ವಿಜಯಪುರ: ವಿಜಯಪುರ (Vjayapura) ಜಿಲ್ಲೆಯಲ್ಲಿ ಸರ್ಕಾರಿ ನೌಕರಿ ಕೊಡಿಸುತ್ತೇನೆಂದು, ಆಮೀಷ ಒಡ್ಡಿ ಹಣ ಸುಲಿಯಲು ಮುಂದಾಗಿದ್ದ ತಂಡವನ್ನು ಗಾಂಧಿಚೌಕ್ ಪೊಲೀಸರು ಸೆರೆಹಿಡದಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ಅಥಣಿ (Athani) ಪಟ್ಟಣದ ಕೃಷ್ಣಾ ಮಠದ ಹಾಗೂ ವಿಜಯಪುರ ಜಿಲ್ಲೆಯ ಹೋಂಗಾರ್ಡ್ ಆಗಿರುವ ಶಾಂತೇಶ್ ಕೊರ್ತಿ ಬಂಧಿತ ಆರೋಪಿಗಳು. ಕೃಷ್ಣಾ ಮಠದ ಮತ್ತು ಶಾಂತೇಶ ನಿರುದ್ಯೋಗಿ ಯುವಕ ಮತ್ತು ಯುವತಿಯರನ್ನು ಟಾರ್ಗೇಟ್ ಮಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕೆಲಸ ಕೊಡಿಸುತ್ತೇವೆಂದು ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಾಗೇ ವಿಕಾಸಸೌಧ, ವಿಧಾನಸೌಧ ಸೇರಿದಂತೆ ಇತರೆ ಇಲಾಖೆಗಳಲ್ಲೂ ಕೆಲಸ ಕೊಡಿಸುತ್ತೇವೆಂದು ಹೇಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು.
ವಿಜಯಪುರ ನಗರದ ಸುರೇಶ ಹಾಗೂ ಶ್ರೀಕಾಂತ ಎಂಬ ಯುವಕರಿಗೆ 8 ಲಕ್ಷ ಹಣ ನೀಡಿದರೆ ಸರ್ಕಾರಿ ನೌಕರಿ ಕೊಡಿಸೋದಾಗಿ ಹೇಳಿದ್ದರು. ಈ ಕುರಿತು ಕೃಷ್ಣಾ ಮಠ ಹಾಗೂ ಶಾಂತೇಶ ಮಾತನಾಡಿ ಪ್ರಸಂಗ ಮೊಬೈಲ್ನಲ್ಲಿ ಸೆರೆಯಾಗಿದೆ. ನಿನ್ನೆ (ಸೆ 22) ರಂದು ಸುರೇಶ ಹಾಗೂ ಶ್ರೀಕಾಂತರಿಂದ ಮುಂಗಡವಾಗಿ ಶಾಂತೇಶ 2 ಲಕ್ಷ ಹಣ ಪಡೆಯಲು ಬಂದಿದ್ದನು.
ಈ ವೇಳೆ ಯುವಕರು ಶಾಂತೇಶನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಜಯಪುರ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ. ಯುವಕರು ಇಂದು ಕೃಷ್ಣಾ ಮಠದನನ್ನು ಕರೆಸಲು ಪ್ಲ್ಯಾನ್ ಮಾಡಿದ್ದರು, ಆದರೆ ಕೊನೆ ಕ್ಷಣದಲ್ಲಿ ಬರಲ್ಲಾ ಎಂದದಿದ್ದಾನೆ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಮೋಸದ ಜಾಲ ಪತ್ತೆಯಾಗೋ ಸಾಧ್ಯತೆ ಇದೆ.
ಮತ್ತಷ್ಟು ರಾಜ್ಯದ ಸುದ್ದಿಗಖ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Fri, 23 September 22