Bhuvneshwar Kumar: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಚೆಂಡೆಸೆದ ಭುವಿ? ಫ್ಯಾನ್ಸ್ ಶಾಕ್​..!

India vs Ireland: ಈ ಪಂದ್ಯದಲ್ಲಿ 109 ರನ್​ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ದೀಪಕ್ ಹೂಡ (47), ಇಶಾನ್ ಕಿಶನ್ (26) ಹಾಗೂ ಹಾರ್ದಿಕ್ ಪಾಂಡ್ಯ (24) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕೇವಲ 9.2 ಓವರ್​ಗಳಲ್ಲಿ ಚೇಸ್ ಮಾಡಿತು.

Bhuvneshwar Kumar: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಚೆಂಡೆಸೆದ ಭುವಿ? ಫ್ಯಾನ್ಸ್ ಶಾಕ್​..!
Bhuvneshwar Kumar
Follow us
| Updated By: ಝಾಹಿರ್ ಯೂಸುಫ್

Updated on:Jun 27, 2022 | 3:41 PM

ಭಾರತ ಮತ್ತು ಐರ್ಲೆಂಡ್ (Ireland vs India) ನಡುವಣ ಮೊದಲ ಟಿ20 ಪಂದ್ಯವು ಸ್ಪೋಟಕ ಬ್ಯಾಟಿಂಗ್​ಗೆ ಸಾಕ್ಷಿಯಾಗಿತ್ತು. ಮಳೆಬಾಧಿತ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (Team India) ಬೌಲಿಂಗ್ ಆಯ್ದುಕೊಂಡಿತು. ಪಂದ್ಯವು ಕೇವಲ 12 ಓವರ್​ಗಳಿಗೆ ಸೀಮಿತವಾಗಿದ್ದರಿಂದ ಅತ್ತ ಐರ್ಲೆಂಡ್ ತಂಡವು ಆರಂಭದಿಂದಲೇ ಸ್ಪೋಟಕ ಇನಿಂಗ್ಸ್ ಆಡಿದ್ದರು. ಅದರಂತೆ 12 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್​ ಕಲೆಹಾಕಿತು. ಐರ್ಲೆಂಡ್​ನ ಈ ಇನಿಂಗ್ಸ್​ನಲ್ಲಿ ಅವರ ಬ್ಯಾಟಿಂಗ್​ಗಿಂತ ಹೆಚ್ಚು ಗಮನ ಸೆಳೆದಿದ್ದು ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಎಂಬುದು ವಿಶೇಷ. ಏಕೆಂದರೆ ಭುವಿ ಅತೀ ವೇಗವಾಗಿ ಚೆಂಡೆಸೆಯುವ ಮೂಲಕ ಎಲ್ಲರೂ ಹೌಹಾರುವಂತೆ ಮಾಡಿದ್ದರು. ಅದೂ ಕೂಡ ದಾಖಲೆಯ ವೇಗ ಎಂದರೆ ಯಾರು ತಾನೇ ಅಚ್ಚರಿಪಡಲ್ಲ ಹೇಳಿ.

ಸ್ವಿಂಗ್ ಬೌಲರ್ ಎಂದೇ ಗುರುತಿಸಿಕೊಂಡಿರುವ ಭುವನೇಶ್ವರ್ ಕುಮಾರ್ ಐರ್ಲೆಂಡ್ ವಿರುದ್ದ ಬರೋಬ್ಬರಿ ಗಂಟೆಗೆ 208 ಕಿ.ಮೀ ವೇಗದಲ್ಲಿ ಚೆಂಡೆಸೆದಿದ್ದಾರೆ ಎಂದು ಟಿವಿ ಪರದೆಯಲ್ಲಿ ತೋರಿಸಲಾಯಿತು. ಇತ್ತ ಇದನ್ನು ನೋಡಿದ ಕ್ರಿಕೆಟ್ ಅಭಿಮಾನಿಗಳು ದಂಗಾದರು. ಏಕೆಂದರೆ ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ಚೆಂಡು ಎಸೆದ ದಾಖಲೆ ಬರೆದಿರುವ ಶೋಯೆಬ್ ಅಖ್ತರ್ ಕೂಡ ಈ ವೇಗದಲ್ಲಿ ಬಾಲ್ ಮಾಡಿರಲಿಲ್ಲ. ಅಲ್ಲದೆ ಯಾರು ಕೂಡ 170 ಕಿ.ಮೀ ವೇಗವನ್ನು ದಾಟಿಲ್ಲ. ಆದರೆ 130-140 ಅಸುಪಾಸಿನ ವೇಗದಲ್ಲಿ ಚೆಂಡೆಸೆಯುವ ಭುವನೇಶ್ವರ್ ಕುಮಾರ್ 208 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ ಎಂದು ತೋರಿಸುವ ಮೂಲಕ ಶಾಕ್ ನೀಡಿದ್ದರು.

