Virat Kohli: ಕಿಂಗ್ ಕೊಹ್ಲಿ, ಅಯ್ಯರ್, ಜಡೇಜಾ ಅರ್ಧಶತಕ: ಅಭ್ಯಾಸ ಪಂದ್ಯದಲ್ಲಿ ಭಾರತ ಅಬ್ಬರ

Leicestershire vs India: ಲೀಸೆಸ್ಟರ್ಷೈರ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತದ ಬ್ಯಾಟರ್​ಗಳು ಬೊಂಬಾಟ್ ಆಟವಾಡುತ್ತಿದ್ದು ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

Virat Kohli: ಕಿಂಗ್ ಕೊಹ್ಲಿ, ಅಯ್ಯರ್, ಜಡೇಜಾ ಅರ್ಧಶತಕ: ಅಭ್ಯಾಸ ಪಂದ್ಯದಲ್ಲಿ ಭಾರತ ಅಬ್ಬರ
Virat Kohli Jadeja and Shreyas Iyer
TV9kannada Web Team

| Edited By: Vinay Bhat

Jun 26, 2022 | 8:30 AM

ಇಂಗ್ಲೆಂಡ್ ವಿರುದ್ಧದ ಅಂತಿಮ ಐದನೇ ಟೆಸ್ಟ್​ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಲೀಸೆಸ್ಟರ್ಷೈರ್ ಕೌಂಟಿ ತಂಡದ (Leicestershire vs India) ವಿರುದ್ಧ ಅಭ್ಯಾಸ ಪಂದ್ಯವನ್ನು ಆಡುತ್ತಿದ್ದು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ಭಾರತದ ಬ್ಯಾಟರ್​ಗಳು ಬೊಂಬಾಟ್ ಆಟವಾಡುತ್ತಿದ್ದು ವಿರಾಟ್ ಕೊಹ್ಲಿ (Virat Kohli), ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ (Ravindra Jadeja) ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಕಳಪೆ ಫಾರ್ಮ್​​ನಿಂದ ತತ್ತರಿಸಿದ್ದ ಕೊಹ್ಲಿ-ಅಯ್ಯರ್ ಲಯಕ್ಕೆ ಮರಳಿದ್ದಾರೆ. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 92 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 364 ರನ್ ಕಲೆಹಾಕಿ 366 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಇಂದು ಅಂತಿಮ ದಿನದಾಟ ನಡೆಯಲಿದ್ದು ದಿನದ ಆರಂಭದಲ್ಲೇ ಡಿಕ್ಲೇರ್ ಘೋಷಿಸಿ ಲೀಸೆಸ್ಟರ್ಷೈರ್ ತಂಡಕ್ಕೆ ಬ್ಯಾಟಿಂಗ್ ನಡೆಸಲು ಅವಕಾಶ ನೀಡುವ ಸಾಧ್ಯತೆ ಇದೆ.

ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ​ 1 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿತ್ತು. 3ನೇ ದಿನದಾಟ ಆರಂಭಿಸಿದ ಭಾರತ ಪರ ಶ್ರೀಕರ್ ಭರತ್ (43) ಹಾಗೂ ಹನುಮಾ ವಿಹಾರಿ (20) ಬೇಗನೆ ಔಟಾದರು. ನಂತರ ಅಯ್ಯರ್ 89 ಎಸೆತಗಳಲ್ಲಿ 62 ರನ್‌ ಗಳಿಸಿದರು. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ವಿರಾಟ್ 98 ಎಸೆತಗಳಲ್ಲಿ 67 ರನ್‌ ಗಳಿಸಿದರು. ಐದು ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿದರು. ಅವರು ಜಸ್‌ಪ್ರೀತ್ ಬೂಮ್ರಾ ಬೌಲಿಂಗ್‌ನಲ್ಲಿ ಔಟಾದರು. ಒಟ್ಟು 366 ರನ್‌ಗಳ ಮುನ್ನಡೆ ಸಾಧಿಸಿದೆ. ರವೀಂದ್ರ ಜಡೇಜ (ಬ್ಯಾಟಿಂಗ್ 56) ಮತ್ತು ಮೊಹಮ್ಮದ್ ಸಿರಾಜ್ (ಬ್ಯಾಟಿಂಗ್ 1) ಕ್ರೀಸ್‌ನಲ್ಲಿದ್ದಾರೆ.

