Ranji Trophy 2022: ಈ ರಣಜಿ ಸೀಸನ್​ನಲ್ಲಿ ಅತಿ ಹೆಚ್ಚು ವಿಕೆಟ್, ರನ್, ಕ್ಯಾಚ್ ಹಿಡಿದ ಕ್ರಿಕೆಟಿಗರಿವರು

Ranji Trophy 2022: ಮುಂಬೈ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಮಧ್ಯಪ್ರದೇಶ ಮೊದಲ ಬಾರಿಗೆ ರಣಜಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

TV9 Web
| Updated By: ಪೃಥ್ವಿಶಂಕರ

Updated on:Jun 26, 2022 | 8:09 PM

ಮುಂಬೈ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಮಧ್ಯಪ್ರದೇಶ ಮೊದಲ ಬಾರಿಗೆ ರಣಜಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮಧ್ಯಪ್ರದೇಶಕ್ಕೆ ಮುಂಬೈ 108 ರನ್‌ಗಳ ಗುರಿ ನೀಡಿತ್ತು, ಅದನ್ನು ಮಧ್ಯಪ್ರದೇಶ 4 ವಿಕೆಟ್‌ಗಳ ನಷ್ಟದಲ್ಲಿ ಸುಲಭವಾಗಿ ಸಾಧಿಸಿತು. ಮೊದಲ ಇನಿಂಗ್ಸ್‌ನಲ್ಲಿ 116 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 30 ರನ್ ಗಳಿಸಿದ ಚಾಂಪಿಯನ್ ತಂಡದ ಬ್ಯಾಟ್ಸ್‌ಮನ್ ಶುಭಂ ಶರ್ಮಾ ಪಂದ್ಯ ಶ್ರೇಷ್ಠರಾದರು.

1 / 5
ಅದೇ ಸಮಯದಲ್ಲಿ, ರಣಜಿ ಟ್ರೋಫಿಯ ಈ ಸಂಪೂರ್ಣ ಋತುವಿನಲ್ಲಿ ತಮ್ಮ ಬ್ಯಾಟಿಂಗ್‌ನಿಂದ ಅಬ್ಬರ ಸೃಷ್ಟಿಸಿದ ಮುಂಬೈನ ಸರ್ಫರಾಜ್ ಖಾನ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸರ್ಫರಾಜ್ ಈ ಋತುವಿನಲ್ಲಿ ಅತ್ಯಧಿಕ 982 ರನ್ ಗಳಿಸಿದರು. ಇದರಲ್ಲಿ 4 ಶತಕ ಮತ್ತು 2 ಅರ್ಧ ಶತಕಗಳೂ ಸೇರಿವೆ.

2 / 5
Ranji Trophy 2022: ಈ ರಣಜಿ ಸೀಸನ್​ನಲ್ಲಿ ಅತಿ ಹೆಚ್ಚು ವಿಕೆಟ್, ರನ್, ಕ್ಯಾಚ್ ಹಿಡಿದ ಕ್ರಿಕೆಟಿಗರಿವರು

ಮುಂಬೈನ ಶಮ್ಸ್ ಮುಲಾನಿ ಈ ಋತುವಿನಲ್ಲಿ 45 ವಿಕೆಟ್ ಪಡೆದರು. ಈ ಅವಧಿಯಲ್ಲಿ ಅವರು ಒಂದು ಪಂದ್ಯದಲ್ಲಿ 5 ವಿಕೆಟ್‌ ಮತ್ತು ಎರಡು ಬಾರಿ 10 ವಿಕೆಟ್‌ಗಳನ್ನು ಪಡೆದರು. 167 ರನ್‌ಗಳಿಗೆ 11 ವಿಕೆಟ್‌ಗಳನ್ನು ಕಬಳಿಸಿದ್ದು ಅವರ ಅತ್ಯುತ್ತಮ ಬೌಲಿಂಗ್ ಆಗಿತ್ತು. ಶಮ್ಸ್ 54 ಮೇಡನ್ ಓವರ್ ಬೌಲ್ ಮಾಡಿದರು.

3 / 5
Ranji Trophy 2022: ಈ ರಣಜಿ ಸೀಸನ್​ನಲ್ಲಿ ಅತಿ ಹೆಚ್ಚು ವಿಕೆಟ್, ರನ್, ಕ್ಯಾಚ್ ಹಿಡಿದ ಕ್ರಿಕೆಟಿಗರಿವರು

ಮಧ್ಯಪ್ರದೇಶದ ಸ್ಟಾರ್ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ಈ ಬಾರಿಯ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಆಟಗಾರನಾಗಿದ್ದಾರೆ. ಅವರು 6 ಪಂದ್ಯಗಳಲ್ಲಿ ಒಟ್ಟು 19 ಕ್ಯಾಚ್‌ಗಳನ್ನು ತೆಗೆದುಕೊಳ್ಳುವ ಮೂಲಕ ಅದ್ಭುತ ಸಾಧನೆ ಮಾಡಿದರು.

4 / 5
Ranji Trophy 2022: ಈ ರಣಜಿ ಸೀಸನ್​ನಲ್ಲಿ ಅತಿ ಹೆಚ್ಚು ವಿಕೆಟ್, ರನ್, ಕ್ಯಾಚ್ ಹಿಡಿದ ಕ್ರಿಕೆಟಿಗರಿವರು

ಹೈದರಾಬಾದ್‌ನ ಪ್ರತೀಕ್ ರೆಡ್ಡಿ ಅತ್ಯುತ್ತಮ ವಿಕೆಟ್ ಕೀಪರ್ ಎಂಬುದನ್ನು ಸಾಬೀತುಪಡಿಸಿದರು. ಅವರು 3 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ ಒಟ್ಟು 21 ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಲು ಬೌಲರ್‌ಗಳಿಗೆ ಸಹಾಯ ಮಾಡಿದರು. ಈ ಸಮಯದಲ್ಲಿ ಅವರು ವಿಕೆಟ್ ಹಿಂದೆ 18 ಕ್ಯಾಚ್ಗಳನ್ನು ಪಡೆದರು ಮತ್ತು 3 ಬಾರಿ ಸ್ಟಂಪ್ ಮಾಡಿದರು.

5 / 5

Published On - 8:09 pm, Sun, 26 June 22

Follow us