ವಿಜಯಪುರ: ಕ್ಷೇತ್ರಕ್ಕೆ ಸಂಬಂಧವೇ ಇಲ್ಲದಿರುವ ಸಚಿವ ಗೋವಿಂದ ಕಾರಜೋಳ (Govinda Karajola) ನಾಗಠಾಣ ಕ್ಷೇತ್ರದಲ್ಲಿ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. ನಾಗಠಾಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಸಚಿವ ಕಾರಜೋಳ ಅಡ್ಡಿ ಮಾಡುತ್ತಿದ್ದಾರೆಂದು ಸಚಿವ ಗೋವಿಂದ ಕಾರಜೋಳ ವಿರುದ್ಧ ಜಿಡಿಎಸ್ ಶಾಸಕ ದೇವಾನಂದ ಆರೋಪಿಸಿದರು. ನಾಗಠಾಣ ಗ್ರಾಮದ ಬಸ್ ನಿಲ್ದಾಣ ನಿರ್ಮಾಣ ಭೂಮಿಪೂಜೆಯನ್ನು ಸ್ವತಃ ಸಚಿವ ಕಾರಜೋಳರೇ ಮಾಡಿದ್ದಾರೆ. ಭೂಮಿಪೂಜೆಯನ್ನು ಸಾರಿಗೆ ಸಚಿವ ಶ್ರೀರಾಮೂಲು ಪೂಜೆ ಮಾಡಬಹುದಿತ್ತು. ಆದರೆ ಕ್ಷೇತ್ರಕ್ಕೆ ಸಂಬಂಧ ಇಲ್ಲದ ಕಾರಜೋಳ ಮಾಡಿದ್ದಾರೆ ಎಂದು ಆರೋಪ ಮಾಡಿದರು. ಚಣೆಗಾಂವ ರಸ್ತೆಯ ಭೂಮಿ ಪೂಜೆಯನ್ನೂ ಸಚಿವ ಕಾರಜೋಳ ಅವರೇ ಮಾಡಿದ್ದಾರೆ. ನಾಗಠಾಣ ಮತಕ್ಷೇತ್ರದ ಅಭಿವೃದ್ಧಿಗೆ ಸಚಿವ ಕಾರಜೋಳ ಅಡೆತಡೆ ಮಾಡುತ್ತಿದ್ದಾರೆ ಎಂದರು.
ತಮ್ಮ ಮಗನ ಮೇಲೆ ಅಷ್ಟು ಪ್ರೀತಿ ಇದ್ದರೆ ನಾಗಠಾಣ ಕ್ಷೇತ್ರದ ನಡುವೆ ನಿಂತು ಕ್ಷೇತ್ರದ ಅನುಧಾನ ಘೋಷಣೆ ಮಾಡಲಿ ನೋಡೋಣ ಎಂದು ಕಾರಜೋಳರಿಗೆ ಶಾಸಕ ದೇವಾನಂದ ಸವಾಲು ಹಾಕಿದರು. ಶಾಸಕರ ಅನುಧಾನದಲ್ಲೂ ನನಗೆ ಕಡಿತ ಮಾಡಿದ್ದಾರೆ ಎಂದು ಸಚಿವ ಕಾರಜೋಳ ನೈತಿಕತೆಯನ್ನು ಶಾಸಕ ದೇವಾನಂದ ಪ್ರಶ್ನಿಸಿದರು. ನಾನು ಬೇರೆ ಬೇರೆ ಕಡೆಗಳಿಂದ ಹಣ ತಂದು ಕೆಲಸ ಮಾಡುತ್ತಿದ್ದೇನೆ. ಜನರಿಗೆ ಇದು ಗೊತ್ತಾಗ್ತಿದೆ. ಕಳೆದ 2018 ರ ಚುನಾವಣೆಯಲ್ಲಿ ದೇವಾನಂದ ಚೌವ್ಹಾಣ ಸಚಿವ ಕಾರಜೋಳ ಪುತ್ರ ಗೋಪಾಲ ವಿರುದ್ದ ಗೆಲುವು ಕಂಡಿದ್ದರು.
