ಲೀಸೆಸ್ಟರ್ಷೈರ್ ಕೌಂಟಿ ಕ್ರಿಕೆಟ್ ತಂಡದ ವಿರುದ್ಧ ನಡೆಯುತ್ತಿರುವ ನಾಲ್ಕು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತ (Leicestershire vs India) ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೂ ಎರಡನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ (Team India) ಬೊಂಬಾಟ್ ಕಮ್ಬ್ಯಾಕ್ ಮಾಡಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 7 ವಿಕೆಟ್ ನಷ್ಟಕ್ಕೆ 364 ರನ್ ಗಳಿಸಿದ್ದು 366 ರನ್‌ಗಳ ಮುನ್ನಡೆ ಪಡೆದುಕೊಂಡಿದೆ. ಸತತ ವೈಫಲ್ಯ ಅನುಭವಿಸುತ್ತಿದ್ದ ಶ್ರೇಯಸ್ ಅಯ್ಯರ್ (62) ಹಾಗೂ ರವೀಂದ್ರ ಜಡೇಜಾ (56*) ಲಯಕ್ಕೆ ಮರಳಿರುವುದು ಭಾರತಕ್ಕೆ ಸಂತಸ ತಂದಿದೆ. ಮಖ್ಯವಾಗಿ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಆಕರ್ಷಕ ಅರ್ಧಶತಕ ಸಿಡಿಸಿ ಫಾರ್ಮ್ ಕಂಡುಕೊಂಡಿದ್ದಾರೆ. ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದ ಕಿಂಗ್ ಕೊಹ್ಲಿ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಭರವಸೆ ಮೂಡಿಸಿದ್ದಾರೆ.
ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್ನಲ್ಲಿ 69 ಎಸೆತಗಳಲ್ಲಿ 4 ಫೋರ್, 1 ಸಿಕ್ಸರ್ ಮೂಲಕ 33 ರನ್ ಬಾರಿಸಿದರೆ, ಎರಡನೇ ಇನ್ನಿಂಗ್ಸ್ನಲ್ಲಿ 98 ಎಸೆತಗಳಲ್ಲಿ 5 ಫೋರ್, ಎರಡು ಸಿಕ್ಸರ್ನೊಂದಿಗೆ 67 ರನ್ ಚಚ್ಚಿದರು. ಇದರಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಕೊಹ್ಲಿ ಸಿಡಿಸಿದ ಸಿಕ್ಸರ್. ಅದುಕೂಡ ಜಸ್‌ಪ್ರೀತ್ ಬುಮ್ರಾ ಬೌಲಿಂಗ್ಗೆ ಎಂಬುದು ವಿಶೇಷ. ಹೌದು, ಈ ಅಭ್ಯಾಸ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್, ಚೇತೇಶ್ವರ್ ಪೂಜಾರ, ಜಸ್‌ಪ್ರೀತ್ ಬೂಮ್ರಾ ಮತ್ತು ಪ್ರಸಿದ್ಧ ಕೃಷ್ಣ ಲೀಸಿಸ್ಟರ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
Virat Kohli: ಕಿಂಗ್ ಕೊಹ್ಲಿ, ಅಯ್ಯರ್, ಜಡೇಜಾ ಅರ್ಧಶತಕ: ಅಭ್ಯಾಸ ಪಂದ್ಯದಲ್ಲಿ ಭಾರತ ಅಬ್ಬರ
ಇದರಲ್ಲಿ ಕೊಹ್ಲಿ-ಬುಮ್ರಾ ಕಾಳಗ ಸಖತ್ ಆಗಿ ಮೂಡಿಬಂತು. ಅದರಲ್ಲೂ ಕೊಹ್ಲಿ ಇವರ ಬೌಲಿಂಗ್ಗೆ ಸಿಕ್ಸರ್ ಸಿಡಿಸಿದ್ದು ಅಮೋಘವಾಗಿತ್ತು. 55ನೇ ಓವರ್ನಲ್ಲಿ ಬುಮ್ರಾ ಅವರು ತಮ್ಮ ಮೂರನೇ ಎಸೆತವನ್ನು ಶಾರ್ಟ್ ಬೌನ್ಸರ್ ಎಸೆದರು. ಇದನ್ನು ಚೆನ್ನಾಗಿ ಅರಿತ ಕೊಹ್ಲಿ ಅಪ್ಪರ್ ಕಟ್ ಮೂಲಕ ಭರ್ಜರಿ ಆಗಿ ಸಿಕ್ಸರ್ ಸಿಡಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.