ವಾಸ್ತವವಾಗಿ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್​ ವೇಳೆ ಸ್ಪೀಡೋಮೀಟರ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂತು. ಹೀಗಾಗಿ ಮೊದಲ ಓವರ್​ನ ಮೊದಲ ಎಸೆತವನ್ನು ಸ್ಪೀಡೋಮೀಟರ್ 201 ಕಿ.ಮೀ. ವೇಗ ಎಂದು ತೋರಿಸಿತ್ತು. ಇದಾದ ಬಳಿಕ ಅದೇ ಓವರ್‌ನಲ್ಲಿ, ಸ್ಪೀಡೋಮೀಟರ್ ಮತ್ತೊಮ್ಮೆ ಭುವನೇಶ್ವರ್ ಅವರ ಚೆಂಡಿನ ವೇಗವನ್ನು ಗಂಟೆಗೆ 208 ಕಿ.ಮೀ. ತೋರಿಸಿ ಎಲ್ಲರಿಗೂ ಆಘಾತ ನೀಡಿದರು. ಅಂದರೆ ಸ್ಪೀಡೋಮೀಟರ್ ದೋಷದಿಂದ ಕ್ರಿಕೆಟ್​ ಇತಿಹಾಸದಲ್ಲೇ ಅತಿ ವೇಗದ ಚೆಂಡನ್ನು ಎಸೆದ ಶೋಯೆಬ್ ಅಖ್ತರ್ ಅವರ 161.3 kmph ದಾಖಲೆಯನ್ನು ಭುವಿ ಕೇವಲ 2 ಎಸೆತಗಳ ಮೂಲಕ ದಾಟಿದ್ದರು. ಆ ಬಳಿಕ ಇದು ಸ್ಪೀಡೋಮೀಟರ್ ಎಡವಟ್ಟು ಎಂಬುದು ಗೊತ್ತಾಗಿದೆ. ಹೀಗಾಗಿ ಇದನ್ನು ಪರಿಗಣಿಸಬೇಡಿ ಎಂದು ತಿಳಿಸಲಾಗಿದೆ.

ಕ್ರಿಕೆಟ್​ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಚೆಂಡೆಸೆದ ದಾಖಲೆ ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಹೆಸರಿನಲ್ಲಿದೆ. 2002 ರಲ್ಲಿ ನ್ಯೂಝಿಲೆಂಡ್ ವಿರುದ್ದ ಅಖ್ತರ್ 161.3 kph ವೇಗದಲ್ಲಿ ಚೆಂಡೆಸೆದು ವಿಶ್ವ ದಾಖಲೆ ಬರೆದಿದ್ದರು. ಈ ದಾಖಲೆ ನಿರ್ಮಾಣವಾಗಿ 2 ದಶಕಗಳೇ ಕಳೆದರೂ ಈ ದಾಖಲೆಯನ್ನು ಮೀರುವಂತೆ ಯಾರೂ ಕೂಡ ಬೌಲಿಂಗ್ ಮಾಡಿರಲಿಲ್ಲ.

ಇನ್ನು ಈ ಪಂದ್ಯದಲ್ಲಿ 109 ರನ್​ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ದೀಪಕ್ ಹೂಡ (47), ಇಶಾನ್ ಕಿಶನ್ (26) ಹಾಗೂ ಹಾರ್ದಿಕ್ ಪಾಂಡ್ಯ (24) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕೇವಲ 9.2 ಓವರ್​ಗಳಲ್ಲಿ ಚೇಸ್ ಮಾಡಿತು.

Published On - 11:31 am, Mon, 27 June 22