ವಿಜಯಪುರ: ಜಿಲ್ಲೆಯ ಇಂಡಿ ತಾಲೂಕು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಲಂಚಾವತಾರ (Bribery) ಜೋರಾಗಿ ನಡೆಯುತ್ತಿದ್ದು, ದಲ್ಲಾಳಿಗಳು (Brokers) ಸಬ್ ರೆಜಿಸ್ಟಾರ್ ಕಚೇರಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಅಧಿಕಾರಿ ಮೊಹಮ್ಮದರಫಿ ಪಟೇಲ್ ಎದುರಲ್ಲೇ ಅವ್ಯವಹಾರ ನಡೆದಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇನ್ನು ಯಾವುದೇ ಕೆಲಸ ಮಾಡಬೇಕಾದರೂ ಲಂಚ ನೀಡಲೇಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಹಕ್ಕು ಪತ್ರ, ಖರೀದಿ ಪತ್ರ, ಮಾರ್ಡಗೇಜ್ ಮಾಡುವುದು, ಭಕ್ಷೀಸ್ ಪತ್ರ, ವಾಟ್ನಿ ಪತ್ರ, ಹಿಸಾರ್ ಪತ್ರ ಸೇರಿ ಇತರೆ ಕೆಲಸಗಳಿಗೆ ಲಂಚ ನೀಡಬೇಕು ಎಂಬ ಆರೋಪ ಕೇಳಿಬಂದಿದೆ.
ಸರ್ಕಾರ ನಿಗದಿಪಡಿಸಿದ ಶುಲ್ಕದ ಹೊರತಾಗಿ ಲಂಚ ನೀಡಿದರೆ ಮಾತ್ರ ಸಾರ್ವಜನಿಕರ ಕೆಲಸವಾಗುತ್ತದೆ. ಏಜೆಂಟರು ಕಚೇರಿಯಲ್ಲಿ ಇಷ್ಟಿಷ್ಟು ಹಣ ಎಂದು ದರ ಕೂಡಾ ಫಿಕ್ಸ್ ಮಾಡಿದ್ದಾರೆ. ಲಂಚ ನೀಡದಿದ್ದರೆ ಆಧಿಕಾರಿಗಳು ಮತ್ತು ಏಜೆಂಟರು ಇಲ್ಲಸಲ್ಲದ ನೆಪ ಹೇಳುತ್ತಾರೆ. ಲಂಚ ನೀಡಿದರೆ ನಾಳೆಯೇ ಕೆಲಸ ಮಾಡೋದಾಗಿ ಏಜೆಂಟರ್ಗಳು ಹೇಳುತ್ತಾರೆ ಎಂದು ಆರೋಪಿಸಿರುವ ಸಾರ್ವಜನಿಕರು, ಕೂಡಲೆ ಇದಕ್ಕೆಲ್ಲಾ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು ಏಜೆಂಟರು ಲಂಚ ಕೇಳುವುದು ಮತ್ತು ಲಂಚ ಪಡೆಯುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಮೊಹಮ್ಮದರಫಿ ಪಟೇಲ್ ಸಹೋದರ ಸಯ್ಯದ್ ಪಟೇಲ್ ಕಚೇರಿ ಸಿಬ್ಬಂದಿ ಕೂರುವ ಜಾಗದಲ್ಲಿ ಬಂದು ದರ್ಬಾರ್ ಮಾಡುತ್ತಾನೆ. ಮಧ್ಯಾಹ್ನದ ವೇಳೆ ಕಚೇರಿಯೊಳಗೆ ಬಂದು ಸಯ್ಯದ್ ಠಿಕಾಣಿ ಹೂಡುತ್ತಾನೆ. ತಮಗೆ ಬೇಕಾದವರ ಕೆಲಸಗಳನ್ನು ಮಾಡುತ್ತಾನೆ. ಇದೆಲ್ಲವನ್ನು ಸಬ್ ರೆಜಿಸ್ಟಾರ್ ಪಟೇಲ್ ಸಬ್ ರೆಜಿಸ್ಟಾರ್ ಪಟೇಲ್ ನೋಡದಂತಿದ್ದಾನೆ ಎಂದು ಜನರು ಗಂಭೀರವಾಗಿ ಆರೋಪಿಸಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:21 am, Thu, 2 June 22