ಕರ್ನಾಟಕದಲ್ಲೂ ಜೆಸಿಬಿ ಬರುತ್ತದೆ, ನಾನು ಆ ಸ್ಥಾನಕ್ಕೆ ಬಂದೇ ಬರುತ್ತೇನೆ: ಯತ್ನಾಳ್ ಹೇಳಿಕೆಯ ಮರ್ಮ ಇಲ್ಲಿದೆ

ಹಿಂದುತ್ವದ ಭಾಷಣ ಮಾಡುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಾನು ಮುಂದೊಂದು ದಿನ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಬಗ್ಗೆ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ. ಹಾವೇರಿ ಕಾ ರಾಜ್ ಗಣಪತಿ ಉತ್ಸವ ಸಮಿತಿ ಆಯೋಜನೆ ಹಿಂದೂ ಜನ ಜಾಗೃತಿ ಸಭೆಯಲ್ಲಿ ಈ ಹೇಳಿಕೆ ನೀಡಿದರು.

ಕರ್ನಾಟಕದಲ್ಲೂ ಜೆಸಿಬಿ ಬರುತ್ತದೆ, ನಾನು ಆ ಸ್ಥಾನಕ್ಕೆ ಬಂದೇ ಬರುತ್ತೇನೆ: ಯತ್ನಾಳ್ ಹೇಳಿಕೆಯ ಮರ್ಮ ಇಲ್ಲಿದೆ
ಬಸನಗೌಡಪಾಟೀಲ್ ಯತ್ನಾಳ್
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: Rakesh Nayak Manchi

Updated on:Sep 28, 2023 | 3:44 PM

ಹಾವೇರಿ, ಸೆ.28: ಹಿಂದುತ್ವದ ಭಾಷಣ ಮಾಡುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ತಾನು ಮುಂದೊಂದು ದಿನ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಬಗ್ಗೆ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ. ಹಾವೇರಿ ಕಾ ರಾಜ್ ಗಣಪತಿ ಉತ್ಸವ ಸಮಿತಿ ಆಯೋಜನೆ ಹಿಂದೂ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಒಂದಿಲ್ಲ ಒಂದು ದಿವಸ ಕರ್ನಾಟಕದಲ್ಲೂ ಜೆಸಿಬಿ ಬರುತ್ತದೆ (ಉತ್ತರ ಪ್ರದೇಶ ಮಾದರಿ). ಒಂದಲ್ಲಾ ಒಂದು ದಿನ ನಾನು ಆ ಸ್ಥಾನಕ್ಕೆ ಬಂದೇ ಬರುತ್ತೇನೆ ಎಂದಿದ್ದಾರೆ.

ಕರ್ನಾಟಕದಲ್ಲಿ ಜೆಸಿಬಿ ಬಂದೇ ಬರುತ್ತದೆ. ನನಗೆ ಎರಡೇ ತಿಂಗಳು ಗೃಹ ಸಚಿವ ಮಾಡಿ ನೋಡಿ. ಉತ್ತರ ಪ್ರದೇಶದ ಬಗ್ಗೆ ಗೊತ್ತಲ್ಲ ಆ ರೀತಿ ಕರ್ನಾಟಕ ಮಾಡುತ್ತೇನೆ. ಪೊಲೀಸರ ಕೈಯಲ್ಲಿ ಗನ್ ಕೊಡುತ್ತಾರೆ. ಆದರೆ ಅದನ್ನು ಬಳಸುವಂತಿಲ್ಲ ಅಂತೆ. ಹಾಗಾದರೆ ಪೊಲೀಸರ ಕೈಗೆ ಗನ್ ಕೊಡುವುದು ಯಾಕೆ? ಎಂದು ಪ್ರಶ್ನಿಸಿದರು.

