ವಿಜಯಪುರ: ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಕೆಬಿಜೆಎನ್ಎಲ್ ಕಚೇರಿಯಲ್ಲಿ ಸಚಿವ ಸಿ ಸಿ ಪಾಟೀಲ್ ಅಧ್ಯಕ್ಷೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆದಿದ್ದು, ಸಭೆಯಲ್ಲಿ ಇಂದಿನಿಂದಲೇ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ. ಜಲಾಶಯಕ್ಕೆ ಒಳ ಹರಿವು ನಿಂತ ಬಳಿಕ ವಾರಾಬಂದಿ ಲೆಕ್ಕದಲ್ಲಿ ನೀರು ಹರಿಸಲು ನಿರ್ಧರಿಸಲಾಗಿದೆ.
14 ದಿನಗಳ ಕಾಲ ನೀರು ಹರಿಸಿ 8 ದಿನಗಳು ಬಂದ್ ಮಾಡುವ ನಿಯಮದಡಿ ನೀರು ಹರಿಸಲು ನಿರ್ಧಾರ ಮಾಡಲಾಗಿದೆ. ಡ್ಯಾಂಗೆ ಒಳ ಹರಿವು ಹೊರ ಹರವು ಆಧರಿಸಿ ನೀರು ಹರಿಸಲಾಗುತ್ತದೆ ಎಂದು ಸಚಿವ ಸಿ ಸಿ ಪಾಟೀಲ್ ಹೇಳಿದ್ದಾರೆ.
ಅಗಷ್ಟ ಕೊನೆಯವರೆಗೂ ನೀರು ಹರಿಸಲು ನಿರ್ಧರಿಸಿದ್ದು, ಮುಂಗಾರು ಹಂಗಾಮು ಮುಗಿದ ಕೂಡಲೇ ಕ್ಲೋಸರ್ ಕೆಲಸಗಳನ್ನು ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಲಘು ನೀರಾವರಿ ಬೆಳೆಗಳನ್ನು ಬೆಳೆಯಲು ಹಾಗೂ ನೀರು ಪೋಲಾಗದಂತೆ ಹಿತಮಿತವಾಗಿ ಬಳಸುವಂತೆ ರೈತರಲ್ಲಿ ಮನವಿ ಮಾಡಿದ್ದಾರೆ.
ಮುಂದಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಭೆಯನ್ನು ಮುಂದಿನ ನವೆಂಬರ್ನಲ್ಲಿ ನಡೆಸಲು ಸಭೆ ಒಪ್ಪಿಗೆ ನೀಡಿದೆ.
Published On - 5:09 pm, Tue, 26 July 22