ನಾನು ಯಾವ ಪಕ್ಷದಲ್ಲಿರಬೇಕೆಂದು ಜನರು ನಿರ್ಧರಿಸುತ್ತಾರೆ: ಶಾಸಕ ದೇವಾನಂದ ಚೌಹಾಣ್
ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಒತ್ತಡ ಹೇರುತ್ತಿದ್ದಾರೆ. ಚುನಾವಣೆ ಸಮೀಪಿಸಿದಂತೆ ಬೇರೆ ಪಕ್ಷಗಳಿಂದ ಆಹ್ವಾನ ಬರುತ್ತಿವೆ. ಆದರೆ ನಾನು ಯಾವುದೇ ಆಫರ್ಗಳಿಗೂ ತಲೆ ಕೆಡಿಸಿಕೊಂಡಿಲ್ಲ ಎಂದು ಜಿಲ್ಲೆಯಲ್ಲಿ ಜೆಡಿಎಸ್ ಶಾಸಕ ದೇವಾನಂದ ಚೌಹಾಣ್ ಹೇಳಿಕೆ ನೀಡಿದರು. ಬಿಜೆಪಿಯಲ್ಲಿ ದೊಡ್ಡವರಿಂದಲೂ ಸಹ ನನಗೆ ಆಹ್ವಾನ ಬಂದಿದೆ. ಜೆಡಿಎಸ್ನಿಂದ ಆಯ್ಕೆಯಾಗಿದ್ದೇನೆ, ಇಲ್ಲೇ ಮುಂದುವರಿಯುತ್ತೇನೆ. ನಾನು ಯಾವ ಪಕ್ಷದಲ್ಲಿ ಇರಬೇಕೆಂದು ಜನರು ನಿರ್ಧರಿಸುತ್ತಾರೆ. ನಾನು ತೀರ್ಮಾನ ತೆಗೆದುಕೊಳ್ಳಲ್ಲ. ಕಾಂಗ್ರೆಸ್ನಿಂದ ಆಹ್ವಾನ ಬಂದಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ದೇವಾನಂದ ಚೌಹಾಣ್, ಜನರ ನಿರ್ಧಾರ ನನ್ನ ನಿರ್ಧಾರ, ಜನರು ಯಾವ ಕಡೆಗೆ ಇರ್ತಾರೋ ನಾನು ಆ ಕಡೆಗೆ ಇದ್ದೇನೆ. ಜೆಡಿಎಸ್ ಪಕ್ಷದ ಬಗ್ಗೆ ಗೌರವ ಇದೆ, ಇಲ್ಲಿ ಇರುವಷ್ಟು ಗೌರವ ಬೇರೆಲ್ಲೂ ಇಲ್ಲ. ಹೆಚ್.ಡಿ ಕುಮಾರಸ್ವಾಮಿ ಕುಟುಂಬದ ಬಗ್ಗೆ ಗೌರವ ಇದೆ. ಜೆಡಿಎಸ್ನಲ್ಲಿ ಕಾರ್ಯಕರ್ತರೆ ನಾಯಕರು. ಜೆಡಿಎಸ್ ಕಾರ್ಯಕರ್ತರ ನಿಲುವು ಗಟ್ಟಿ ಇದೆ ಎಂದು ಶಾಸಕ ದೇವಾನಂದ ಚೌವ್ಹಾಣ್ ಹೇಳಿದರು.
ಕಾಂಗ್ರೆಸ್ ವಿರುದ್ಧ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ
ಈ ರೀತಿ ವ್ಯಕ್ತಿಗತ ಆರೋಪ ಮಾಡಿದ್ದು ಸರಿಯಲ್ಲ. ಕಮಿಷನ್ ಆರೋಪ ಮಾಡಿದ ಕೆಂಪಣ್ಣ ಗುತ್ತಿಗೆದಾರನೇ ಅಲ್ಲ ಎಂದು ರಾಜ್ಯದಲ್ಲಿ ಕಾಂಗ್ರೆಸ್ನಿಂದ ‘ಪೇಸಿಎಂ ಅಭಿಯಾನ’ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಬಾಗಲಕೋಟೆಯಲ್ಲಿ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ಮಾಡಿದರು. ಇಂತಹ ವ್ಯಕ್ತಿಗೆ ಕಮಿಷನ್ ಕೊಟ್ಟಿದ್ದೇನೆ ಅಂತಾ ಕೆಂಪಣ್ಣ ಹೇಳಲಿ. ತನಿಖಾ ಸಂಸ್ಥೆ ನೋಟಿಸ್ ಕೊಟ್ಟರೂ ಸಹ ಮಾಹಿತಿ ನೀಡಿಲ್ಲ. ದೆಹಲಿಯಿಂದಲೂ ತನಿಖೆಗೆ ಕರೆದರೂ ಕೆಂಪಣ್ಣ ಬರಲಿಲ್ಲ. ಕೆಂಪಣ್ಣ ದಾಖಲೆ ಕೊಡದೇ ಸುಳ್ಳು ಆರೋಪ ಮಾಡಿ ಹೋಗ್ತಾನೆ. ಕಾಂಗ್ರೆಸ್ಸಿಗರು ಕೆಂಪಣ್ಣನನ್ನ ಟೂಲ್ ಆಗಿ ಉಪಯೋಗಿಸಿಕೊಳ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:12 pm, Sat, 24 September 22