IND vs IRE: ಮೊದಲ ಟಿ20ಗೆ ಭಾರತದ ಪ್ಲೇಯಿಂಗ್ XI ರೆಡಿ: ಮಾಸ್ಟರ್ ಪ್ಲಾನ್ ರೂಪಿಸಿದ ಲಕ್ಷ್ಮಣ್-ಪಾಂಡ್ಯ

India Playing XI vs Ireland, 1st T20I: ಇಂದು ದಿ ವಿಲೇಜ್​ನ ಡಬ್ಲಿನ್​ನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಗಿದೆ. ವಿವಿಎಸ್ ಲಕ್ಷ್ಮಣ್ ಕೋಚ್ ಆಗಿದ್ದಾರೆ. ಈ ಬಾರಿಯ ಪ್ಲೇಯಿಂಗ್ ಇಲೆವೆನ್​​ನಲ್ಲಿ ಕೆಲ ಹೊಸ ಮುಖಗಳನ್ನು ನಿರೀಕ್ಷಿಸಲಾಗಿದೆ.

IND vs IRE: ಮೊದಲ ಟಿ20ಗೆ ಭಾರತದ ಪ್ಲೇಯಿಂಗ್ XI ರೆಡಿ: ಮಾಸ್ಟರ್ ಪ್ಲಾನ್ ರೂಪಿಸಿದ ಲಕ್ಷ್ಮಣ್-ಪಾಂಡ್ಯ
IND Playing XI vs Ireland, 1st T20I
TV9kannada Web Team

| Edited By: Vinay Bhat

Jun 26, 2022 | 9:23 AM

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಸಮಬಲಗೊಂಡ ಬಳಿಕ ಯಂಗ್ ಇಂಡಿಯಾ ಇದೀಗ ಐರ್ಲೆಂಡ್ (India vs Ireland) ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗುತ್ತಿದೆ. ಇಂದು ದಿ ವಿಲೇಜ್​ನ ಡಬ್ಲಿನ್​ನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದ ಅನುಭವಿ ಆಟಗಾರರನ್ನೊಳಗೊಂಡ ಟೀಮ್ ಇಂಡಿಯಾ (Team India) ಇಂಗ್ಲೆಂಡ್ ಪ್ರವಾಸ ಬೆಳೆಸಿರುವ ಕಾರಣ ಹಾರ್ದಿಕ್ ಪಾಂಡ್ಯ (Hardik Pandya) ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಗಿದೆ. ವಿವಿಎಸ್ ಲಕ್ಷ್ಮಣ್ ಕೋಚ್ ಆಗಿದ್ದಾರೆ. ಐಪಿಎಲ್​ನಲ್ಲಿ ಮಿಂಚಿದ ಸ್ಟಾರ್ ಆಟಗಾರರ ದಂಡೇ ಇದರಲ್ಲಿದ್ದು, ಮುಂಬರುವ ಟಿ20 ವಿಶ್ವಕಪ್‌ ಹಿನ್ನೆಲೆಯಲ್ಲಿ ಇವರ ಸಾಮರ್ಥ್ಯ ಪರೀಕ್ಷಿಸಲು ಇದೊಂದು ಅತ್ಯುತ್ತಮ ವೇದಿಕೆಯಾಗಿದೆ. ಜೊತೆಗೆ ಲಕ್ಷ್ಮಣ್ ಹಾಗೂ ಹಾರ್ದಿಕ್​ಗೂ ಅಗ್ನಿಪರೀಕ್ಷೆಯಾಗಿದೆ. ದಕ್ಷಿಣ ಆಫ್ರಿಕಾ ಎದುರಿನ 5 ಪಂದ್ಯಗಳ ಸರಣಿಯಲ್ಲಿ ಭಾರತ ಒಂದೇ ತಂಡವನ್ನು ಕಣಕ್ಕಿಳಿಸಿ ಅನೇಕ ಆಟಗಾರರನ್ನು ಬೆಂಚ್‌ ಮೇಲೆ ಕೂರಿಸಿತ್ತು. ಈ ಬಾರಿ ಕೆಲ ಹೊಸ ಮುಖಗಳನ್ನು ನಿರೀಕ್ಷಿಸಲಾಗಿದೆ.

ಹೌದು, ಉಮ್ರಾನ್‌ ಮಲಿಕ್‌, ಆರ್ಷದೀಪ್‌ ಸಿಂಗ್‌, ದೀಪಕ್‌ ಹೂಡಾ, ವೆಂಕಟೇಶ್‌ ಅಯ್ಯರ್‌, ರವಿ ಬಿಷ್ಣೋಯಿ ಅವರನ್ನು ದ. ಆಫ್ರಿಕಾ ವಿರುದ್ಧದ ಐದು ಟಿ20 ಪಂದ್ಯದಲ್ಲಿ ಕಣಕ್ಕಿಳಿಸಲಿಲ್ಲ. ಇದು ಅನೇಕನ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಐರ್ಲೆಂಡ್‌ ವಿರುದ್ಧದ ಸರಣಿಯಲ್ಲಾದರೂ ಇವರಿಗೆ ಅವಕಾಶ ಲಭಿಸೀತೇ ಎಂಬುದೊಂದು ನಿರೀಕ್ಷೆ. ಈ ತಂಡಕ್ಕೆ ಎನ್‌ಸಿಎ ಅಧ್ಯಕ್ಷ, ಮಾಜಿ ಬ್ಯಾಟರ್‌ ವಿವಿಎಸ್‌ ಲಕ್ಷ್ಮಣ್‌ ಕೋಚ್‌ ಆಗಿದ್ದು, ಇವರ ಕಾರ್ಯತಂತ್ರ ಹೇಗಿದ್ದೀತೆಂಬುದು ನೋಡಬೇಕಿದೆ.

