ಚಂದ್ರಯಾನ-3 ಯಶಸ್ವಿಯಲ್ಲಿ ಕನ್ನಡಿಗ ವಿಜ್ಞಾನಿ, ಯಾರವರು? ಇಲ್ಲಿದೆ ಯುವ ವಿಜ್ಞಾನಿಯ ಇಟ್ರಸ್ಟಿಂಗ್​ ಸಂಗತಿ

| Updated By: ಆಯೇಷಾ ಬಾನು

Updated on: Aug 24, 2023 | 2:20 PM

ಪಿಯುಸಿ ವಿದ್ಯಾಭ್ಯಾಸದ ಬಳಿಕ ಅಭಿಷೇಕ ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆರಿಟ್ ಸೀಟಿನಡಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಬ್ರ್ಯಾಂಚ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಇದೇ ವೇಳೆ ಇಸ್ರೋದ ಪ್ರವೇಶ ಪರೀಕ್ಷೆ ಬರೆದು ಸೆಲೆಕ್ಟ್ ಕೂಡಾ ಆಗಿದ್ದಾರೆ. 2018 ರಿಂದ ಇಸ್ರೋದಲ್ಲಿ ಸೈಂಟಿಸ್ಟ್ ಕಂ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಚಂದ್ರಯಾನ-3 ಯಶಸ್ವಿಯಲ್ಲಿ ಕನ್ನಡಿಗ ವಿಜ್ಞಾನಿ, ಯಾರವರು? ಇಲ್ಲಿದೆ ಯುವ  ವಿಜ್ಞಾನಿಯ ಇಟ್ರಸ್ಟಿಂಗ್​ ಸಂಗತಿ
ಅಭಿಷೇಕ್ ದೇಶಪಾಂಡೆ
Follow us on

ವಿಜಯಪುರ, ಆ.24: ಲಕ್ಷಾಂತರ ಕಿಲೋ ಮೀಟರ್ ದೂರದಲ್ಲಿರುವ ಚಂದಾಮಾಮನ ಅಂಗಳದಲ್ಲಿ ನಮ್ಮ ಹೆಮ್ಮೆಯ ಭಾರತದ ಚಂದ್ರಯಾನ 3ರ(Chandrayaan-3) ರಾಕೆಟ್ ನಿಂದ ಅಂತರಿಕ್ಷದ ಪಥ ಸೇರಿದ್ದ ವಿಕ್ರಮ ಲ್ಯಾಂಡರ್ ಸೇಫಾಗಿ ಲ್ಯಾಂಡ್ ಆಗಿದೆ. ಈ ವಿಸ್ಮಯ ಕ್ಷಣವು ಕೋಟ್ಯಾಂತರ ಭಾರತೀಯರ ಮೈ ಮನಸ್ಸುಗಳಲ್ಲಿ ರೋಮಾಂಚನ, ಖುಷಿ, ಆನಂದ ಭಾಷ್ಪ ಒಟ್ಟಿಗೆ ತಂದಿತ್ತು. ಇಸ್ರೋ ವಿಜ್ಞಾನಿಗಳ ಬಿಗಿ ಉಸಿರು, ಭಯ ಹೋಗಲಾಡಿಸಿ ನಸು ನಗುವಂತೆ ಮಾಡಿದ್ದೇ ಸೇಫ್ ಲ್ಯಾಂಡ್ ಆದ ವಿಕ್ರಮ ಲ್ಯಾಂಡರ್. ನಿರೀಕ್ಷೆಯಂತೆ ಚಂದ್ರನ ಅಂಗಳದಲ್ಲಿ ಭಾರತ ಅಧಿಪತ್ಯ ಸಾಧಿಸಿದೆ. ವಿಜ್ಞಾನಿಗಳ ತಂಡದ ಹುಮ್ಮಸ್ಸು ಶ್ರಮ ಮತ್ತಷ್ಟು ಪುಟಿದೇಳುವಂತಾಗಿದೆ. ಅದೇ ನೂರಾರು ವಿಜ್ಞಾನಿಗಳಲ್ಲಿ ಒಬ್ಬರಾಗಿ ದೇಶ ಸೇವೆ ಸಲ್ಲಿಸಿದ ವಿಜಯಪುರ ಮೂಲದ ಯುವ ವಿಜ್ಞಾನಿ ಮನೆಯಲ್ಲಿ ಚಂದ್ರಯಾನ 3ರ ಸಕ್ಸಸ್ ಸೆಲೆಬ್ರೇಷನ್​ಗೆ ವೇದಿಕೆಯಾಗಿದೆ.