ಇಂದು ನಮ್ಮ ಬಾವುಟ ಹಾರಿಸಲು ವಿರೋಧ ಮಾಡಿದವರು ಮುಂದಿನ ದಿನಗಳಲ್ಲಿ ನಮ್ಮ ಬಾವುಟ ಹಾರಿಸುವ ಹಾಗೆ ಮಾಡೇ ಮಾಡುತ್ತೇನೆ ಎಂದು ಹೇಳಿದ ಯತ್ನಾಳ್, ನಾನು ಇಷ್ಟು ದಿವಸ ರಾಜಕೀಯದಲ್ಲಿ ಇರಲು ಕಾರಣ ಹೋರಾಟ. ನನ್ನ ಹೋರಾಟದ ಫಲವಾಗಿಯೇ ನಾನು ಶಾಸಕ ಆಗಿದ್ದೇನೆ ಎಂದರು.

ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ

ಹಿಂದೆ ನೀರಾವರಿ ಬಗ್ಗೆ ನಾನು ಹೋರಾಟ ಮಾಡಿದಾಗ ಪೊಲೀಸರು ಹೊಡೆದಿದ್ದರು. ಅವರ ಹೊಡೆತಕ್ಕೆ ನನ್ನ ಹಿಂದಿನ ಭಾಗ ಕಪ್ಪಗೆ ಆಗಿತ್ತು. ಅಂದು ನನಗೆ ಜ್ವರ ಬಂದು ಜಿಲ್ಲಾಸ್ಪತ್ರೆಗೆ ಸೇರಿದ್ದೆ. ಬಳಿಕ ನಡೆದ1996 ರ ಮೊದಲ ಚುನಾವಣೆಯಲ್ಲಿ ನಾನು ಶಾಸಕನಾದೆ. ಅಂದಿನಿಂದ ಇಂದಿನವರೆಗೂ ಹೋರಾಟ ಮಾಡುತ್ತಾ ನಾನು ರಾಜಕೀಯದಲ್ಲಿ ಇದ್ದೇನೆ ಎಂದರು.

ನಾನು ಈ ಹಿಂದೆ ಸ್ವತಂತ್ರವಾಗಿ ಪರಿಷತ್ ಸ್ಥಾನಕ್ಕೆ ಆಯ್ಕೆ ಆಗಿದ್ದೆ. ಯಾಕೆಂದರೆ ನಮ್ಮಲ್ಲೂ ಕೆಲವು ಸಲ ನಮ್ಮಂತವರಿಗೆ ಟಿಕೆಟ್ ಕೊಡಲ್ಲ. ಯಾಕಂದರೆ ವಂಶ ಬೆಳೆಸಬೇಕಲ್ಲ, ಮಕ್ಕಳಿಗೆ ಮೊಮ್ಮಕ್ಕಳಿಗೆ ಅಧಿಕಾರ ಕೊಡಬೇಕಲ್ಲ. ಹಾಗಾಗಿ ನಮ್ಮಲ್ಲೂ ಕೆಲವು ಸಲ ಟಿಕೆಟ್ ಕೊಡಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿಯಲ್ಲೂ ವಂಶಾಡಳಿತಕ್ಕೆ ಮಣೆ ಹಾಕುತ್ತಾರೆ ಎಂದು ನುಡಿದರು.

ಬೇರೆ ಶಾಸಕರು ಖರ್ಚು ಮಾಡಿದ ಶೇ.10ರಷ್ಟು ಕೂಡ ನಾನು ಖರ್ಚು ಮಾಡಿಲ್ಲ. ನಾನು ಒಮ್ಮೆ ರ್ಯಾಲಿ ಮಾಡಿದೆ 25 ಸಾವಿರ ಜನ ಸೇರಿದರು. ಬಳಿಕ ಕೆಲವೇ ಕೆಲವು ಕಡೆ ನಾನು ಭಾಷಣ ಮಾಡಿದೆ. 10 ಸಾವಿರ ಅಂತರದಲ್ಲಿ ಗೆಲುವು ಅಂತಾ ಟಿವಿಯಲ್ಲಿ ಬಂತು ಎಂದರು.

