ವಿಜಯಪುರ ಉಪ‌ನೋಂದಣಾಧಿಕಾರಿಗಳ ಕಚೇರಿಯಲ್ಲಿ ಲಂಚಾವತಾರ; ಸರ್ಕಾರಿ ಶುಲ್ಕಕ್ಕಿಂತಲು ಹೆಚ್ಚಿಗೆ ಹಣ ಪಡೆಯುತ್ತಿರುವ ಆರೋಪ

| Updated By: ವಿವೇಕ ಬಿರಾದಾರ

Updated on: Jun 06, 2022 | 7:56 PM

ವಿಜಯಪುರ ಜಿಲ್ಲೆಯ ಇಂಡಿ (Indi) ಉಪ‌ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮತ್ತೆ ಏಜೆಂಟರ್ ಹಾವಳಿ ಹೆಚ್ಚಾಗಿದ್ದು, ಸರ್ಕಾರಿ ಶುಲ್ಕದ ಹೊರತಾಗಿಯೂ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ.

ವಿಜಯಪುರ ಉಪ‌ನೋಂದಣಾಧಿಕಾರಿಗಳ ಕಚೇರಿಯಲ್ಲಿ ಲಂಚಾವತಾರ;  ಸರ್ಕಾರಿ ಶುಲ್ಕಕ್ಕಿಂತಲು ಹೆಚ್ಚಿಗೆ ಹಣ ಪಡೆಯುತ್ತಿರುವ ಆರೋಪ
ವಿಜಯಪುರ
Follow us on

ವಿಜಯಪುರ: ಜಿಲ್ಲೆಯ ಇಂಡಿ (Indi) ಉಪ‌ನೋಂದಣಾಧಿಕಾರಿಗಳ (sub registrar) ಕಚೇರಿಯಲ್ಲಿ ಮತ್ತೆ ಏಜೆಂಟರ್ ಹಾವಳಿ ಹೆಚ್ಚಾಗಿದ್ದು, ಸರ್ಕಾರಿ ಶುಲ್ಕದ ಹೊರತಾಗಿಯೂ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಹಕ್ಕು ಪತ್ರ ಬದಲಾವಣೆಗೆ ಇಂಡಿ ನಿವಾಸಿ ಗಣೇಶ್ ಎಂಬುವರ ಬಳಿ ಏಜೆಂಟ್ ಸಿದ್ದಪ್ಪ ಕೊಪ್ಪ‌ ಎಂಬುವವರಿಂದ 10-11 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಡಲಾಗಿದೆ. ಉಪನೋಂದಣಾಧಿಕಾರಿ ಮೊಹಮ್ಮದ ಪಟೇಲ್​ ಅನತಿಯಂತೆ ಲಂಚಾವತಾರ ನಡೆಯುತ್ತಿದೆ ಎಂದು ಸ್ಥಳಿಯರ ಆರೋಪ ಮಾಡುತ್ತಿದ್ದಾರೆ.

ಇದನ್ನು ಓದಿ: ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪ್ರಕರಣ: ನೂಪುರ್ ಶರ್ಮಾಗೆ ಸಮನ್ಸ್ ಕಳಿಸಲಿದೆ ಮುಂಬೈ ಪೊಲೀಸ್

