ವಿಜಯಪುರ: ಈದ್ ಮಿಲಾದ್ ಮೆರವಣಿಗೆಯಲ್ಲಿದ್ದ ಯುವಕರಿಂದ ಶಾಂತಿ ಸೌಹಾರ್ದತೆ ಕದಡಲು ಯತ್ನ

| Updated By: Rakesh Nayak Manchi

Updated on: Sep 28, 2023 | 5:30 PM

ಮೊಹಮ್ಮದ್ ಪೈಗಂಭರ್ ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಹಸಿರುವ ಬಾವುಟ ಹಿಡಿದು ಸಾಗುತ್ತಿದ್ದ ಯುವಕರು ಬಿಜೆಪಿ ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಅವರ ಬ್ಯಾನರ್ ಹರಿದು ಹಾಕಿ ಕಿಡಿಗೇಡಿತನ ಮೆರೆದಿದ್ದಾರೆ. ಈ ಘಟನೆ ವಿಜಯಪುರ ನಗರದ ಶಿವಾಜಿ ವೃತ್ತದಲ್ಲಿ ನಡೆದಿದೆ.

ವಿಜಯಪುರ, ಸೆ.28: ಮೊಹಮ್ಮದ್ ಪೈಗಂಭರ್ ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಈದ್ ಮಿಲಾದ್ (Eid Milad) ಹಬ್ಬದ ಮೆರವಣಿಗೆಯಲ್ಲಿ ಹಸಿರುವ ಬಾವುಟ ಹಿಡಿದು ಸಾಗುತ್ತಿದ್ದ ಯುವಕರು ಬಿಜೆಪಿ ಶಾಸಕ ಬಸನಗೌಡಪಾಟೀಲ್ ಯತ್ನಾಳ್ (Basangouda Patil Yatnal) ಅವರ ಬ್ಯಾನರ್ ಹರಿದು ಹಾಕಿ ಶಾಂತಿ ಸೌಹಾರ್ದತೆ ಕದಡಲು ಯತ್ನಿಸಿದ ಘಟನೆ ನಗರದ ಶಿವಾಜಿ ವೃತ್ತದಲ್ಲಿ ನಡೆದಿದೆ.

ಗಣೇಶ ಚತುರ್ಥಿಗೆ ಶುಭಕೋರುವ ನಿಟ್ಟಿನಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಭಾವಚಿತ್ರವಿದ್ದ ಬ್ಯಾನರ್ ಅನ್ನು ಶಿವಾಜಿ ವೃತ್ತದಲ್ಲಿ ಹಾಕಲಾಗಿತ್ತು. ಆದರೆ ಇಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಡೆಸಲಾದ ಮೆರವಣಿಗೆ ಇದೇ ವೃತ್ತದಿಂದ ಸಾಗಿದೆ. ಈ ವೇಳೆ ಯುವರು ಹಸಿರು ಬಾವುಟದ ಕೋಲಿನಿಂದ ಚುಚ್ಚಿ ಬ್ಯಾನರ್ ಹರಿದು ಹಾಕಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲೂ ಜೆಸಿಬಿ ಬರುತ್ತದೆ, ನಾನು ಆ ಸ್ಥಾನಕ್ಕೆ ಬಂದೇ ಬರುತ್ತೇನೆ: ಯತ್ನಾಳ್ ಹೇಳಿಕೆಯ ಮರ್ಮ ಇಲ್ಲಿದೆ

ಯುವಕರ ಕಿಡಿಗೇಡಿತನದ ದೃಶ್ಯವನ್ನು ವ್ಯಕ್ತಿಯೊಬ್ಬರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದು, ವೈರಲ್ ಆಗುತ್ತಿದೆ. ಸುದ್ದಿ ತಿಳಿಯುತ್ತಿದ್ದಂತೆ ಗಾಂಧಿಚೌಕ್ ಠಾಣಾ ಪೊಲೀಸರು ಮೆರವಣಿಗೆಯಲ್ಲಿ ಭಾಗಿಯಾಗಿದ್ದವರನ್ನು ಚದುರಿಸಿದರು. ಸ್ಥಳಕ್ಕೆ ಎಸ್​ಪಿ ಋಷಿಕೇಶ ಸೋನವಣೆ ಹಾಗೂ ಇತರೆ ಆಧಿಕಾರಿಗಳು ಕೂಡ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗೃತಾ ಕ್ರಮವಾಗಿ ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಒಂದು ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ.

ಶಿವಾಜಿ ವೃತ್ತದ ಬಳಿ ಜಮಾಯಿಸಿದ ಯತ್ನಾಳ್ ಬೆಂಬಲಿಗರು

ಬ್ಯಾನರ್ ಹರಿದು ಹಾಕಿದ ವಿಚಾರ ತಿಳಿಯುತ್ತಿದ್ದಂತೆ ಶಿವಾಜಿ ವೃತ್ತದ ಬಳಿ ಯತ್ನಾಳ್ ಬೆಂಬಲಿಗರು ಜಮಾಯಿಸಿದ್ದಾರೆ. ಉದ್ದೇಶ ಪೂರ್ವಕವಾಗಿ ಯತ್ನಾಳ್ ಭಾವಚಿತ್ರದ ಬ್ಯಾನರ್ ಹರಿದು ಹಾಕಿದ್ದಾಗಿ ಆರೋಪಿಸಿದ್ದು, ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಇಲಾಖೆಯಿಂದ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಮೊಬೈಲ್​ನಲ್ಲಿ ಸೆರೆಹಿಡಿಯಲಾಗಿರುವ ವಿಡಿಯೋ ಕೂಡ ಪರಿಶೀಲನೆ ನಡೆಸಲಾಗಿದೆ. ತನಿಖೆ ನಡೆಸಿ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಸ್​ಪಿ ಋಷಿಕೇಶ ಸೋನವಣೆ ಹೇಳಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:26 pm, Thu, 28 September 23