ಸನಾತನ ಧರ್ಮದ ಉಳಿವಿಗಾಗಿ ಬಿಜೆಪಿಗೆ ಮತ ಹಾಕಿ

ದೇಶದಲ್ಲಿ ಸನಾತನ ಧರ್ಮ ಉಳಿಬೇಕಾದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ. ಲೋಕಾಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನೆ ಗೆಲ್ಲಿಸಿ. ಲೋಕಸಭೆಯಲ್ಲಿ ನಾವು ಗೆದ್ದರೆ ಕಾಶ್ಮಿರದಲ್ಲೂ ಗಣಪತಿ ಇಡುತ್ತೇವೆ. 2024 ರ ಚುನಾವಣೆಯಲ್ಲಿ ಮತ್ತೆ ಮೊದಿಯನ್ನ ಬೆಂಬಲಿಸಬೇಕು. ಮುಂದಿನ 25 ವರ್ಷ ದೇಶ ನಮ್ಮ ಕೈಯಲ್ಲೆ ಇರುತ್ತದೆ ಎಂದರು.

ಇಂದು ಹಸಿರು ಬಾವುಟ ಹಾರಿಸಲು ಒಡಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಹಸಿರು ಬಾವುಟನೆ ಇಲ್ಲದ ಹಾಗೆ ಮಾಡುತ್ತೇವೆ. ನಾವು ಯಾವುದೇ ಅಭ್ಯರ್ಥಿಯನ್ನು ನೋಡಿ ಮತ ಹಾಕಬೇಕಿಲ್ಲ. ನಾವು ಮೋದಿ ನೋಡಿ ಮತ ಹಾಕಬೇಕು. ಹಿಂದೂಗಳೆ ಹೆದರಬೇಡಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.

ಇದನ್ನೂ ಓದಿ: ಸನಾತನ ಧರ್ಮವನ್ನು ಚಪ್ಪರ್​ಗಳಿಂದ ಏನೂ ಮಾಡಲಾಗಲ್ಲ: ಯತ್ನಾಳ್

ಉಪಮುಖ್ಯಮಂತ್ರಿಗೆ ಸಂವಿಧಾನತ್ಮಕವಾಗಿ ಯಾವುದೇ ಅಧಿಕಾರಿಲ್ಲ. ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸಿಎಂ ಮತ್ತು ಗೃಹ ಸಚಿವರು ಇರಬೇಕು. ಅಲ್ಲಿ ವ್ಯವಹಾರ ಮಾಡಲು ಈ ಉಪಮುಖ್ಯಮಂತ್ರಿ ಹೊಗಿ ಕುಳಿತುಕೊಳ್ಳುತ್ತಾನೆ. ಅವನ ಕೈಯಲ್ಲಿರುವುದು ನೀರಾವರಿ ಇಲಾಖೆ, ಅವನು ಪೊಲೀಸರ ಸಭೆಯಲ್ಲಿ ಕುಳಿತುಕೊಳ್ಳುತ್ತಾನೆ ಎಂದು ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದು ನಮ್ಮ ಸರ್ಕಾರ ಕೇಸರಿ ಶಾಲು ಹಾಕುವುದಲ್ಲ ಎಂದು ಐಪಿಎಸ್ ಅಧಿಕಾರಿಗಳಿಗೆ ಹೇಳುತ್ತಾನೆ. ಹಿಂದೂ ಶಾಲು ಹಾಕುವುದಲ್ಲ, ಹಿಂದೂ ಕಾರ್ಯಕ್ರಮಗಳಲ್ಲಿ ಪೊಲೀಸರು ಡ್ಯಾನ್ಸ್ ಮಾಡುತ್ತಾರೆ ಎನ್ ಮಾಡುತ್ತೀಯಾ ಎಂದು ಪ್ರಶ್ನಿಸಿದರು. ಅವರಿಗೂ (ಪೊಲೀಸರು) ಹಿಂದೂ ಬಗ್ಗೆ ಅಭಿಮಾನ ಇರುವುದೇ ತಪ್ಪಾ? ಈ ಗೃಹ ಸಚಿವ ಅಂತೂ ಕಠಿಣ ಕ್ರಮ ಕೈಗೊಳ್ಳೊದು, ತಿವ್ರ ಕಠಿಣ ಕ್ರಮ ಕೈಗೊಳ್ಳೊದು ಹೇಳುತ್ತಾನೆ. ಆದರೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ, ಇಂತ ನರ ಸತ್ತ ಸರ್ಕಾರ ನರ ಸತ್ತ ಮುಖ್ಯಮಂತ್ರಿ ಬಂದರೆ ಹೀಗೇ ಆಗುವುದು ಎಂದರು.

ಧರ್ಮ ಉಳಿಸುವ ಸ್ವಾಮೀಜಿಗಳು ಮಂತ್ರಿಗಳ ಮನೆ ಸುತ್ತುತ್ತಿದ್ದಾರೆ

ಇವತ್ತಿನ ಹಾವೇರಿ ಬೃಹತ್ ಸಭೆ ನೋಡಿದರೆ ಸನಾತನ ಧರ್ಮದ ಜಾಗೃತಿಯ ಅರಿವಾಗುತ್ತದೆ. ಇಂದು ಪೂಜ್ಯ ಗುರುಲಿಂಗ್ ಸ್ವಾಮಿಜಿಯವರ ಮಾತನ್ನ ಕೇಳಿದರೆ, ಸನಾತನ ಧರ್ಮದ ಬಗ್ಗೆ ನೀಜವಾಗಲೂ ಗೌರವ ಮೂಡುತ್ತದೆ. ಸ್ವಾಮಿಜಿಗಳ ಕೆಲಸ ಸನಾತನ ಧರ್ಮ ಉಳಿಸುವ ಕೆಲಸ ಆಗಬೇಕು. ಆದರೆ ಇಂದು ಅನೇಕ ಸ್ವಾಮಿಗಳು ಮಂತ್ರಿಗಳ ಮನೆ ಸುತ್ತುವ ಕೆಲಸ ಮಾಡುತ್ತಿದ್ದಾರೆ ಎಂದರು.

ಮೆಡಿಕಲ್ ಕಾಲೇಜ್, ಇಂಜಿನಿಯರಿಂಗ್ ಕಾಲೇಜ್ ಕಟ್ಟಿಸಿಕೊಡಲು ಸ್ವಾಮೀಜಿಗಳು ಮಂತ್ರಿಗಳ ಹಿಂದೆ ಒಡಾಡುತ್ತಿದ್ದಾರೆ. ಆದರೆ ಸನಾತನ ಧರ್ಮ ಉಳಿಸುವ ಕೆಲಸ ಮಾಡುತ್ತಿಲ್ಲ. ಧರ್ಮ ಉಳಿಸುವ ಕೆಲಸ ಮಾಡಬೇಕಾದವರು ಮಂತ್ರಿ ಮಾಡಿ ಮುಖ್ಯಮಂತ್ರಿ ಮಾಡಿ ಅಂತಾ ಲಾಬಿ ಮಾಡುತ್ತಿದ್ದಾರೆ ಎಂದರು.

ನೀವು ಬ್ರೀಟಿಷರಿಗೆ ಹುಟ್ಟಿದ್ದೀರಾ?: ಯತ್ನಾಳ್

ಭಾರತ ಎಂದು ಕರೆದರೆ ಕೆಲವರಿಗೆ ನೋವಾಗುತ್ತದೆ. ಭರತದಿಂದ ಭಾರತ ಆಗಿದೆ. ಇಂಡಿಯಾ ಅಂತಾ ಇಟ್ಟವರು ಬ್ರೀಟಿಷರು. ನೀವು ಭಾರತೀಯಾರ? ಅಥವಾ ಬ್ರೀಟಿಷರಿಗೆ ಹುಟ್ಟಿದಿರಾ? ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು.