Virat Kohli: ಕಿಂಗ್ ಕೊಹ್ಲಿ, ಅಯ್ಯರ್, ಜಡೇಜಾ ಅರ್ಧಶತಕ: ಅಭ್ಯಾಸ ಪಂದ್ಯದಲ್ಲಿ ಭಾರತ ಅಬ್ಬರ

ಅಲ್ಲದೆ ಸೂರ್ಯಕುಮಾರ್‌ ಯಾದವ್‌ ತಂಡಕ್ಕೆ ಮರಳಿರುವುದರಿಂದ ಹಾಗೂ ಐಪಿಎಲ್‌ನಲ್ಲಿ ಮಿಂಚಿದ ರಾಹುಲ್‌ ತ್ರಿಪಾಠಿ ಮೊದಲ ಸಲ ಅವಕಾಶ ಪಡೆದಿರುವುದರಿಂದ ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಒಂದಿಷ್ಟು ಬದಲಾ ವಣೆ ಸಂಭವಿಸುವುದರಲ್ಲಿ ಅನುಮಾ ನವಿಲ್ಲ. ಸಂಜು ಸ್ಯಾಮ್ಸನ್ ಕೂಡ ತಂಡದಲ್ಲಿದ್ದು ವಿಕೆಟ್ ಕೀಪಿಂಗ್ ಆಯ್ಕೆಯೂ ಗೊಂದಲವಾಗಿ ಉಳಿದಿದೆ. ರುತುರಾಜ್‌ ಗಾಯಕ್ವಾಡ್‌ ಅವರ ಬ್ಯಾಟಿಂಗ್‌ ಫಾರ್ಮ್ ನಿರೀಕ್ಷಿತ ಮಟ್ಟದಲ್ಲಿಲ್ಲ. ಇವರ ಬ್ಯಾಟಿಂಗ್‌ ಸುಧಾರಣೆಗೆ ಮತ್ತೂಂದು ಅವಕಾಶ ಇದಾಗಿದೆ.

ಇತ್ತ ಐರ್ಲೆಂಡ್‌ ತಂಡ ಬಲಿಷ್ಠ ಅಲ್ಲವಾದರೂ ತವರಿನಲ್ಲಿ ಅಪಾಯಕಾರಿಯಾಗಿ ಗೋಚರಿಸುವ ಸಾಧ್ಯತೆ ಇದೆ. ಪಂದ್ಯದ ಗತಿಯನ್ನು ಬದಲಾಯಿಸುವ ಆಟಗಾರರು ಐರ್ಲೆಂಡ್​ನಲ್ಲಿದ್ದಾರೆ. ಯಾಕಂದರೆ ತಂಡದಲ್ಲಿ ಸಾಕಷ್ಟು ಮಂದಿ ಅನುಭವಿ ಆಟಗಾರರಿದ್ದಾರೆ. ಸ್ಟೀಫ‌ನ್‌ ಡೊಹೆನಿ, ಕಾನರ್‌ ಓಲರ್ಟ್‌ ಅವರಂಥ ಹೊಸ ಮುಖಗಳೂ ಇವೆ. ಹೀಗಾಗಿ ಇದೊಂದು ಹೈವೋಲ್ಟೇಜ್ ಕದನ ಆಗುವುದರಲ್ಲಿ ಅನುಮಾನವಿಲ್ಲ.

ಭಾರತ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಎರಡು ಪಂದ್ಯಗಳ ಟಿ20 ಸರಣಿ ಜೂನ್ 26 ಹಾಗೂ ಜೂನ್ 28 ರಂದು ಆಯೋಜಿಸಲಾಗಿದೆ. ಎರಡು ಪಂದ್ಯಗಳು ಕೂಡ ಡಬ್ಲಿನ್‌ನ ‘ದಿ ವಿಲೇಜ್’ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಎರಡೂ ಪಂದ್ಯ ರಾತ್ರಿ 9 ಗಂಟೆಗೆ ಶುರುವಾಗಲಿದೆ. ಈ ಹಿಂದೆ ಭಾರತದಲ್ಲಿ ನಡೆದ ಪಂದ್ಯ 7 ಗಂಟೆಗೆ ಶುರುವಾಗಿತ್ತು. ಇದು ಎರಡು ಗಂಟೆ ತಡವಾಗಿ ಆರಂಭವಾಗಲಿದೆ.

ಭಾರತ ಸಂಭಾವ್ಯ ಪ್ಲೇಯಿಂಗ್ XI: ಇಶಾನ್‌ ಕಿಶನ್‌, ರುತುರಾಜ್‌ ಗಾಯಕ್ವಾಡ್‌, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌, ಹಾರ್ದಿಕ್‌ ಪಾಂಡ್ಯ (ನಾಯಕ), ದಿನೇಶ್‌ ಕಾರ್ತಿಕ್‌, ಅಕ್ಷರ್‌ ಪಟೇಲ್‌, ಹರ್ಷಲ್‌ ಪಟೇಲ್‌, ಭುವನೇಶ್ವರ್‌ ಕುಮಾರ್‌, ಉಮ್ರಾನ್‌ ಮಲಿಕ್‌/ಆರ್ಷದೀಪ್‌ ಸಿಂಗ್‌, ಯುಜ್ವೇಂದ್ರ ಚಹಲ್‌.

ಇದನ್ನೂ ಓದಿ

Rohit Sharma: ಭಾರತಕ್ಕೆ ದೊಡ್ಡ ಆಘಾತ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೋವಿಡ್ ಪಾಸಿಟಿವ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada