ಬಿಜೆಪಿಯಲ್ಲಿ ಅಸಮಾಧಾನ; ಲೋಕಸಭಾ ಚುನಾವಣಾ ಹೊತ್ತಿದೆ ದೊಡ್ಡ ಬದಲಾವಣೆ-ಎಂಬಿ ಪಾಟೀಲ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 26, 2023 | 4:13 PM

ಬಿಜೆಪಿಯಲ್ಲಿ ಅಸಮಾಧಾನ ಹಿನ್ನಲೆ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕ ವಿಚಾರ ‘ಸಿಎಂ, ಡಿಸಿಎಂ, ಸತೀಶ್, ನನ್ನನ್ನು ಸಾಕಷ್ಟು ನಾಯಕರು ಸಂಪರ್ಕಿಸಿದ್ದಾರೆ. ಕಾದುನೋಡಿ ಲೋಕಸಭಾ ಚುನಾವಣೆ ಹೊತ್ತಿಗೆ ಅಥವಾ ನಂತರ ದೇಶ, ರಾಜ್ಯದಲ್ಲಿ ಬಹಳಷ್ಟು ಬದಲಾವಣೆ ಆಗುತ್ತವೆ ಎಂದು ಸಚಿವ ಎಂಬಿ ಪಾಟೀಲ್​ ಹೇಳಿದ್ದಾರೆ.

ಬಿಜೆಪಿಯಲ್ಲಿ ಅಸಮಾಧಾನ; ಲೋಕಸಭಾ ಚುನಾವಣಾ ಹೊತ್ತಿದೆ ದೊಡ್ಡ ಬದಲಾವಣೆ-ಎಂಬಿ ಪಾಟೀಲ್​
ಎಂಬಿ ಪಾಟೀಲ್​
Follow us on

ವಿಜಯಪುರ, ನ.26: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ(BY Vijayendra) ಅವರ ನೇಮಕ ಬಳಿಕ ಅಸಮಾಧಾನ ವಿಚಾರಕ್ಕೆ ಸಂಬಂಧಪಟ್ಟಂತೆ ‘ಸೋಮಣ್ಣ, ಸಿ.ಟಿ.ರವಿ, ಯತ್ನಾಳ್ ಸೇರಿ ಹಲವರು ಅಸಮಾಧಾನಗೊಂಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಎರಡು ಕಡೆ ವಿ.ಸೋಮಣ್ಣರನ್ನ ನಿಲ್ಲಿಸಿ ಬಲಿಪಶು ಮಾಡಿದರು ಎಂದು ವಿಜಯಪುರದಲ್ಲಿ ಬೃಹತ್‌, ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್(MB Patil) ಹೇಳಿದ್ದಾರೆ.

ಬಿಜೆಪಿಯಲ್ಲಿ ಅಸಮಾಧಾನ ಹಿನ್ನಲೆ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕ ವಿಚಾರ ‘ಸಿಎಂ, ಡಿಸಿಎಂ, ಸತೀಶ್, ನನ್ನನ್ನು ಸಾಕಷ್ಟು ನಾಯಕರು ಸಂಪರ್ಕಿಸಿದ್ದಾರೆ. ಕಾದುನೋಡಿ ಲೋಕಸಭಾ ಚುನಾವಣೆ ಹೊತ್ತಿಗೆ ಅಥವಾ ನಂತರ ದೇಶ, ರಾಜ್ಯದಲ್ಲಿ ಬಹಳಷ್ಟು ಬದಲಾವಣೆ ಆಗುತ್ತವೆ. ಇನ್ನು ಇದೇ ವೇಳೆ ಲಿಂಗಾಯತ, ಒಕ್ಕಲಿಗರಿಂದ ಜಾತಿಗಣತಿ ವರದಿ ಮಂಡನೆಗೆ ವಿರೋಧ ‘ಈ ಬಗ್ಗೆ ಸಿಎಂ ಜೊತೆ ಚರ್ಚಿಸಿದ ಬಳಿಕ ನನ್ನ ಅಧಿಕೃತ ನಿಲುವು ಸ್ಪಷ್ಟಪಡಿಸುತ್ತೇನೆ.ಇನ್ನುಳಿದಂತೆ ಜಾತಿಗಣತಿ ವರದಿ ಮಂಡನೆಯಿಂದ ಜಾತಿ‌ಗಳ ನಡುವೆ ಸಂಘರ್ಷ ವಿಚಾರ ‘ಅದು ಏನೇ ಇದ್ದರೂ ಪಕ್ಷ ಹಾಗೂ ಸರ್ಕಾರದ ಚೌಕಟ್ಟಿನಲ್ಲಿ ಮಾತನಾಡುತ್ತೇವೆ ಎಂದರು.

ಇದನ್ನೂ ಓದಿ:ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟದ ನಡುವೆ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಶಿವರಾಮ್ ಹೆಬ್ಬಾರ್

ಡಿಕೆ ಶಿವಕುಮಾರ್​ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್​ ವಿಚಾರ ‘ ಕಾನೂನಿನ ಪ್ರಕಾರವೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಅಡ್ವೊಕೇಟ್​ ಜನರಲ್ ಸಲಹೆ ಪಡೆದು ಅನುಮತಿ ಹಿಂಪಡೆಯಲಾಗಿದೆ. ಹಿಂದಿನ ಬಿಜೆಪಿ ಸಂಪುಟದಲ್ಲಿ ಈ ಬಗ್ಗೆ ಮೊದಲು ಅನುಮೋದನೆ ಪಡೆದಿತ್ತು. ಸಂಪುಟ ಒಪ್ಪಿಗೆ ಬಳಿಕ ಎಜಿ ಅಭಿಪ್ರಾಯ ಪಡೆದಿತ್ತು ಎಂಬ ಆರೋಪವಿದೆ. ಡಿ.ಕೆ ಶಿವಕುಮಾರ್​​ ವಿರುದ್ಧ ಷಡ್ಯಂತ್ರ ಹಣೆಯಲಾಗಿದೆ ಎಂಬ ಶಂಕೆ ಕೂಡ ಇದೆ. ಹೀಗಾಗಿ ಸಂಪುಟದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆಯಲಾಗಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Sun, 26 November 23