ಸೈಂಟಿಸ್ಟ್ ಕಂ ಇಂಜಿನಿಯರ್ ಅಭಿಷೇಕ ದೇಶಪಾಂಡೆ ಮನೆಯಲ್ಲಿ ಸಂಭ್ರಮ

ಚಂದ್ರಯಾನ 3ರ ಯೋಜನೆ ನಿನ್ನೆ(ಆ.23) ಭಾರತದ ಸಾಧನೆಗೆ ಸಾಕ್ಷಿಯಾಗಿದೆ. ವಿಕ್ರಮ ಲ್ಯಾಂಡರ್ ಸೇಫಾಗಿ ಲ್ಯಾಂಡ್ ಆಗಿದ್ದು, ಪ್ರಜ್ಞಾನ ರೋವರ್ ಲ್ಯಾಂಡರ್ ನಿಂದ ಹೊರ ಬಂದಿದೆ. ಗಮ್ಯ ತಲುಪಿದ್ದಕ್ಕೆ ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ಮೋದಿಯಿಂದ ಹಿಡಿದು ಗಣ್ಯಾತಿಗಣ್ಯರ ಶುಭಾಷಯಗಳು ಹರಿದು ಬಂದಿವೆ. ಈ ವಿಜ್ಞಾನಿಗಳ ತಂಡದಲ್ಲಿ ವಿಜಯಪುರ ಮೂಲದ ಸೈಂಟಿಸ್ಟ್ ಕಂ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವವ ವಿಜಯಪುರ ನಗರದ ಅಭಿಷೇಕ ದೇಶಪಾಂಡೆ ಸೇವೆಯೂ ಸೇರಿದೆ. ಚಂದ್ರನ ದಕ್ಷಿಣಾಪಥದಲ್ಲಿ ಭಾರತ ರಾಜ್ಯಭಾರ ಆರಂಭಿಸುತ್ತಿದ್ದಂತೆ ವಿಜಯಪುರ ನಗರದ ತಾಜ್ ಬಾವಡಿಯಲ್ಲಿರುವ ಅಭಿಷೇಕ ದೇಶಪಾಂಡೆ ಮನೆಯಲ್ಲಿ ಸಂತಸದ ಹೊಳೆ ಹರಿದಿತ್ತು. ಮಗನ ಸಾಧನೆಗೆ ಅವರ ತಂದೆ ಅರವಿಂದ ಹಾಗೂ ತಾಯಿ ಅಮಿತಾ, ಸಹೋದರಿ ಡಾ ಅಮೃತಾ ಹಾಗೂ ಸ್ಥಳೀಯರು ಖುಷಿ ಪಟ್ಟರು. ರಾತ್ರಿಯೇ ಪಟಾಕಿ ಸಿಡಿಸಿ ಸೆಲೆಬ್ರೇಟ್ ಮಾಡಿದರು.

ಇಂದು ವಿಜಯಪುರ ನಗರದ ಅಭಿಷೇಕ ದೇಶಪಾಂಡೆ ಮನೆಗೆ ಅಭಿನಂದನೆ ಸಲ್ಲಿಸಲು ಸಂಬಂಧಿಕರು ಸೇಹಿತರು ಸ್ಥಳೀಯ ನಿವಾಸಿಗಳ ದಂಡೆ ಹರಿದು ಬಂದಿತ್ತು. ಅಭಿಷೇಕನ ಬಾಲ್ಯದಿಂದ ಹಿಡಿದು ಇಂದಿನ ಸಾಧನೆವರೆಗಿನ ಘಟನೆಗಳನ್ನು ಮೆಲುಕು ಹಾಕಿತ್ತಾ ಖುಷಿ ಪಟ್ಟರು. ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಅಭಿಷೇಕ್ ದೇಶಪಾಂಡೆ ಕುಟುಂಬ