Rohit Sharma: ಭಾರತಕ್ಕೆ ದೊಡ್ಡ ಆಘಾತ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೋವಿಡ್ ಪಾಸಿಟಿವ್

ಇದಕ್ಕೂ ಮುನ್ನ ಮೊದಲ ದಿನ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 60.2 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 246 ರನ್ ಕಲೆಹಾಕಿ ಡಿಕ್ಲೇರ್ ಘೀಷಿಸಿತು. ಭರತ್ 111 ಎಸೆತಗಳಲ್ಲಿ 8 ಫೋರ್, 1 ಸಿಕ್ಸರ್​​ನೊಂದಿಗೆ ಅಜೇಯ 70 ರನ್ ಗಳಿಸಿದರು. ಬಳಿಕ ಲೀಸೆಸ್ಟರ್ಷೈರ್ ತನ್ನ ಮೊದಲ ಇನಿಂಗ್ಸ್‌ನಲ್ಲಿ ಭಾರತೀಯ ಬೌಲರ್‌ಗಳ ಎದುರು ರನ್‌ ಹೆಕ್ಕಲು ಪರದಾಟ ನಡೆಸಿತು. ರಿಷಭ್ ಪಂತ್‌ 76 ರನ್‌ ಸಿಡಿಸಿದ್ದನ್ನು ಬಿಟ್ಟರೆ, ಲೂಯಿಸ್‌ ಕಿಂಬರ್‌ (31) ಮತ್ತು ರಿಷಿ ಪಟೇಲ್‌ (34) ಕೊಂಚ ಪ್ರತಿರೋಧವೊಡ್ಡಿದರು. ಭಾರತ ಪರ ಮೊಹಮ್ಮದ್‌ ಶಮಿ 12 ಓವರ್‌ಗಳಲ್ಲಿ 42 ರನ್‌ ಕೊಟ್ಟು 3 ವಿಕೆಟ್‌ ಪಡೆದರು. ಮೊಹಮ್ಮದ್‌ ಸಿರಾಜ್‌ 26ಕ್ಕೆ 2 ವಿಕೆಟ್‌ ಪಡೆದರೆ, ಶಾರ್ದುಲ್‌ ಠಾಕೂರ್‌ ಮತ್ತು ರವೀಂದ್ರ ಜಡೇಜಾ ಒಂದು ವಿಕೆಟ್‌ ಪಡೆದರು.

ರೋಹಿತ್ ಶರ್ಮಾಗೆ ಕೋವಿಡ್ ಪಾಸಿಟಿವ್:

ಲೀಸೆಸ್ಟರ್ಷೈರ್ ಕೌಂಟಿ ತಂಡದ ವಿರುದ್ಧ ನಾಲ್ಕು ದಿನಗಳ ಅಭ್ಯಾಸ ಪಂದ್ಯ ನಡೆಯುತ್ತಿರುವಾಗಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ  ಅವರಿಗೆ ಕೊರೊನಾ ಸೋಂಕು ತಗುಲಿದೆ. ಲೀಸೆಸ್ಟರ್​​​ನಲ್ಲಿ ನಡೆದ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಅವರಿಗೆ ಕೋವಿಡ್ -19 ಸೋಂಕು ಇರುವುದು ದೃಢಪಟ್ಟಿದೆ. ಶನಿವಾರ ರ್ಯಾಪಿಡ್ ಟೆಸ್ಟ್ ನಡೆಸಲಾಗಿದ್ದು, ಇದರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಹೀಗಾಗಿ ಹಿಟ್​ಮ್ಯಾನ್ ಅಭ್ಯಾಸ ಪಂದ್ಯದ​ ಎರಡನೇ ಇನ್ನಿಂಗ್ಸ್​​ನಲ್ಲಿ ಬ್ಯಾಟಿಂಗ್​ ಕೂಡ ಮಾಡಲಿಲ್ಲ. ರೋಹಿತ್​​ಗೆ ಕೊರೊನ ಪಾಸಿಟಿವ್ ಬಂದಿರುವ ಬಗ್ಗೆ ಬಿಸಿಸಿಐ ಟ್ವೀಟ್ ಮಾಡುವ ಮೂಲಕ ಮಾಹಿತಿ ತಿಳಿಸಿದೆ.

ಇದನ್ನೂ ಓದಿ

Ranji Trophy Final: ದೀಪಕ್ ನೋಡಿ ಸಿಎಸ್​ಕೆ ಎಂದು ಕೂಗಿದವರಿಗೆ ಖಡಕ್ ರಿಪ್ಲೇ ನೀಡಿದ ಆರ್​ಸಿಬಿ ಫ್ಯಾನ್ಸ್; ವಿಡಿಯೋ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada