೇರೆ ಯಾವುದೇ ಅರ್ಥ ಕಲ್ಪಿಸುವುದರಲ್ಲಿ ಏನು ಪ್ರಯೋಜನವಿಲ್ಲ.

NZ vs ENG: ಅಯ್ಯೋಯ್ಯೋ ಇದೆಂಥಾ ಆಚರಣೆ; ಶತಕ ಸಿಡಿಸಿದ ಆಟಗಾರನಿಗೆ ಚಪ್ಪಲಿ, ಶೂಸ್ ತೋರಿಸಿದ ಅಭಿಮಾನಿಗಳು..!
ಚಪ್ಪಲಿ, ಶೂಸ್ ತೋರಿಸಿದ ಅಭಿಮಾನಿಗಳು
Follow us
TV9 Web
| Updated By: ಪೃಥ್ವಿಶಂಕರ

Updated on:Jun 25, 2022 | 7:11 PM

ತಮ್ಮ ನೆಚ್ಚಿನ ಆಟಗಾರರು ಅದ್ಭುತವಾಗಿ ಆಡಿದಾಗ ಪ್ರೇಕ್ಷಕರು ವಿವಿಧ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಆದರೆ ಕೆಲವೊಮ್ಮೆ ಆ ಅಭ್ಯಾಸವು ಎಲ್ಲೆಗಳನ್ನು ಮೀರುತ್ತದೆ. ನೋಡಲು ಅಸಹನೀಯ ಅನಿಸುತ್ತದೆ. ಇವತ್ತು ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳದ್ದೂ ಅದೇ ರೀತಿಯ ಸಂಭ್ರಮ ಕಮಡು ಬಂತು. ನ್ಯೂಜಿಲೆಂಡ್ ವಿರುದ್ಧ ಲೀಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ (Jonny Bairstow) ವೀರೋಚಿತ ಶತಕ ಸಿಡಿಸಿದ್ದಾರೆ. ಆದಾಗ್ಯೂ, ಅವರು ತಮ್ಮ ಶತಕವನ್ನು ಪೂರ್ಣಗೊಳಿಸುತ್ತಿದ್ದಂತೆ, ಬಾರ್ಮಿ ಆರ್ಮಿ ಎಂದು ಕರೆಯಲ್ಪಡುವ ಕೆಲವು ಅಭಿಮಾನಿಗಳು ಬೈರ್‌ಸ್ಟೋವ್‌ ಕಡೆಗೆ ತಮ್ಮ ಸ್ಯಾಂಡಲ್ ಮತ್ತು ಬೂಟುಗಳನ್ನು ತೋರಿಸಿ ಸಂಭ್ರಮಿಸಿದರು. ಆದರೆ ಇದಕ್ಕೆ ಬೇರೆ ಯಾವುದೇ ಅರ್ಥ ಕಲ್ಪಿಸುವುದರಲ್ಲಿ ಏನು ಪ್ರಯೋಜನವಿಲ್ಲ. ಏಕೆಂದರೆ ಆಂಗ್ಲ ಅಭಿಮಾನಿಗಳ ಪ್ರಕಾರ ಇದು ಕೂಡ ಒಂದು ಆಚರಣೆಯಾಗಿದೆ. ನೆಚ್ಚಿನ ಆಟಗಾರ ಅದ್ಭುತವಾಗಿ ಆಡಿದಾಗ ಬಾರ್ಮಿ ಆರ್ಮಿ ಇಂತಹ ವೈವಿಧ್ಯಮಯವಾಗಿ ಆಚರಿಸುವುದು ವಾಡಿಕೆ. ಈಗ ಈ ರೀತಿಯ ಆಚರಣೆಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಆದರೆ ಈ ರೀತಯ ಆಚರಣೆಗೆ ಕ್ರಿಕೆಟ್ ಅಭಿಮಾನಿಗಳು ಹಾಗೂ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈರ್​ಸ್ಟೋವ್ ಅಬ್ಬರ

ಇದನ್ನೂ ಓದಿ
Image
SL vs AUS: ಆಸೀಸ್ ವಿರುದ್ಧದ ಟೆಸ್ಟ್ ಸರಣಿಗೆ ಲಂಕಾ ತಂಡ ಪ್ರಕಟ; ನಿಷೇಧಕ್ಕೊಳಗಾಗಿದ್ದ ಸ್ಪಿನ್ನರ್​ಗೆ ಅವಕಾಶ
Image
IND vs SL: ಮಂಧಾನ- ಹರ್ಮನ್‌ಪ್ರೀತ್ ಅಬ್ಬರ; ಎರಡನೇ ಟಿ20 ಗೆಲುವಿನೊಂದಿಗೆ ಸರಣಿ ಗೆದ್ದ ಭಾರತ ಮಹಿಳಾ ಪಡೆ
Image
IND vs IRE: ಐರ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್‌ನಲ್ಲಿ ದಾಖಲೆ ನಿರ್ಮಿಸಲಿರುವ ಟೀಂ ಇಂಡಿಯಾದ 6 ಆಟಗಾರರಿವರು

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 329 ರನ್ ಗಳಿಸಿತು. ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 55 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಬೈರ್​ಸ್ಟೋವ್ (ಔಟಾಗದೆ 130) ಮತ್ತೊಮ್ಮೆ ಅಬ್ಬರಿಸಿದರು. ಇದು ಟಿ20 ಪಂದ್ಯವಲ್ಲದಿದ್ದರೂ ಬೈರ್​ಸ್ಟೋವ್ ಬೌಂಡರಿಗಳ ಮಳೆಗರೆದರು. ಜೊತೆಗೆ ಅವರು ಜೇಮಿ ಓವರ್ಟನ್ (ಔಟಾಗದೆ 89) ಅವರೊಂದಿಗೆ ಏಳನೇ ವಿಕೆಟ್‌ಗೆ 209 ರನ್ಗಳ ಜೊತೆಯಾಟ ಸಹ ಆಡಿದರು. ಆದಾಗ್ಯೂ, ಬೈರ್‌ಸ್ಟೋವ್ ಅವರ ಶತಕದ ನಂತರ, ಬಾರ್ಮಿ ಆರ್ಮಿ ಅಭಿಮಾನಿಗಳು ತಮ್ಮ ಶೂ ಮತ್ತು ಚಪ್ಪಲಿಗಳನ್ನು ಕೈಯಲ್ಲಿ ಹಿಡಿದು, ಶತಕ ಗಳಿಸಿದ ಆಟಗಾರನಿಗೆ ಅಭಿನಂದನೆ ಸಲ್ಲಿಸಿದರು. ಜೊತೆಗೆ ‘ನೀವು ಬೈರ್‌ಸ್ಟೋ ಅಭಿಮಾನಿಯಾಗಿದ್ದರೆ ನಿಮ್ಮ ಬೂಟುಗಳನ್ನು ತೆಗೆದುಹಾಕಿ,’ ಎಂದು ಹೆಡಿಂಗ್ಲಿ ಸ್ಟೇಡಿಯಂ ತುಂಬಾ ಉದ್ಗರಿಸಿದ್ದರು. ಇದರಿಂದ ಇನ್ನು ಹೆಚ್ಚು ಉತ್ಸಾಹಕ್ಕೊಳಗಾದ ಗ್ಯಾಲರಿಯಲ್ಲಿದ್ದ ಬಹುತೇಕ ಪ್ರೇಕ್ಷಕರು ಶೂ, ಚಪ್ಪಲಿ ಕಳಚಿ ‘ಬೈರ್ ಸ್ಟೋವ್.. ಬೈರ್ ಸ್ಟೋ’ ಎಂದು ಕೂಗಿದರು. ಬಾರ್ಮಿ ಆರ್ಮಿ ಈ ವಿಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈಗ ಈ ವೀಡಿಯೊ ಸಖತ್ ವೈರಲ್ ಆಗಿದೆ.

62 ವರ್ಷಗಳ ಹಳೆಯ ದಾಖಲೆ ಪುಡಿಪುಡಿ

ಬೈರ್‌ಸ್ಟೋವ್ ಮತ್ತು ಓವರ್‌ಟನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಏಳನೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟವನ್ನು ನಡೆಸಿದರು. ಇದರೊಂದಿಗೆ ಇವರಿಬ್ಬರು ಜಿಮ್ ಪಾರ್ಕ್ ಮತ್ತು ಮೈಕ್ ಸ್ಮಿತ್ ಅವರ 62 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. 1960 ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ, ಪಾರ್ಕ್ ಮತ್ತು ಸ್ಮಿತ್ ಏಳನೇ ವಿಕೆಟ್‌ಗೆ 197 ರನ್‌ಗಳ ಜೊತೆಯಾಟವನ್ನು ನಡೆಸಿದರು.

24 ನೇ ಇಂಗ್ಲಿಷ್ ಬ್ಯಾಟರ್

ಶತಕ ಇನ್ನಿಂಗ್ಸ್‌ನ ಸಹಾಯದಿಂದ 5000 ಟೆಸ್ಟ್ ರನ್ ಗಳಿಸಿದ ಜಾನಿ ಬೈರ್‌ಸ್ಟೋವ್ ಟೆಸ್ಟ್‌ನಲ್ಲಿ 5,000 ರನ್ ಪೂರೈಸಿದರು. ಈ ಸಾಧನೆ ಮಾಡಿದ ಇಂಗ್ಲೆಂಡ್‌ನ 24ನೇ ಆಟಗಾರ ಎನಿಸಿಕೊಂಡರು.

92 ವರ್ಷಗಳ ನಂತರ ಸರ್ ಬ್ರಾಡ್ಮನ್ ಸಾಧನೆ ಪುನರಾವರ್ತನೆ

ಮಿಚೆಲ್ 92 ವರ್ಷಗಳ ನಂತರ ಸರ್ ಬ್ರಾಡ್ಮನ್ ಅವರ ಸಾಧನೆಯನ್ನು ಪುನರಾವರ್ತಿಸಿದರು. ಪಂದ್ಯದ ಮೂರನೇ ದಿನ ನ್ಯೂಜಿಲೆಂಡ್ ಪರ ಡ್ಯಾರಿಲ್ ಮಿಚೆಲ್ (109) ಶತಕ ದಾಖಲಿಸಿದರು. ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಂಗ್ಲಿಷ್ ಪಿಚ್‌ಗಳಲ್ಲಿ ಸತತ ಮೂರು ಶತಕಗಳನ್ನು ಗಳಿಸಿದರು. ಈ ಶತಕದೊಂದಿಗೆ ಈ ಸಾಧನೆ ಮಾಡಿದ ಮೊದಲ ಎದುರಾಳಿ ಆಟಗಾರ ಎನಿಸಿಕೊಂಡರು. ಸರ್ ಡ್ಯಾನ್ ಬ್ರಾಂಡ್‌ಮನ್ 1930 ರಲ್ಲಿ ಈ ಸಾಧನೆ ಮಾಡಿದರು. ಇಂಗ್ಲೆಂಡ್ ವಿರುದ್ಧದ ಅವರ ತವರು ಟೆಸ್ಟ್ ಸರಣಿಯಲ್ಲಿ ಬ್ರಾಂಡ್‌ಮನ್ ಸತತ ಮೂರು ಶತಕಗಳನ್ನು ಗಳಿಸಿದ್ದರು.

Published On - 7:11 pm, Sat, 25 June 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