- Kannada News Photo gallery Cricket photos Athiya Shetty KL Rahul Spotted Together Once Again as They Head to Germany for Later Surgery Watch
Athiya Shetty- KL Rahul: ಶಸ್ತ್ರಚಿಕಿತ್ಸೆಗಾಗಿ ಗೆಳತಿ ಅಥಿಯಾ ಜೊತೆ ಜರ್ಮನಿಗೆ ಹಾರಿದ ಕೆಎಲ್ ರಾಹುಲ್; ಫೋಟೋ
Athiya Shetty- KL Rahul: ಈಗ ರಾಹುಲ್ ತನ್ನ ಶಸ್ತ್ರಚಿಕಿತ್ಸೆಗಾಗಿ ಜರ್ಮನಿಗೆ ಹೋಗುತ್ತಿದ್ದು, ಈ ಕಷ್ಟದ ಸಮಯದಲ್ಲಿ ಅವರ ಗೆಳತಿ ಅಥಿಯಾ ಶೆಟ್ಟಿ ಕೂಡ ರಾಹುಲ್ಗೆ ಬೆಂಬಲವಾಗಿ ನಿಂತಿದ್ದಾರೆ.
Updated on:Jun 26, 2022 | 5:42 PM

ಟೀಂ ಇಂಡಿಯಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ಕೆಲ ಕಾಲ ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದಾರೆ. ಐಪಿಎಲ್‌ನಲ್ಲಿ, ಅವರ ನಾಯಕತ್ವದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಪ್ಲೇಆಫ್ ತಲುಪಿತು. ಆದರೆ ತಂಡದ ಪ್ರಯಾಣ ಅಲ್ಲಿಗೆ ಕೊನೆಗೊಂಡಿತು. ಇದಾದ ಬಳಿಕ ರಾಹುಲ್ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಬೇಕಿತ್ತು ಆದರೆ ಗಾಯದ ಕಾರಣ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ಈಗ ರಾಹುಲ್ ತನ್ನ ಶಸ್ತ್ರಚಿಕಿತ್ಸೆಗಾಗಿ ಜರ್ಮನಿಗೆ ಹೋಗುತ್ತಿದ್ದು, ಈ ಕಷ್ಟದ ಸಮಯದಲ್ಲಿ ಅವರ ಗೆಳತಿ ಅಥಿಯಾ ಶೆಟ್ಟಿ ಕೂಡ ರಾಹುಲ್ಗೆ ಬೆಂಬಲವಾಗಿ ನಿಂತಿದ್ದಾರೆ. ಹೀಗಾಗಿ ಭಾನುವಾರ ಇಬ್ಬರೂ ಒಟ್ಟಿಗೆ ಜರ್ಮನಿಗೆ ತೆರಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾ ನಾಯಕರಾಗಿ ಕೆಎಲ್ ರಾಹುಲ್ ಆಯ್ಕೆಯಾಗಿದ್ದರು. ಆದರೆ, ಸರಣಿ ಆರಂಭಕ್ಕೂ ಮುನ್ನ ಈ ಆರಂಭಿಕ ಆಟಗಾರ ಗಾಯಗೊಂಡು ಪ್ರವಾಸಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಜೊತೆಗೆ ರಾಹುಲ್ ಇಂಗ್ಲೆಂಡ್ ಪ್ರವಾಸದಿಂದಲೂ ದೂರ ಉಳಿದರು. ನಂತರ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ ಎಂಬ ಸುದ್ದಿ ಇತ್ತು.

ಈಗ ರಾಹುಲ್ ಶಸ್ತ್ರಚಿಕಿತ್ಸೆಗೆಂದು ಭಾನುವಾರ ಮುಂಬೈ ವಿಮಾನ ನಿಲ್ದಾಣದಿಂದ ಜರ್ಮನಿಗೆ ತೆರಳಿದರು. ಈ ಸಮಯದಲ್ಲಿ, ಅವರ ಗೆಳತಿ ಮತ್ತು ನಟಿ ಅಥಿಯಾ ಶೆಟ್ಟಿ ಅವರೊಂದಿಗೆ ಕಾಣಿಸಿಕೊಂಡರು. ರಾಹುಲ್ ತಮ್ಮ ಶಸ್ತ್ರಚಿಕಿತ್ಸೆಗಾಗಿ ಜರ್ಮನಿಯಲ್ಲಿ ಒಂದು ತಿಂಗಳ ಕಾಲ ಇರಲಿದ್ದು, ಈ ಸಮಯದಲ್ಲಿ ಅಥಿಯಾ ಅವರೊಂದಿಗೆ ಇರಲಿದ್ದಾರೆ.

ಇಬ್ಬರೂ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಟೈಲಿಶ್ ಉಡುಗೆಯಲ್ಲಿ ಕಾಣಿಸಿಕೊಂಡರು. ನೀಲಿ ಡೆನಿಮ್ ಜೀನ್ಸ್‌ನ ಮೇಲೆ ಬಿಳಿ ಟಾಪ್‌ನೊಂದಿಗೆ ನೇರಳೆ ಸ್ವೆಟರ್‌ನಲ್ಲಿ ಅಥಿಯಾ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡರು. ಅದೇ ಸಮಯದಲ್ಲಿ, ಕೆಎಲ್ ರಾಹುಲ್ ಕಪ್ಪು ಗ್ರಾಫಿಕ್ ಟೀ ಶರ್ಟ್ ಮತ್ತು ಬೀಜ್ ಬಣ್ಣದ ಕಾರ್ಗೋ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ, ಇಬ್ಬರೂ ಅಭಿಮಾನಿಗಳ ಮೊಬೈಲ್ ಕ್ಯಾಮರಕ್ಕೆ ಪೋಸ್ ನೀಡಿದರು.

ಬಹಳ ದಿನಗಳಿಂದ ಈ ಜೋಡಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ. ಈ ಜೋಡಿ ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದಾರೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ. ಈ ಮದುವೆಯ ಸುದ್ದಿಯ ಬಗ್ಗೆ ಇಬ್ಬರೂ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಅಥಿಯಾ ಅವರ ತಂದೆ ಮತ್ತು ನಟ ಸುನೀಲ್ ಶೆಟ್ಟಿ 'ಇ-ಟೈಮ್ಸ್' ಜೊತೆಗಿನ ಸಂವಾದದಲ್ಲಿ, 'ಅವಳು ನನ್ನ ಮಗಳು, ಅವಳು ಯಾವಾಗಲಾದರೂ ಮದುವೆಯಾಗಬಹುದು. ನನ್ನ ಮಗನಿಗೂ ಮದುವೆ ಆಗಬೇಕು, ಎಷ್ಟು ಬೇಗ ಅಷ್ಟು ಬೇಗ ಆಗುತ್ತೋ ಅಷ್ಟು ಒಳ್ಳೆಯದು. ಅವನು ತನ್ನ ಆಯ್ಕೆಯ ಹುಡುಗಿಯನ್ನು ಮದುವೆಯಾಗುತ್ತಾನೆ. ಕೆಎಲ್ ರಾಹುಲ್ ಬಗ್ಗೆ ಹೇಳುವುದಾದರೆ, ನಾನು ಅವರನ್ನು ಪ್ರೀತಿಸುತ್ತೇನೆ. ಈಗ ಕಾಲ ಬದಲಾಗಿರುವುದರಿಂದ ಅವರು ಏನು ಮಾಡಬೇಕೆಂದು ಅವರೇ ನಿರ್ಧರಿಸುತ್ತಾರೆ ಎಂದು ಹೇಳಿದ್ದರು.
Published On - 5:42 pm, Sun, 26 June 22



















