ವಿಜಯಪುರ: ಸಿದ್ದರಾಮಯ್ಯ(Siddaramaiah) ನಾಟಿ ಕೋಳಿ ತಿಂದು ಮಡಿಕೇರಿ ಬಸವೇಶ್ವರ ದೇಗುಲಕ್ಕೆ ಹೋಗಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದ್ದೇ ತಡ, ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಈ ಬಗ್ಗೆ ಈಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಕೂಡ ಪ್ರತಿಕ್ರಿಯೆ ನೀಡಿದ್ದು ಸಿದ್ದರಾಮಯ್ಯರಿಗೆ ಸವಾಲು ಹಾಕಿದ್ದಾರೆ. ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಹಂದಿ ಮಾಂಸ ಸೇವಿಸಲಿ. ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ. ಆಗ ನಿಮ್ಮ ತಾಕತ್ತು ಏನೆಂಬುದು ಗೊತ್ತಾಗುತ್ತದೆ ಎಂದು ಸವಾಲು ಹಾಕಿದ್ದಾರೆ.
ವಿಜಯಪುರ ನಗರದ ವಿಡಿಎ ಬಳಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮಲ್ಲಿ ಒಂದೊಂದು ದೇವಸ್ಥಾನ ದರ್ಶನಕ್ಕೂ ಒಂದೊಂದು ಪದ್ಧತಿ ನಿಯಮಗಳಿವೆ. ಕೆಲವು ದೇವಸ್ಥಾನಗಳಲ್ಲಿ ಬನಿಯನ್ ಸಹ ಹಾಕದೇ ಹೋಗೋ ಸಂಸ್ಕೃತಿ ಇದೆ. ಯಾವ ಯಾವ ದೇವಸ್ಥಾನಗಳಲ್ಲಿ ಯಾವ ರೀತಿಯ ಪಾಲನೆಗಳಿವೆಯೋ ಅವುಗಳನ್ನು ಪಾಲಿಸಬೇಕು. ನೀವು ಅಂಥ ದೇವಸ್ಥಾನಕ್ಕೆ ಹೋಗಬೇಕೆಂದರೆ, ದೇವಸ್ಥಾನದ ಪಾವಿತ್ರ್ಯ ಉಳಿಯಬೇಕಾದರೆ ಆ ದೇವರಿಂದ ನಿಮಗೆ ಒಳ್ಳೆಯದಾಗಬೇಕಾದರೆ ಅಲ್ಲಿನ ಕಟ್ಟುಪಾಡುಗಳನ್ನು ನಿಯಮ ಪಾಲನೆ ಪ್ರತಿ ನಾಗರೀಕನ ಜವಾಬ್ದಾರಿ. ಇದೇ ರೀತಿ ನೀವು ಉದ್ಧಟತನ ಮಾಡುವುದರಿಂದ ಆಸ್ತಿಕರ ಮನಸ್ಸಿಗೆ ನೋವಾಗುತ್ತದೆ. ಇಂಥ ಕೆಲಸವನ್ನು ಸಿದ್ದರಾಮಯ್ಯ ಆಗಲಿ ಯಾರೇ ಆಗಲಿ ಮಾಡಬಾರದು ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಹಂದಿ ಮಾಂಸ ತಿಂದು ಮಸೀದಿಗೆ ಹೋಗಿ ನೊಡೋಣ ಎಂದು ಯತ್ನಾಳ್ ಸವಾಲು ಹಾಕಿದ್ದಾರೆ.
ಮೊಟ್ಟೆ ಎಸೆದಿದ್ದು ಯಾವ ಪಕ್ಷದವನು ಅನ್ನೋದು ಗೊತ್ತಾಗಿದೆ
ಇನ್ನು ಇದೇ ವೇಳೆ ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ ಸಂಬಂಧ ಮೊಟ್ಟೆ ಎಸೆದವನಿಗೆ ನಾನು ಅಭಿನಂದನೆ ಸಲ್ಲಿಸುವೆ ಎಂದು ಶಾಸಕ ಯತ್ನಾಳ್ ಹೇಳೀದ್ರು. ಮೊಟ್ಟೆ ಎಸೆದಿದ್ದು ಯಾವ ಪಕ್ಷದವನು ಅನ್ನೋದು ಗೊತ್ತಾಗಿದೆ. ಮೊಟ್ಟೆ ಎಸೆದವನು ಕಾಂಗ್ರೆಸ್ನವನಾಗಿದ್ದರೂ ಆತ ಹಿಂದೂ. ಹೀಗಾಗಿ ಹಿಂದೂ ಧರ್ಮದ ಬಗ್ಗೆ ಟೀಕೆ ಮಾಡಿದ್ದಕ್ಕೆ ಆತನಿಗೆ ನೋವಾಗಿದೆ. ಇದಕ್ಕೆ ಆಕ್ರೋಶಗೊಂಡು ಮೊಟ್ಟೆ ಎಸೆದಿದ್ದಾನೆ. ಹೀಗಾಗಿ ನಾನು ಸಂಪತ್ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ರು.
ತಾನು ಪಾಲನೆ ಮಾಡೋ ಧರ್ಮದ ಮೇಲೆ ಬಹಳ ಅಪಮಾನ ಆದಾಗ ಈ ರೀತಿ ಪ್ರತಿಕ್ರಿಯೆ ನೀಡಿದ್ದಾನೆ. ನಮ್ಮಲ್ಲಿ ಈಗಾ ಧರ್ಮ ಜಾಗೃತಿ ಆಗಬೇಕು. ನಾವು ಯಾವುದೇ ಧರ್ಮದ ಅಪಮಾನ ಮಾಡಬೇಕೆಂದು ಹೇಳಲ್ಲ. ನಾವು ಇಸ್ಲಾಂ, ಕ್ರಿಶ್ಚಿಯನ್ ಹಾಗೂ ಹಿಂದೂ ಧರ್ಮಕ್ಕೂ ಗೌರವ ಕೊಡುತ್ತೇವೆ. ಆದರೆ ಧರ್ಮದ ಬಗ್ಗೆ ಹೀನಾಯವಾಗಿ ಮಾತನಾಡುವುದು ಹಿಯಾಳಿಸಿದ್ದಕ್ಕೆ ಸಹಜವಾಗಿ ಆಕ್ರೋಶಗೊಂಡು ಮೊಟ್ಟೆ ಎಸೆದಿದ್ದಾನೆ ಎಂದರು.
Published On - 3:47 pm, Mon, 22 August 22