ನಾವು ಭಾರತೀಯರು ನಮ್ಮ ಭಾರತದ ಒಂದು ಟವರ್ ಮೇಲೆ ಒಂದು ಧ್ವಜ ಹಾರಿಸಿದಕ್ಕೆ ಉರಿಯುತ್ತದೆ. ನಮಕ್ಕಿಂತ ದೊಡ್ಡ ಧ್ವಜ ಹಾರಿಸಿದರೆ ಬಹಳ ದೊಡ್ಡವರಾದರೇ? ನಿಮ್ಮ ಅಪ್ಪಂದಿರಿಗೆ ಹುಟ್ಟಿದಿರಾ? ನಾವು ಚಂದ್ರನ ಮೇಲೆ ತ್ರಿವಣ ಧ್ವಜ ಹಾರಿಸಿದ್ದೇವೆ. ನಿಮ್ಮಂಪ್ಪಗೆ ಹುಟ್ಟಿದರೆ ಅಲ್ಲಿ ಹೋಗಿ ಧ್ವಜ ಹಾರಿಸಿ. ಅನ್ನ ತಿನ್ನೊದು ಭಾರತದ್ದು, ನೀರು ಕುಡಿಯುವುದು ಭಾರತದ್ದು, ಆದರೆ ಜೈಕಾರ ಹಾಕುವುದು ಪಾಕಿಸ್ತಾನಕ್ಕಾ ಎಂದು ಪ್ರಶ್ನಿಸಿದರು.

ಯತ್ನಾಳ್ ಬ್ಯಾನರ್ ಹರಿದ ಕಿಡಿಗೇಡಿಗಳು

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾವಚಿತ್ರವಿದ್ದ ಬ್ಯಾನರ್​ ಅನ್ನು ಕಿಡಿಗೇಡಿಗಳು ಹರಿದ ಘಟನೆ ವಿಜಯಪುರ ನಗರದ ಶಿವಾಜಿ ವೃತ್ತದಲ್ಲಿ ನಡೆದಿದೆ. ಗಣೇಶೋತ್ಸವದ ಹಬ್ಬದ ಶುಭಕೋರಿ ಹಾಕಿದ್ದ ಶಾಸಕ ಯತ್ನಾಳ ಭಾವಚಿತ್ರವಿರುವ ಬ್ಯಾನರ್ ಇದಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಸರ್ಕಲ್​ನಲ್ಲಿ ಯತ್ನಾಳ್ ಬೆಂಬಲಿಗರು ಜಮಾಯಿಸಿದ್ದಾರೆ.

ಸ್ಥಳಕ್ಕೆ ಪೊಲೀಸ್ ಆಧಿಕಾರಿಗಳು ಹಾಗೂ ಸಿಬ್ಬಂದಿ ದೌಡಾಯಿಸಿದ್ದು, ಹರಿದ ಬ್ಯಾನರ್ ತೆರವು ಮಾಡಿದ್ದಾರೆ. ಸ್ಥಳದಲ್ಲಿದ್ದ ಯುವಕರನ್ನು ಚದುರಿಸಿದ ಕಾರ್ಯ ನಡೆಸಲಾಗಿದೆ. ಎಸ್​ಪಿ ಋಷಿಕೇಷ ಸೋನವಣೆ ಹಾಗೂ ಇತರೆ ಆಧಿಕಾರಿಗಳ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

ಬ್ಯಾನರ್ ಹರಿದ ಕಿಡಿಗೇಡಿಗಳ ಬಂಧನಕ್ಕೆ ಯತ್ನಾಳ್ ಬೆಂಬಲಿಗರು ಒತ್ತಾಯಿಸಿದ್ದು, ಬಿಗುವಿನ ವಾತಾವರಣ ಇರುವ ಹಿನ್ನೆಲೆ ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಘಟನೆ ಸಂಬಂಧ ಆರೋಪಿಗಳ ಬಂಧನಕ್ಕೆ ಪೊಲೀಸ್ ಇಲಾಖೆಯಿಂದ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲನೆ ಮಾಡಲಾಗುತ್ತಿದೆ ಎಂದು ಎಸ್​ಪಿ ಅವರು ಹೇಳಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Thu, 28 September 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್