ಇದನ್ನೂ ಓದಿ: ಚಂದ್ರಯಾನ-3 ಪಯಣದಲ್ಲಿ ಕನ್ನಡಿಗ ವಿಜ್ಞಾನಿಯ ಸೇವೆ, ಇದುವೇ ನಮಗೆ ಹೆಮ್ಮೆ

ನೂರಕ್ಕೆ ನೂರು ಅಂಕಗಳನ್ನು ಪಡೆಯುತ್ತಿದ್ದ ಅಭಿಷೇಕ್ ಓದಿನಲ್ಲಿ ಎಂದೂ ಮುಂದೆ

ಸದ್ಯ ಇಸ್ರೋದಲ್ಲಿ ಸೈಂಟಿಸ್ಟ್ ಕಂ ಇಂಜಿನಿಯರ್ ಆಗಿರುವ ಅಭಿಷೇಕ್ ನೆರೆಯ ಬಾಗಲಕೊಟೆ ನಗರದ ಹೆರಂಚಲ್ ಆಸ್ಪತ್ರೆಯಲ್ಲಿ 1995ರ ಫೆಬ್ರವರಿ 1 ರಂದು ಜನಿಸಿದ್ದರು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಣ ವಿಜಯಪುರ ನಗರದ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದ್ದಾರೆ. 2011 ರಲ್ಲಿ ಎಸ್ಎಸ್ಎಲ್​ಸಿಯಲ್ಲಿ 96 ಪ್ರತಿಶತ ಅಂಕಗಳನ್ನು ಪಡೆದುಕೊಂಡಿದ್ದಾರೆ. ಇದೇ ಎಸ್​ಎಸ್​ಎಲ್​ಸಿಯಲ್ಲಿ ಸಂಸ್ಕೃತ ವಿಷಯದಲ್ಲಿ 125 ಕ್ಕೆ 125 ಹಾಗೂ ಗಣಿತ ವಿಷಯದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದರಂತೆ. ಬಳಿಕ ನಗರದ ಪಿಡಿಜೆ ಸಂಸ್ಥೆಯಲ್ಲಿಪಿ ಯುಸಿಯಲ್ಲಿ ವಿಜ್ಞಾನ ವಿಷಯವನ್ನು ತೆಗೆದುಕೊಂಡಿದ್ದರಂತೆ. ದ್ವಿತೀಯ ಪಿಯುಸಿಯಲ್ಲಿ ಗಣಿತ, ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರದಲ್ಲಿ 100 ಕ್ಕೆ ನೂರರಷ್ಟು ಅಂಕಗಳನ್ನು ತೆಗೆದುಕೊಂಡು ಸಾಧನೆ ಮಾಡಿದ್ದರಂತೆ.

ಪಿಯುಸಿ ವಿದ್ಯಾಭ್ಯಾಸದ ಬಳಿಕ ಅಭಿಷೇಕ ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆರಿಟ್ ಸೀಟಿನಡಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಬ್ರ್ಯಾಂಚ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಇದೇ ವೇಳೆ ಇಸ್ರೋದ ಪ್ರವೇಶ ಪರೀಕ್ಷೆ ಬರೆದು ಸೆಲೆಕ್ಟ್ ಕೂಡಾ ಆಗಿದ್ದಾರೆ. 2018 ರಿಂದ ಇಸ್ರೋದಲ್ಲಿ ಸೈಂಟಿಸ್ಟ್ ಕಂ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2021 ಡಿಸೆಂಬರ್ 8 ರಂದು ಅಪೂರ್ವ ಅವರೊಂದಿಗೆ ವಿವಾಹವಾಗಿದ್ದಾರೆ. ಮಗನ ಸಾಧನೆಗೆ ತಾಯಿ ಅಮಿತಾ ಕಣ್ಣಿರು ಹಾಕಿ ಖುಷಿಪಟ್ಟಿದ್ದಾರೆ. ಸದಾ ಚಟುವಟಿಕೆಯಿಂದ ಇರುತ್ತಿದ್ದ ಯಾವಾಗಲೂ ಓದಿನಲ್ಲಿ ಆಸಕ್ತಿ ವಹಿಸುತ್ತಿದ್ದ ಎಂದು ಮಗನ ಬಾಲ್ಯದ ದಿನಗಳಿಂದ ಹಿಡಿದು ಇಂದಿನ ಸಾಧನೆವರೆಗೂ ಮಾತನಾಡಿದ್ದಾರೆ.