ಏಜೆಂಟರುಗಳೇ ಕೂಡಿಕೊಂಡು ಸದ್ಗುರು ಸಮರ್ಥ ಸೌಹಾರ್ದ ಸಹಕಾರಿ‌ ಬ್ಯಾಂಕ್‌ ಸ್ಥಾಪಿಸಿಕೊಂಡಿದ್ದಾರೆ. ಅದೇ ಬ್ಯಾಂಕ್​ನಲ್ಲಿ ಕೆ2 ಚಲನ್ ಕಟ್ಟಬೇಕೆಂದು ನಿಯಮ ಜಾರಿ ಮಾಡಿದ್ದಾರೆ.  ಈ ಬಗ್ಗೆ ಮೊಹಮ್ಮದ್ ಪಟೇಲ್ ಮೇಲೆ ಜಿಲ್ಲಾ ನೋಂದಣಾಧಿಕಾರಿ ಯಾವುದೆ ಕ್ರಮ‌ ಕೈಗೊಂಡಿಲ್ಲ. ಜಿಲ್ಲಾ ನೋಂದಣಾಧಿಕಾರಿ ನಾಡಗೌಡ ಸಹ ಶಾಮೀಲು ಆಗಿರುವ  ಆರೋಪ ಕೇಳಿ ಬರುತ್ತಿದೆ. ಎಜೆಂಟರ್ ಮೂಲಕ ಸಬ್ ರೆಜಿಸ್ಟಾರ್ ಲಂಚದ ಹಣ ವಸೂಲಿ ಮಾಡುತ್ತಿದ್ದಾರಾ? ಕಳೆದ ಕೆಲ ದಿನಗಳ ಹಿಂದಷ್ಟೇ ತನ್ನ ‌ಕಿರಿಯ ಸಹೋದರ ಸಯ್ಯದ್‌ ಪಟೇಲ್ ಗೆ ಉಪ‌ನೋಂದಣಾಧಿಕಾರಿ ಕಚೇರಿಯಲ್ಲೇ ಕೆಲಸ ಮಾಡಲು ಅನಧಿಕೃತವಾಗಿ ಸಬ್ ರೆಜಿಸ್ಟಾರ್ ಮಹಮ್ಮದರಫಿ ಪಟೇಲ್ ಒಳ ಬಿಟ್ಟಿದ್ದರು.

ಇದನ್ನು ಓದಿ: ಕರೆನ್ಸಿಗಳಲ್ಲಿ ಗಾಂಧಿ ಚಿತ್ರವನ್ನು ಬದಲಿಸುವ ಪ್ರಸ್ತಾವ ಇಲ್ಲ ಎಂದ ಆರ್​ಬಿಐ

ಶಾಸಕರ ಕೊಠಡಿಯಲ್ಲಿ ಮಹಿಳಾ ಅಧಿಕಾರಿಯಿಂದ ಗದ್ದಲ

ಬೆಂಗಳೂರು: ಶಾಸಕ ದಡೆಸುಗೂರು ಕೊಠಡಿಗೆ ನುಗ್ಗಿ ಮಹಿಳಾ ಅಧಿಕಾರಿ ನ್ಯಾಯ ಕೊಡಿಸುವಂತೆ ಗದ್ದಲ ಎಬ್ಬಿಸಿದ್ದಾರೆ. ಅನ್ಯಾಯವಾಗಿದೆ ಎಂದು ಮಹಿಳೆ ಗದ್ದಲ ಮಾಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಶಾಸಕರ ಭವನದ ಭದ್ರತಾ ಪೊಲೀಸ್, ಮಹಿಳೆಯನ್ನ ಶಾಸಕರ ಭವನದಿಂದ ಕಳುಹಿಸಿದ್ದಾರೆ. ಮಹಿಳಾ ಅಧಿಕಾರಿ ಗದ್ದಲ ಹಿನ್ನೆಲೆ  ಶಾಸಕರ ಭವನದಿಂದ ಹೊರನಡೆದ ಶಾಸಕ ದಡೆಸುಗೂರುಬೀಗ ಹಾಕಿಕೊಂಡು ಹೊರಟು ಹೋಗಿದ್ದಾರೆ.

ಈ ಸಂಬಂಧ ಬಿಜೆಪಿ ಶಾಸಕ ದಡೆಸಗೂರು ಶಾಸಕ ಭವನದ ಕೊಠಡಿಗೆ ಪೊಲೀಸ್ ಭದ್ರತೆ ಹೆಚ್ಚಿದೆ. ಶಾಸಕರ ಕೊಠಡಿಯಲ್ಲಿ ಮಹಿಳಾ ಅಧಿಕಾರಿಯಿಂದ ಮಾತಿ‌ನ ಚಕಮಕಿ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.