✂️ | 𝐊𝐨𝐡𝐥𝐢 𝐮𝐩𝐩𝐞𝐫𝐜𝐮𝐭𝐬 𝐁𝐮𝐦𝐫𝐚𝐡 𝐟𝐨𝐫 6️⃣.
What a shot! Kohli is now onto 44. Can he get to 5️⃣0️⃣ ? Find out. 👇
𝐋𝐈𝐕𝐄 𝐒𝐓𝐑𝐄𝐀𝐌: https://t.co/SFmJYQNe8u 👈
🇮🇳 235/6, lead by 237
🦊 #IndiaTourMatch | #LEIvIND | #TeamIndia pic.twitter.com/EyOeZzhE1M
— Leicestershire Foxes 🏏 (@leicsccc) June 25, 2022
ಈ ಪಂದ್ಯದ ಮೊದಲ ದಿನ ಮೊದಲ ಇನ್ನಿಂಗ್ಸ್ನಲ್ಲಿ ಭಾರತ 60.2 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 246 ರನ್ ಕಲೆಹಾಕಿ ಡಿಕ್ಲೇರ್ ಘೀಷಿಸಿತು. ಭರತ್ 111 ಎಸೆತಗಳಲ್ಲಿ 8 ಫೋರ್, 1 ಸಿಕ್ಸರ್ನೊಂದಿಗೆ ಅಜೇಯ 70 ರನ್ ಗಳಿಸಿದರು. ಬಳಿಕ ಲೀಸೆಸ್ಟರ್ಷೈರ್ ತನ್ನ ಮೊದಲ ಇನಿಂಗ್ಸ್‌ನಲ್ಲಿ ಭಾರತೀಯ ಬೌಲರ್‌ಗಳ ಎದುರು ರನ್ ಹೆಕ್ಕಲು ಪರದಾಟ ನಡೆಸಿತು. ರಿಷಭ್ ಪಂತ್ 76 ರನ್ ಸಿಡಿಸಿದ್ದನ್ನು ಬಿಟ್ಟರೆ, ಲೂಯಿಸ್ ಕಿಂಬರ್ (31) ಮತ್ತು ರಿಷಿ ಪಟೇಲ್ (34) ಕೊಂಚ ಪ್ರತಿರೋಧವೊಡ್ಡಿದರು.
ಭಾರತ ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. 3ನೇ ದಿನದಾಟ ಆರಂಭಿಸಿದ ಭಾರತ ಪರ ಶ್ರೀಕರ್ ಭರತ್ (43) ಹಾಗೂ ಹನುಮಾ ವಿಹಾರಿ (20) ಬೇಗನೆ ಔಟಾದರು. ನಂತರ ಅಯ್ಯರ್ 89 ಎಸೆತಗಳಲ್ಲಿ 62 ರನ್ ಗಳಿಸಿದರು. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ವಿರಾಟ್ 98 ಎಸೆತಗಳಲ್ಲಿ 67 ರನ್ ಗಳಿಸಿದರು. ಐದು ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿದರು. ಅವರು ಜಸ್‌ಪ್ರೀತ್ ಬೂಮ್ರಾ ಬೌಲಿಂಗ್‌ನಲ್ಲಿ ಔಟಾದರು. ಒಟ್ಟು 366 ರನ್‌ಗಳ ಮುನ್ನಡೆ ಸಾಧಿಸಿದೆ. ರವೀಂದ್ರ ಜಡೇಜ (ಬ್ಯಾಟಿಂಗ್ 56) ಮತ್ತು ಮೊಹಮ್ಮದ್ ಸಿರಾಜ್ (ಬ್ಯಾಟಿಂಗ್ 1) ಕ್ರೀಸ್‌ನಲ್ಲಿದ್ದಾರೆ.
Rohit Sharma: ಭಾರತಕ್ಕೆ ದೊಡ್ಡ ಆಘಾತ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೋವಿಡ್ ಪಾಸಿಟಿವ್