ಅಕ್ಕ ಮಹಾದೇವಿ ಮಹಿಳಾ ವಿವಿ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳ; ದಯಾಮರಣಕ್ಕೆ ಸಂತ್ರಸ್ತೆ ಮನವಿ

| Updated By: ಆಯೇಷಾ ಬಾನು

Updated on: Mar 23, 2024 | 11:13 AM

ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿವಿ ಸಿಬ್ಬಂದಿ ಶ್ರೀಶೈಲ ದೊಡಮನಿ ಎಂಬುವವರು ವಿಶ್ವವಿದ್ಯಾಲಯದ ಉದ್ಯಾನವನ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದು ಸಂತ್ರಸ್ತೆ ದಯಾಮರಣ ಕೋರಿ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಅಕ್ಕ ಮಹಾದೇವಿ ಮಹಿಳಾ ವಿವಿ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳ; ದಯಾಮರಣಕ್ಕೆ ಸಂತ್ರಸ್ತೆ ಮನವಿ
ಅಕ್ಕ ಮಹಾದೇವಿ ಮಹಿಳಾ ವಿವಿ
Follow us on

ವಿಜಯಪುರ, ಮಾರ್ಚ್​.23: ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿವಿಯಲ್ಲಿ (Karnataka State Akka Mahadevi Women’s University) ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬಯಲಿಗೆ ಬಂದಿದೆ. ಲೈಂಗಿಕ ಕಿರುಕುಳ ತಾಳಲಾರದೆ ದಯಾಮರಣ ನೀಡಬೇಕೆಂದು ಸಂತ್ರಸ್ತೆ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ವಿಶ್ವವಿದ್ಯಾಲಯದ ಉದ್ಯಾನವನ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತೆಗೆ ಮಹಿಳಾ ವಿವಿಯ ಸಿಬ್ಬಂದಿ ಶ್ರೀಶೈಲ ದೊಡಮನಿಯಿಂದ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ.

ಲೈಂಗಿಕ ಕಿರುಕುಳದ ಕುರಿತು ವಿವಿಯ ಆಂತರಿಕ ದೂರು ಸಮಿತಿಗೆ ಕಳೆದ ಪೆಬ್ರವರಿ 14 ರಂದು ಸಂತ್ರಸ್ತೆ ದೂರು ನೀಡಿದ್ದರು. ಆದರೆ ಆಂತರಿಕ ದೂರು ಸಮಿತಿ ಈವರೆಗೂ ಸಂತ್ರಸ್ತೆ ನೀಡಿರೋ ದೂರಿನ ಕುರಿತು ಕ್ರಮ ತೆಗೆದುಕೊಂಡಿಲ್ಲ. ಇದೇ ವಿವಿಯ ಉದ್ಯಾನವನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಪತಿ 2015ರಲ್ಲಿ ವಿವಿಯ ಆವರಣದ ತಡೆಗೋಡೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಯ ಮರಣದ ನಂತರ ಮಹಿಳೆಗೆ ಉದ್ಯಾನವನ ವಿಭಾಗದಲ್ಲಿ ಕೆಲಸ ಸಿಕ್ಕಿತ್ತು. ಪತಿ ಮರಣ ನಂತರ ಪಿಎಫ್ ಹಣ ನೀಡಿಲ್ಲ ಎಂದು ಕೂಡ ಸಂತ್ರಸ್ತ ಮಹಿಳೆ ಆರೋಪ ಮಾಡಿದ್ದಾರೆ.

ಎಸ್​ಸಿ, ಎಸ್ಟಿ ನೌಕರರ ಸಂಘದ ಪದಾಧಿಕಾರಿ ಸುಭಾಷ್ ಕಾಂಬಳೆ, ಹಣಕಾಸು ವಿಭಾಗದವರು ಸತಾಯಿಸುತ್ತಿದ್ದಾರೆಂದು ಆರೋಪ ಮಾಡಿದ್ದಾರೆ. ಒಂದೆಡೆ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳ, ಮತ್ತೊಂದಡೆ ಪತಿಯ ಪಿಎಫ್ ಹಣ ನೀಡದೇ ಸತಾಯಿಸುತ್ತಿದ್ದಾರೆ. ಇದರಿಂದ ಬೇಸರಗೊಂಡು ದಯಾಮರಣಕ್ಕಾಗಿ ಡಿಸಿ ಅವರಿಗೆ ಮನವಿ ಸಲ್ಲಿಸಿದ್ದೇನೆ. ನನಗೆ ನ್ಯಾಯಕೊಡಿ ಇಲ್ಲವೇ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಮಹಿಳೆ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ದೋಸ್ತಿ ಕುಸ್ತಿ: ಬೀದಿಗೆ ಬಂತು ಜೆಡಿಎಸ್, ಬಿಜೆಪಿ ಅಂತಃ ಕಲಹ

ಬಿಸಿ ಹಾಲು ಚೆಲ್ಲಿ ಮಗುವಿಗೆ ಗಾಯ

ಅಂಗನವಾಡಿ ಕೇಂದ್ರದಲ್ಲಿ ಬಿಸಿ ಹಾಲು ಬಿದ್ದು ಮಗುವಿಗೆ ಗಾಯಗೊಂಡಿರುವ ಘಟನೆ, ಕೋಲಾರ ತಾಲೂಕಿನ ಕೊಂಡೇನಹಳ್ಳಿಯಲ್ಲಿ ನಡೆದಿದೆ. ಅಂಗನವಾಡಿ ಕಾರ್ಯಕರ್ತೆ ಆರತಿ ನಿರ್ಲಕ್ಷ್ಯದಿಂದ ದುರ್ಘಟನೆ ನಡೆದಿದೆ. ಹೆಣ್ಣು ಮಗುವಿನ ತೊಡೆ ಭಾಗದಲ್ಲಿ ಸುಟ್ಟು ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಅಂಗನವಾಡಿ ಕಾರ್ಯಕರ್ತೆ ಆರತಿಯನ್ನ ಕೆಲಸದಿಂದ ವಜಾಗೊಳಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆದೇಶಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