ಅಭಿಷೇಕ್​ಗೆ ಆಧ್ಯಾತ್ಮ ವಿಷಯದಲ್ಲೂ ಆಸಕ್ತಿ ಇತ್ತು

ಇನ್ನು ಅಭಿಷೇಕ ದೇಶಪಾಂಡೆ ಅವರ ಪ್ರಾಥಮಿಕ ಶಾಲಾ ಶಿಕ್ಷಕಿ ವಿಜೇತಾ ಕನಮಡಿ ಅವರ ಪ್ರಕಾರ ಅಭಿಷೇಕ ಓದಿನಲ್ಲಿ ಸದಾ ಮುಂದಿದ್ದರೂ ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಯಾವತ್ತೂ ಮುಂದಿರುತ್ತಿದ್ದನಂತೆ. ಪ್ರಬಂಧ ಸ್ಪರ್ಧೆ, ಹಾಡುಗಾರಿಕೆ, ನಾಟಕ, ಭಾಷಣದಲ್ಲಿ ನಿಪುಣನಾಗಿದ್ದು ಆಟೋಟ ಆಧ್ಯಾತ್ಮ ವಿಷಯದಲ್ಲೂ ಆಸಕ್ತಿ ಹೊಂದಿದ್ದನಂತೆ. ಆತನ ತಂದೆ ತಾಯಿ ಮನೆಯಾಚೆ ಹೊರಟರೆ ಅವರೊಂದಿಗೆ ಹೋಗದೇ ನನ್ನ ಬಳಿಯೇ ಹೆಚ್ಚು ಇರುತ್ತಿದ್ದ ಎಂದಿದ್ಧಾರೆ. ಅಭಿಷೇಕನ ಸಾಧನೆ ಮತ್ತಷ್ಟು ಹೆಚ್ಚಲಿ ಎಂದು ಶುಭ ಹಾರೈಸಿದ್ದಾರೆ.

ಒಂದೆಡೆ ಚಂದ್ರಯಾನ 3ರ ಸಫಲತೆಯ ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಿದ್ದರೆ ಇತ್ತ ವಿಜಯಪುರ ಜಿಲ್ಲೆಯಲ್ಲಿ ಇಡೀ ಯೋಜನೆಯ ಸಕ್ಸಸ್ ನ ಸಡಗರದ ಜೊತೆಗೆ ಜಿಲ್ಲೆಯ ಯುವ ವಿಜ್ಞಾನಿ ಚಂದ್ರಯಾನ ತಂಡದಲ್ಲಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇದು ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ನಮ್ಮ ಜಿಲ್ಲೆಯ ಯುವ ವಿಜ್ಞಾನಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಯುವ ಪೀಳಿಗೆಗೆ ಮಾದರಿಯಾಗಲಿದ್ದಾರೆ. ಯುವ ವಿಜ್ಞಾನಿ ಅಭಿಷೇಕ ದೇಶಪಾಂಡೆ ಅವರಂತೆ ಮತ್ತಷ್ಟು ಜಿಲ್ಲೆಯ ವಿದ್ಯಾರ್ಥಿಗಳು ವಿಜ್ಞಾನಿಗಳಾಗಲಿ ಎಂದು ಜನರು ಬಯಸಿದ್ದಾರೆ. ಜೈ ಹೋ ಇಸ್ರೋ ಜೈ ಹೋ ಅಭಿಷೇಕ ಎಂದು ಜಯಕಾರ ಹಾಕಿದ್ದಾರೆ.

ವಿಜಯಪುರ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