ವಿಜಯಪುರ: ಅಕ್ರಮವಾಗಿ ಸಾಗಿಸ್ತಿದ್ದ 110ಕ್ಕೂ ಹೆಚ್ಚು ಗೋವುಗಳ ರಕ್ಷಣೆ; ಓರ್ವನ ಬಂಧನ

ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಅಲ್ಲಲ್ಲಿ ಅಕ್ರಮ ಗೋವುಗಳ ಸಾಗಾಟ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಅದರಂತೆ ಇದೀಗ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಬೇವನೂರು ಗ್ರಾಮದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೊಬ್ಬರಿ 100 ಕ್ಕೂ ಹೆಚ್ಚು ಗೋವುಗಳನ್ನು ಗ್ರಾಮಸ್ಥರೆ ರಕ್ಷಣೆ ಮಾಡಿ, ಓರ್ವ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಜಯಪುರ: ಅಕ್ರಮವಾಗಿ ಸಾಗಿಸ್ತಿದ್ದ 110ಕ್ಕೂ ಹೆಚ್ಚು ಗೋವುಗಳ ರಕ್ಷಣೆ; ಓರ್ವನ ಬಂಧನ
ಇಂಡಿ ತಾಲೂಕಿನಲ್ಲಿ ಅಕ್ರಮ ಗೋವುಗಳ ಸಾಗಾಟ ಮಾಡುತ್ತಿದ್ದವರ ಬಂಧನ
Edited By:

Updated on: Feb 14, 2024 | 2:41 PM

ವಿಜಯಪುರ, ಫೆ.14: ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ಗ್ರಾಮಸ್ಥರೇ ತಡೆದು ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ವಿಜಯಪುರ(Vijayapura) ಜಿಲ್ಲೆಯ ಇಂಡಿ ತಾಲೂಕಿನ ಹಿರೇಬೇವನೂರು ಗ್ರಾಮದಲ್ಲಿ ನಡೆದಿದೆ. ಮಹಾರಾಷ್ಟ್ರದಿಂದ ವಿಜಯಪುರ ಜಿಲ್ಲೆಯ ಸಿಂದಗಿಗೆ ಬೊಲೆರೊ ಪಿಕ್​ಅಪ್, ಗೂಡ್ಸ್ ವಾಹನ ಸೇರಿದಂತೆ ಒಟ್ಟು ಮೂರು ವಾಹನಗಳಲ್ಲಿ ಮಧ್ಯರಾತ್ರಿ ಅಕ್ರಮವಾಗಿ 110ಕ್ಕೂ ಹೆಚ್ಚು ಗೋವುಗಳನ್ನು ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಹಿರೇಬೇವನೂರು ಗ್ರಾಮಸ್ಥರು ವಾಹನಗಳನ್ನು ತಡೆಯುತ್ತಿದ್ದಂತೆ ಇಬ್ಬರು ಚಾಲಕರು ಪರಾರಿಯಾಗಿದ್ದಾರೆ.

ಉಸಿರುಗಟ್ಟಿ ವಾಹನದಲ್ಲೇ ಮೃತಪಟ್ಟಿದ್ದ 1 ಗೋವು, 11 ಕರುಗಳು

ಇನ್ನು ಜನರ ಕೈಗೆ ಸಿಕ್ಕಿ ಬಿದ್ದ ಓರ್ವ ಚಾಲಕನನ್ನು ಗ್ರಾಮಸ್ಥರು ಪೊಲೀಸರಿಗೊಪ್ಪಿಸಿದ್ದಾರೆ. 3 ವಾಹನಗಳಲ್ಲಿಯೂ ಆಕಳು ಹಾಗೂ ಕರುಗಳ ಕಾಲುಗಳನ್ನು ಕಟ್ಟಿ ಹಾಕಲಾಗಿತ್ತು. ಇದರಿಂದ ಉಸಿರುಗಟ್ಟಿ ವಾಹನದಲ್ಲೇ 1 ಗೋವು ಮತ್ತು 11 ಕರುಗಳು ಮೃತಪಟ್ಟಿವೆ. ಸ್ಥಳಕ್ಕೆ ಆಗಮಿಸಿದ ಇಂಡಿ ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟಿದ್ದ 1 ಗೋವು, 11 ಕರುಗಳ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮಾಡಲಾಗಿದೆ. ಜೊತೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ಪೊಲೀಸರು ಗೋಶಾಲೆಗೆ ಕಳುಹಿಸಿದ್ದಾರೆ. ಈ ಕುರಿತು ಇಂಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲಿಂದ, ಎಲ್ಲಿಗೆ ಹಾಗೂ ಯಾರಿಗೆ ಸಾಗಾಟ ಮಾಡುತ್ತಿದ್ದರು ಎಂಬ ವಿಚಾರ ತನಿಖೆಯಿಂದ ಬಹಿರಂಗವಾಗಬೇಕಿದೆ.

ಇದನ್ನೂ ಓದಿ:ಪ್ರತಿವರ್ಷ 2 ಲಕ್ಷ ಗೋವುಗಳ ರಕ್ಷಣೆ ಮಾಡಬೇಕಿದೆ, ಈ ಇಲಾಖೆಯಲ್ಲೇ ಮುಂದುವರೆಯುವ ಇಚ್ಛೆಯಿದೆ: ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್

ಮೀನು ಸಾಗಾಣಿಕೆ ವಾಹನದಲ್ಲಿ ಗೋ ಮಾಂಸ ಪತ್ತೆ

ಉತ್ತರ ಕನ್ನಡ: ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಮೀನು ಸಾಗಾಣಿಕೆ ವಾಹನ ಅಪಘಾತವಾಗಿತ್ತು. ಈ ವೇಳೆ ಅದರೊಳಗೆ ಗೋ ಮಾಂಸ ಕಂಡುಬಂದಿದ್ದು. ಅಪಘಾತದಿಂದ ಈ ಕೃತ್ಯ ಬೆಳಕಿಗೆ ಬಂದಿತ್ತು. ಪಟ್ಟಣದ ಹೊಸ ನಿಲ್ದಾಣದ ಬಳಿ ಮೀನು ಸಾಗಿಸುವ ಬೊಲೆರೊ ವಾಹನ ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಬಳಿಕ ವಾಹನದ ಬಾಗಿಲು ತೆಗೆದು ಪರಿಶೀಲಿಸಿದಾಗ ಐಸ್​ ಬಾಕ್ಸ್​ಗಳ ಹಿಂದೆ ಅಂದಾಜು 9 ಕ್ವಿಂಟಾಲ್​ ಗೋ ಮಾಂಸ ಪತ್ತೆಯಾಗಿತ್ತು. ಇದನ್ನು ಶಿರಸಿಗೆ ರವಾನೆ ಮಾಡಲಾಗುತ್ತಿತ್ತು. ಇದೀಗ ಇಂಡಿ ತಾಲೂಕಿನಲ್ಲಿ ಗೋವುಗಳನ್ನೇ ಅಕ್ರಮ ಸಾಗಾಟ ಮಾಡಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